Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ ವಿರುದ್ಧ ಚೆನ್ನೈ ಗೆದ್ದು ಬೀಗಲು, ಈ ಬೌಲರ್ ಕಾರಣ

ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌, 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಚೆನ್ನೈ ತಾನಾಡಿದ 4ನೇ ಪಂದ್ಯದಲ್ಲಿ ಮೊದಲ ಜಯ ದಾಖಲಿಸಿದ್ದು, ಅಂಕದ ಖಾತೆ ಓಪನ್ ಮಾಡಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ 5 ಬಾರಿಯ ಚಾಂಪಿಯನ್ಸ್‌ ಚೆನ್ನೈ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದೆ. ಹಾಗಿದ್ದರೆ ಈ ಪಂದ್ಯವನ್ನು ಚೆನ್ನೈ ಗೆದ್ದಿದ್ದು ಹೇಗೆ? ಪಂದ್ಯದ ತಿರುವಿಗೆ ಕಾರಣವಾದ ಅಂಶಗಳು ಯಾವುವು? ಎಂಬ ಬಗ್ಗೆ ವರದಿ ಇಲ್ಲಿದೆ.

ಲೀಗ್‌ ಹಂತದ ನಾಲ್ಕನೇ ಪಂದ್ಯದಲ್ಲಿ ಸಿಎಸ್‌ಕೆ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ತಂಡದ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್‌ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದರು. ಇದು ಈ ಐಪಿಎಲ್‌ನಲ್ಲಿ ಆಟಗಾರನೊಬ್ಬ ಬಾರಿಸಿದ ಮೊದಲ ಶತಕವಾಗಿದೆ. ಇನ್ನು ಯುವ ಆಟಗಾರ ಆಯುಷ್ ಮಾತ್ರೆ ಸಹ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212 ರನ್‌ ಸೇರಿಸಿತು. ಸಂಜು ಸ್ಯಾಮ್ಸನ್ ಶತಕ ಬಾರಿಸಿದ್ದು ರನ್‌ ವೇಗಕ್ಕೆ ಚುರುಕು ಮುಟ್ಟಿಸುವಂತೆ ಆಯಿತು. ಇದು ಸಹ ಸಿಎಸ್‌ಕೆ ಗೆಲುವಿಗೆ ವೇದಿಕೆ ಕಲ್ಪಿಸಿತು.

CSK vs DC

ಚೆನ್ನೈ ತಂಡ ಪವರ್‌ ಪ್ಲೇನಲ್ಲಿ ಡೆಲ್ಲಿ ತಂಡದ ಸ್ಟಾರ್ ಬ್ಯಾಟರ್‌ಗಳಿಗೆ ಖೆಡ್ಡಾ ತೋಡಿತು. ಡೆಲ್ಲಿ ತಂಡದ ಸ್ಟಾರ್ ಬ್ಯಾಟರ್‌ ಕೆಎಲ್ ರಾಹುಲ್, ಪತುಮ್ ನಿಸ್ಸಂಕಾ ಮೊದಲ 6 ಓವರ್‌ಗಳಲ್ಲೇ ಔಟ್ ಆದರು. ನಂತರ ಬಂದ ಸಮೀರ್‌ ರಿಜ್ವಿ, ನಾಯಕ ಅಕ್ಷರ್ ಪಟೇಲ್ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಒತ್ತಡದ ಸನ್ನಿವೇಶದಲ್ಲಿ ಬ್ಯಾಟಿಂಗ್ ಮಾಡುವ ಕಲೆ ಕರಗತ ಮಾಡಿಕೊಂಡಿರುವ ಡೇವಿಡ್ ಮಿಲ್ಲರ್ ಜವಾಬ್ದಾರಿ ಮರೆತರು. ಟ್ರಿಸ್ಟನ್ ಸ್ಟಬ್ಸ್ ಏಕಾಂಗಿ ಹೋರಾಟ ನಡೆಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಇವರೇ ಗೆಲುವಿನ ಹೀರೋ

ನಿಜಕ್ಕೂ ಚೆನ್ನೈ ತಂಡ ಸುಲಭವಾಗಿ ಪಂದ್ಯವನ್ನು ಗೆಲ್ಲುವಲ್ಲಿ ನೆರವಾಗಿದ್ದು ವೇಗದ ಬೌಲರ್ ಜೇಮಿ ಓವರ್‌ಟನ್‌. ತಮ್ಮ ಬಿಗುವಿನ ದಾಳಿಯ ಬಲದಿಂದ ಇವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು ಮೊದಲು ಸಮೀರ್ ರಿಜ್ವಿ ವಿಕೆಟ್‌ ಪಡೆದು ಅಬ್ಬರಿಸಿದರೆ, ಬಳಿಕ ಡೇವಿಡ್‌ ಮಿಲ್ಲರ್, ಅಕಿಬ್ ನಬಿ ಹಾಗೂ ಟ್ರಿಸ್ಟನ್‌ ಸ್ಟಬ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಒಂದು ವೇಳೆ ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್‌ ಕ್ರೀಸ್‌ನಲ್ಲಿ ಇದ್ದಿದ್ದರೆ ಲೆಕ್ಕಾಚಾರವೇ ಉಲ್ಟಾ ಆಗುತ್ತಿತ್ತು.

Story first published: Sunday, April 12, 2026, 5:55 [IST]
Other articles published on Apr 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+