CSK vs LSG IPL 2024: ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್
ಮಂಗಳವಾರ, ಏಪ್ರಿಲ್ 23ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರು ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದರು.
ರುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಸಿಎಸ್‌ಕೆ ನಾಯಕರಾದರು ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಎಲ್‌ಎಸ್‌ಜಿ ವಿರುದ್ಧದ ಪಂದ್ಯದ ವೇಳೆ ಬೃಹತ್ ಹೆಗ್ಗುರುತನ್ನು ತಲುಪಿದರು.

ಸಿಎಸ್‌ಕೆ ತಂಡದ ಇತರ ಬ್ಯಾಟರ್‌ಗಳು ಹೆಣಗಾಡುತ್ತಿರುವಾಗ, ನಾಯಕ ರುತುರಾಜ್ ಗಾಯಕ್ವಾಡ್ ತಮ್ಮ ದಿನದಂದು ತಂಡವನ್ನು ಶತಕದ ಮೂಲಕ ಮುನ್ನಡೆಸಿದರು.
ರುತುರಾಜ್ ಗಾಯಕ್ವಾಡ್ ಈ ಋತುವಿನಲ್ಲಿ ದೊಡ್ಡ ಸ್ಕೋರ್‌ಗಾಗಿ ಎದುರು ನೋಡುತ್ತಿದ್ದರು. ಇದೀಗ ಚೆಪಾಕ್‌ನಲ್ಲಿ ತುಂಬಿದ ತವರಿನ ಪ್ರೇಕ್ಷಕರ ಮುಂದೆ ಶತಕ ಬಾರಿಸಲು ಸಾಧ್ಯವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಮ್ಮ ಮೊದಲ ಐಪಿಎಲ್ ಪಂದ್ಯದ 16ನೇ ವಾರ್ಷಿಕೋತ್ಸವದ ವಿಶೇಷ ದಿನದಂದು, ಲಕ್ನೋ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ರುತುರಾಜ್ ಗಾಯಕ್ವಾಡ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ನಂತರ ರಚಿನ್ ರವೀಂದ್ರ ಬದಲಿಯಾಗಿ ಅವಕಾಶ ಪಡೆದ ಡೇರಿಲ್ ಮಿಚೆಲ್ ಜಾಸ್ತಿ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆದರೂ, ರುತುರಾಜ್ ಗಾಯಕ್ವಾಡ್ ಮತ್ತು ಡೇರಿಲ್ ಮಿಚೆಲ್ ಜೋಡಿ ಎರಡನೇ ವಿಕೆಟ್‌ಗೆ 45 ರನ್‌ಗಳ ಜೊತೆಯಾಟ ನಿರ್ಮಿಸಿದ ನಂತರ ಯಶ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ರುತುರಾಜ್ ಗಾಯಕ್ವಾಡ್ ಅವರು 28 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದ ನಂತರ, ಇನ್ನಿಂಗ್ಸ್ ವೇಗಗೊಳಿಸುವ ಜವಾಬ್ದಾರಿಯನ್ನು ಸ್ವತಃ ಹೆಗಲ ತೆಗೆದುಕೊಂಡರು. ಅರ್ಧಶತಕ ಗಳಿಸಿದ ನಂತರ, ರುತುರಾಜ್ ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ನಂತರ ಬಂದ ಶಿವಂ ದುಬೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳನ್ನು ದಂಡಿಸಿದರು ಮತ್ತು ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಮೇತ 66 ರನ್ ಗಳಿಸಿದರು. ಅಲ್ಲದೆ, ರುತುರಾಜ್ ಗಾಯಕ್ವಾಡ್ ಜೊತೆಗೂಡಿ 104 ರನ್‌ಗಳ ಜೊತೆಯಾಟ ನಿರ್ಮಿಸಿದರು.
ರುತುರಾಜ್ ಕೇವಲ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 108 ರನ್‌ಗಳ ಶತಕ ಬಾರಿಸಿದರು. ಅಂತಿಮವಾಗಿ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 211 ರನ್‌ಗಳ ಸವಾಲಿನ ಗುರಿ ನೀಡಿದೆ.
ಶತಕದೊಂದಿಗೆ ದಾಖಲೆ ನಿರ್ಮಿಸಿದ ರುತುರಾಜ್ ಗಾಯಕ್ವಾಡ್
ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಸಿಎಸ್‌ಕೆ ನಾಯಕನಾಗುವುದರ ಜೊತೆಗೆ, ರುತುರಾಜ್ ಗಾಯಕ್ವಾಡ್ 50-ಪ್ಲಸ್ ಸ್ಕೋರ್‌ಗಳೊಂದಿಗೆ ಮೊದಲ ಸಿಎಸ್‌ಕೆ ಬ್ಯಾಟರ್ ಎನಿಸಿದರು. ಫಾಫ್ ಡು ಪ್ಲೆಸಿಸ್ ಅವರ 16 ಅರ್ಧಶತಕಗಳ ದಾಖಲೆಯನ್ನು ಹಿಂದಿಕ್ಕಿದರು.
ರುತುರಾಜ್ ಗಾಯಕ್ವಾಡ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿಯ ನಂತರ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರು. ಸಿಎಸ್‌ಕೆ ತಂಡದ ಪರ 2021ರ ಆವೃತ್ತಿಯಲ್ಲಿ ಮೊದಲನೇ ಶತಕ ಗಳಿಸಿದ ನಂತರ, ಇದು ಅವರ ಎರಡನೇ ಐಪಿಎಲ್ ಶತಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications