CSK vs MI: ಮುಂಬೈ ಪಂದ್ಯವನ್ನು ಕೈ ಚೆಲ್ಲಲು ಏನು ಕಾರಣ?
19ನೇ ಆವೃತ್ತಿ ಐಪಿಎಲ್‌ನ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ಮುಂಬೈ ಇಂಡಿಯನ್ಸ್ (ಎಂಐ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳುವ ಆಸೆ ಎರಡೂ ತಂಡಗಳದ್ದಾಗಿತ್ತು. ಈ ಪಂದ್ಯದಲ್ಲಿ ಟಾಸ್ ಮುಂಬೈ ಇಂಡಿಯನ್ಸ್ ಪಾಲಾಯಿತು. ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು.
ಈ ಲೀಗ್‌ನಲ್ಲಿ ಎರಡನೇ ಪಂದ್ಯವನ್ನು ಆಡುತ್ತಿರುವ ವಿಲ್ ಜಾಕ್ಸ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಇದ್ದವು. ಆದರೆ ಈ ಎಲ್ಲ ನಿರೀಕ್ಷೆಗಳು ಹುಸಿಯಾದವು. ವಿಲ್ ಜಾಕ್ಸ್ 1 ರನ್ ಬಾರಿಸಿ ಔಟ್ ಆದರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕಲ್ಟನ್ ಅವರ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಇವರು 37 ರನ್‌ಗಳಿಗೆ ಔಟ್ ಆದರು. ನಮನ್ ಧೀರ್ 57 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 21 ರನ್ ಸಿಡಿಸಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡದ ಪರ ಸಂಜು ಸ್ಯಾಮ್ಸನ್ (11) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಉರ್ವಿಲ್ ಪಟೇಲ್ (12 ಎಸೆತ 24 ರನ್) ರನ್ ರೇಟ್ ಕುಗ್ಗಲು ಬಿಡಲೇ ಇಲ್ಲ. ಮೂರನೇ ವಿಕೆಟ್‌ಗೆ ನಾಯಕ ರುತುರಾಜ್ ಗಾಯಕ್ವಾಡ್ (48 ಎಸೆತ, ಅಜೇಯ 67) ಹಾಗೂ ಕಾರ್ತಿಕ್ ಶರ್ಮಾ (40 ಎಸೆತ, ಅಜೇಯ 54) ಭರ್ಜರಿ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ದಾಟಿಸಿದರು.
ಪಂದ್ಯಕ್ಕೆ ತಿರುವು ನೀಡಿದ ಅಂಶ ಯಾವುದು?
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಮಿಂಚಿದ್ದ ರಿಯಾನ್ ರಿಕಲ್ಟನ್ ಅವರನ್ನು ನೂರ್ ಅಹ್ಮದ್ ಲೆಂಥ್ ಎಸೆತವನ್ನು ಎಸೆದು ಖೆಡ್ಡಾ ತೋಡಿದರು. ರಿಕಲ್ಟನ್ 37 ರನ್‌ಗಳಿಗೆ ಔಟ್ ಆಗಿದ್ದು, ಮುಂಬೈ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿತು. ಅಲ್ಲದೆ ಮಿಡಲ್ ಆರ್ಡರ್ ಬ್ಯಾಟರ್‌ಗಳು ಜವಾಬ್ದಾರಿ ಮರೆತಿರುವುದೇ ಮುಂಬೈ ಪಂದ್ಯ ಕೈ ಚೆಲ್ಲಲು ಕಾರಣ.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159: ನಮನ್ ಧೀರ್ 57, ರಿಯಾನ್ ರಿಕಲ್ಟನ್ 37, ಸೂರ್ಯಕುಮಾರ್ ಯಾದವ್ 21, ಅನ್ಶುಲ್ ಕಾಂಬೋಜ್ 32ಕ್ಕೆ 3
ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲಿ 2 ವಿಕೆಟ್‌ಗೆ 160: ರುತುರಾಜ್ ಗಾಯಕ್ವಾಡ್ ಅಜೇಯ 67, ಕಾರ್ತಿಕ್ ಶರ್ಮಾ ಅಜೇಯ 54, ಜಸ್ಪ್ರೀತ್ ಬುಮ್ರಾ 20ಕ್ಕೆ 1
ಪಂದ್ಯದ ಫಲಿತಾಂಶ: ಸಿಎಸ್‌ಕೆಗೆ 8 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications