For Quick Alerts
ALLOW NOTIFICATIONS  
For Daily Alerts
 

IPL 2025: ಚೆನ್ನೈ ಪ್ಲೇ ಆಫ್ ಕಸನು ಭಗ್ನ; ಪಂಜಾಬ್‌ಗೆ ಭರ್ಜರಿ ಗೆಲುವು

ಐಪಿಎಲ್ 2025 ರ 49ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ರೇಸ್‌ನಲ್ಲಿ ಮುನ್ನಡೆದಿದೆ. ಮತ್ತೊಂದೆಡೆ, ತವರಿನಲ್ಲಿ ಸೋಲಿನ ಸರಣಿ ಮುಂದುವರೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಕರನ್ ಅವರ ಅರ್ಧಶತಕ ನೆರವಿನಿಂದ ಸವಾಲಿನ ಮೊತ್ತ ಗಳಿಸಿತು. ಚೆನ್ನೈ ತಂಡ 19.2 ಓವರ್‍‌ಗಳಲ್ಲಿ 190 ರನ್‌ಗಳಿಗೆ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 19.4 ಓವರ್‍‌ಗಳಲ್ಲಿ ವಿಕೆಟ್ ಕಳೆದುಕೊಂಡು 194 ರನ್ ಗಳಿಸಿ ಗೆಲುವು ಸಾಧಿಸಿದೆ.

CSK vs PBKS IPL 2025 Toss 2nd Match Report Score batting and bowling performance kannada

ಪಂಜಾಬ್ ಗೆಲುವು

ಚೆನ್ನೈ ನೀಡಿದ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ 44 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ನೀಡಿದರು. ಪ್ರಿಯಾಂಶ್ 15 ಎಸೆತಗಳಲ್ಲಿ 23 ರನ್ ಗಳಿಸಿದರು. ಇದಾದ ನಂತರ, ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿ ಪ್ರಭ್ಸಿಮ್ರಾನ್ ಜವಾಬ್ದಾರಿ ವಹಿಸಿಕೊಂಡು ತಂಡ ಸ್ಕೋರ್ ಅನ್ನು 116 ರ ಗಡಿ ದಾಟಿಸಿದರು.

ಪ್ರಭ್ಸಿಮ್ರಾನ್ 36 ಎಸೆತಗಳಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ನೆಹಾಲ್ ವಧೇರಾ ಕೂಡ 5 ಗಳಿಸಿ ಔಟಾದರು. ಆದರೆ ಅಯ್ಯರ್ ಇನ್ನಿಂಗ್ಸ್ ಅನ್ನು ಮುಂದುವರೆಸಿದರು. ಅಯ್ಯರ್ ಅವರಿಗೆ ಶಶಾಂಕ್ ಸಿಂಗ್ ಸಾಥ್ ನೀಡಿದರು. ಶಶಾಂಕ್ ಸಿಂಗ್ ಅದ್ಭುತವಾಗಿ ಅಡುವಾಗ 12 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.

ಶ್ರೇಯಸ್ ಅಯ್ಯರ್ ಕೂಡ ಕೊನೆಯಲ್ಲಿ ವಿಕೆಟ್ ಕಳೆದುಕೊಂಡರು. ಅವರು 41 ಎಸೆತಗಳಲ್ಲಿ 72 ರನ್ ಗಳಿಸಿದರು. ಸೂರ್ಯಾಂಶು ಶೆಡ್ಜ್ ಕೂಡ ರನ್ ಗಳಿಸುವ ವೇಗದಲ್ಲಿ 1 ರನ್ ಗಳಿಗೆ ಔಟಾದರು. ಕೊನೆಯ ಓವರ್‍‌ನಲ್ಲಿ ಮಾರ್ಕೊ ಜಾನ್ಸೆನ್ ಬೌಂಡರಿ ಬಾರಿಸಿ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಚೆನ್ನೈ ಪರ ಖಲೀಲ್ ಅಹ್ಮದ್ ಮತ್ತು ಮಥಿಶಾ ಪತಿರಾಣ ತಲಾ ಎರಡು ವಿಕೆಟ್ ಪಡೆದರು.

ಸ್ಯಾಮ್ ಕರನ್ ಅಬ್ಬರ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತೊಮ್ಮೆ ಶೇಖ್ ರಶೀದ್ ಮತ್ತು ಆಯುಷ್ ಮ್ಹಾತ್ರೆ ಇನ್ನಿಂಗ್ಸ್ ಆರಂಭಸಿದರು. ಮೊದಲೆರಡು ಓವರ್‍‌ಗಳಲ್ಲಿ ಇಬ್ಬರೂ ರನ್ ಗಳಿಸುವ ಬರದಲ್ಲಿ ಔಟಾದರು. ರಶೀದ್ 12 ಎಸೆತಗಳಲ್ಲಿ 11 ರನ್ ಗಳಿಸಿದರೆ, ಮ್ಹಾತ್ರೆ 6 ಎಸೆತಗಳಲ್ಲಿ 7 ರನ್ ಗಳಿಸಿದರು. ಬಳಿಕ ಬಂದ ರವೀಂದ್ರ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಜಡೇಜಾ 12 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡ 48 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನಿಂಗ್ಸ್ ಜವಾಬ್ದಾರಿಯನ್ನು ಸ್ಯಾಮ್ ಕರನ್ ಮತ್ತು ಡೆವಾಲ್ಡ್ ಬ್ರೆವಿಸ್ ಹೊತ್ತುಕೊಂಡರು. ಡೆವಾಲ್ಡ್ ಬ್ರೆವಿಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಚೆನ್ನೈ ತಂಡಕ್ಕೆ ನೆರವಾದರು. ಡೆವಾಲ್ಡ್ ಬ್ರೆವಿಸ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು. ಇತ್ತ ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಯಾಮ್ ಕರನ್ ಚೆನ್ನೈ ತಂಡ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾದರು. ಸ್ಯಾಮ್ ಕರನ್ 47 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 88 ರನ್ ಗಳಿಸಿ ಔಟಾದರು.

ಸ್ಯಾಮ್ ಕರನ್ ಮತ್ತು ಡೆವಾಲ್ಡ್ ಬ್ರೆವಿಸ್ ಜೋಡಿ ಔಟಾದ ಬಳಿಕ ಬಂದ ಬ್ಯಾಟರ್ಸ್ ಚೆನ್ನೈ ಪರ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಯುಜ್ವೇಂದ್ರ ಚಹಾಲ್ ಅವಕಾಶ ನೀಡಲಿಲ್ಲ. ಯುಜ್ವೇಂದ್ರ ಚಾಹಲ್ 19ನೇ ಓವರ್‌ನಲ್ಲಿ ತಮ್ಮ ಸ್ಪಿನ್‌ ಮ್ಯಾಜಿಕ್ ತೋರಿಸಿ, ಹ್ಯಾಟ್ರಿಕ್ ವಿಕೆಟ್ ಪಡೆದರು. ಈ ಓವರ್ ಒಟ್ಟು ಅವರು ನಾಲ್ಕು ವಿಕೆಟ್ ಕಬಳಿಸಿದರು. ಮೊದಲು ಎಂಎಸ್ ಧೋನಿ, ನಂತರ ದೀಪಕ್ ಹೂಡಾ ಮತ್ತು ಅನ್ಶುಲ್ ಕಾಂಬೋಜ್ ಕ್ಲೀನ್ ಬೌಲ್ಡ್ ಆದರು. ಅವರು ನೂರ್ ಅಹ್ಮದ್ ಅವರ ಕೊನೆಯ ವಿಕೆಟ್ ಪಡೆದು ಪೆವಿಲಿಯನ್‌ಗೆ ಕಳುಹಿಸಿದರು.

ಉಭಯ ತಂಡಗಳ ಪ್ಲೇಯಿಂಗ್-11

ಚೆನ್ನೈ ಸೂಪರ್ ಕಿಂಗ್ಸ್: ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕುರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್‌ಕೀಪರ್), ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಣ

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್ಜಾಯ್, ಸೂರ್ಯಾಂಶ್ ಶೆಡ್ಜ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್.

Story first published: Wednesday, April 30, 2025, 21:37 [IST]
Other articles published on Apr 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+