Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs PBKS: ಮೊದಲ ಗೆಲುವಿನ ಹುಡುಕಾಟದಲ್ಲಿ ಚೆನ್ನೈ

ಚೆನ್ನೈ: 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಶುಭಾರಂಭ ಮಾಡುವಲ್ಲಿ ವಿಫಲವಾಗಿದೆ. ರಾಜಸ್ಥಾನ ರಾಯಲ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಸಿಎಸ್‌ಕೆ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ತವರಿನಲ್ಲಿ ಚೆನ್ನೈ ತಂಡ, ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸವಾಲು ಎಸೆಯಲಿದೆ.

ಒಟ್ಟಾರೆ ಐಪಿಎಲ್‌ನಲ್ಲಿ ಎರಡೂ ತಂಡಗಳು 32 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ ಹಾಗೂ ಚೆನ್ನೈ ತಂಡಗಳು ತಲಾ 16 ಪಂದ್ಯಗಳನ್ನು ಗೆದ್ದಿವೆ. ಎರಡೂ ತಂಡಗಳಲ್ಲೂ ಭರವಸೆಯ ಆಟಗಾರರ ದಂಡೇ ಇದೆ. ಹೀಗಾಗಿ ಪಂದ್ಯ ರೋಚಕತೆ ಹುಟ್ಟಿಸಿದೆ. ಚೆನ್ನೈ ತಂಡಕ್ಕೆ ಕೂಲ್ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿ ಕಾಡಲಿದೆ.

CSK vs PBKS

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ರಾಜಸ್ಥಾನ್ ವಿರುದ್ಧ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರ ಮೇಲೆ ಒತ್ತಡವಿದೆ. ಭರವಸೆಯ ಆಟಗಾರ ಸಂಜು ಸ್ಯಾಮ್ಸನ್‌, ನಾಯಕ ರುತುರಾಜ್ ಗಾಯಕ್ವಾಡ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಅಲ್ಲದೆ ಪವರ್ ಪ್ಲೇನ ಸಂಪೂರ್ಣ ಲಾಭ ಪಡೆಯುವ ಅನಿವಾರ್ಯತೆ ಇದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಯುಷ್ ಮಾತ್ರೆ ಹಾಗೂ ಮ್ಯಾಥ್ಯೂ ಶಾರ್ಟ್‌ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ಶಿವಂ ದುಬೆ ಆಕರ್ಷಣೆ

ಯುವ ಆಟಗಾರ ಕಾರ್ತಿಕ್ ಶರ್ಮಾ ನೆಲಕಚ್ಚಿನಿಂತು ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಮುಂದಿನ ಪಂದ್ಯಗಳಲ್ಲಿ ಇವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಗಬಹುದು. ಇನ್ನು ಸರ್ಫರಾಜ್ ಖಾನ್ ಅವರಿಗೆ ಆಡುವ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆಲ್‌ರೌಂಡರ್ ಶಿವಂ ದುಬೆ ಪವರ್‌ ಹಿಟ್‌ಗಳ ಮೂಲಕ ತಂಡಕ್ಕೆ ಆಧಾರವಾಗಬೇಕಿದೆ. ಕಳೆದ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ನಡೆಸಿದ್ದ ಜೇಮಿ ಓವರ್‌ಟನ್‌ ಭರವಸೆ ಮೂಡಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಮ್ಯಾಟ್‌ ಹೆನ್ರಿ ಕಳೆದ ಪಂದ್ಯದಲ್ಲಿ ರನ್‌ಗಳನ್ನ ನೀಡಿ ಕೈ ಸುಟ್ಟುಕೊಂಡಿದ್ದರು. ಇವರು ಲಯಬದ್ಧ ದಾಳಿ ಸಂಘಟಿಸುವ ಅನಿವಾರ್ಯತೆ ಇದೆ. ಖಲೀಲ್ ಅಹ್ಮದ್ ಕಳೆದ ಪಂದ್ಯದಲ್ಲಿ ವಿಕೆಟ್‌ ಬೇಟೆ ನಡೆಸದೇ ಇದ್ದರೂ ಸಹ ರನ್‌ ತಡೆಯುವಲ್ಲಿ ಸಫಲರಾಗಿದ್ದರು. ಅನ್ಶುಲ್‌ ಕಂಬೋಜ್‌, ನೂರ್ ಅಹ್ಮದ್‌ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದಾಗ ಮೊದಲ ಗೆಲುವಿನ ಆಸೆ ಫಲಿಸುತ್ತದೆ.

ಭರವಸೆ ಮೂಡಿಸಿರುವ ಕೂಪರ್

ಗುಜರಾತ್ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಕಣಕ್ಕೆ ಇಳಿಯುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ಕಿಂಗ್ಸ್‌ ಆರಂಭಿಕರಾದ ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್‌ ಸಿಂಗ್ ಪವರ್‌ ಪ್ಲೇ ಲಾಭ ಪಡೆಯಬೇಕಿದೆ. ಪದಾರ್ಪಣಾ ಪಂದ್ಯದಲ್ಲಿ ಮೋಡಿ ಮಾಡಿದ ಕೂಪರ್ ಕಾನೋಲಿ ಚೆನ್ನೈ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟುವ ಲೆಕ್ಕಾಚಾರದಲ್ಲಿದ್ದಾರೆ. ಭರವಸೆಯ ಬ್ಯಾಟರ್‌ಗಳಾದ ಶಶಾಂಕ್ ಸಿಂಗ್, ನೇಹಲ್ ವಧೇರಾ, ಮಾರ್ಕಸ್ಟ್ ಸ್ಟೋಯ್ನಿಸ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬೇಕಿದೆ.

CSK vs PBKS

ಬೌಲಿಂಗ್ ವಿಭಾಗದಲ್ಲಿ ಎಲ್ಲರ ಕಣ್ಣುಗಳು ಕನ್ನಡಿಗ ವೈಶಾಖ್ ವಿಜಯ್‌ಕುಮಾರ್ ಮೇಲೆ ನೆಟ್ಟಿರಲಿವೆ. ಇವರು ಕಳೆದ ಪಂದ್ಯದಲ್ಲಿ ಬಿಗುವಿನ ದಾಳಿ ನಡೆಸಿ ಮೂರು ವಿಕೆಟ್‌ ಪಡೆದಿದ್ದರು. ಅರ್ಷದೀಪ್‌ ಸಿಂಗ್ ಸಹ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಯುಜುವೇಂದ್ರ ಚಾಹಲ್‌ ಸ್ಪಿನ್ ಮೋಡಿಯಿಂದ ಎದುರಾಳಿಗಳಿಗೆ ಖೆಡ್ಡ ತೋಡಬೇಕಿದೆ.

ಪಂದ್ಯದ ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಜಿಯೋ ಹಾಟ್‌ ಸ್ಟಾರ್‌

Story first published: Thursday, April 2, 2026, 18:48 [IST]
Other articles published on Apr 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+