RCB vs CSK: ಟಾಸ್‌ಗಿಲ್ಲ ಧೋನಿ, ಕೊಹ್ಲಿ: ಅಭಿಮಾನಿಗಳ ಭಾವುಕ ಪ್ರತಿಕ್ರಿಯೆ!


ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಎರಡು ತಂಡಗಳ ನಡುವಿನ ಕದನಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಟಾಸ್ ಸಂದರ್ಭದಲ್ಲಿ ಈ ಹಿಂದಿನ ಸಿಎಸ್‌ಕೆ vs ಆರ್‌ಸಿಬಿ ಮುಖಾಮುಖಿಯಲ್ಲಿ ಸಾಮಾನ್ಯವಾಗಿದ್ದ ಒಮದು ಪ್ರಮುಖ ದೃಶ್ಯವನ್ನು ಈ ಬಾರಿ ಇರಲಿಲ್ಲ. ಹೀಗಾಗಿ ಅಭಿಮಾನಿಗಳು ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸುದೀರ್ಘ ಕಾಲದಿಂದ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳನ್ನು ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಮುನ್ನಡೆಸುತ್ತಿದ್ದರು. ಭಾರತೀಯ ಕ್ರಿಕೆಟ್‌ನ ದೃವತಾರೆಯರಾದ ಈ ಇಬ್ಬರು ಆಟಗಾರರ ಮಧ್ಯೆ ಅದ್ಭುತ ಬಾಂಧವ್ಯವಿದ್ದು ಟಾಸ್ ಸಂದರ್ಭದಲ್ಲಿ ಇಬ್ಬರ ಆತ್ಮೀಯ ಬಾಂಧವ್ಯವನ್ನು ಕಣ್ತುಂಬಿಕೊಳ್ಳುವುದು ಅಭಿಮಾನಿಗಳ ಪಾಲಿಗೆ ಸಂಭ್ರಮವಾಗಿತ್ತು. ಆದರೆ ಈ ಬಾರಿ ಎರಡೂ ತಂಡಗಳ ನಾಯಕರು ಬದಲಾಗಿದ್ದು ಇಬ್ಬರು ಕೂಡ ಕೇವಲ ಆಟಗಾರರಾಗಿ ತಂಡದ ಭಾಗವಾಗಿದ್ದಾರೆ.
ಟಾಸ್ ಸಂದರ್ಭದಲ್ಲಿ ಇಬ್ಬರು ದಿಗ್ಗಜ ಆಟಗಾರರು ಕಣಕ್ಕಿಳಿಯದ ಕ್ಷಣದ ಬಗ್ಗೆ ಅಭಿಮಾನಿಗಳು ಭಾವುಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಹಾಗೂ ಧೋನಿಯಿಲ್ಲದ ಟಾಸ್ ಕ್ಷಣವನ್ನು ಆನಂದಿಸಲಾರೆ ಎಂದು ಓರ್ವ ಅಭಿಮಾನಿ ಹೇಳಿದ್ದರೆ, ತಾತ್ಕಾಲಿಕ ನಾಯಕರಾಗಿ ಧೋನಿ, ಕೊಹ್ಲಿಯನ್ನು ಕಳುಹಿಸಬಹುದೇ? ಎಂದು ಮತ್ತೋರ್ವ ಅಭಿಮಾನಿ ಬೇಡಿಕೆ ಮುಂದಿಟ್ಟಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಭಾರಿ ಆರ್‌ಸಿಬಿ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಫಾಪ್ ಡು ಪ್ಲೆಸಿಸ್ ಈ ಬಾರಿ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಡು ಪ್ಲೆಸಿಸ್ 600ಕ್ಕೂ ಅಧಿಕ ರನ್‌ಗಳಿಸಿದ್ದರು. ಈ ಬಗ್ಗೆ ಮಾತನಾಡಿದ ಫಾಫ್ "ನನಗೆ ಅವರು ಗೊತ್ತು, ಹಾಗೆಯೇ ಅವರಿಗೂ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಇದೊಂತರಾ ನನ್ನ ಸೋದರರ ವಿರುದ್ಧ ಆಡಿದಂತೆ" ಎಂದಿದ್ದಾರೆ ಫಾಫ್ ಡು ಪ್ಲೆಸಿಸ್.
ಸಿಎಸ್‌ಕೆ ಆಡುವ ಬಳಗ: ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ
ಬೆಂಚ್: ಆಡಮ್ ಮಿಲ್ನೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ತುಷಾರ್ ದೇಶಪಾಂಡೆ, ಹರಿ ನಿಶಾಂತ್, ಎನ್ ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಕೆಎಂ ಆಸಿಫ್, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ
ಚೆನ್ನೈ ಸೂಪರ್ ಕಿಂಗ್ಸ್: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್
ಬೆಂಚ್: ಕರ್ನ್ ಶರ್ಮಾ, ಜೇಸನ್ ಬೆಹ್ರೆನ್ಡಾರ್ಫ್, ಚಮಾ ವಿ ಮಿಲಿಂದ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ಅನೀಶ್ವರ್ ಗೌತಮ್, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications