ಐಪಿಎಲ್ 2024ಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಇಂದು ಚೆನ್ನೈನ ಎಂ.ಚಿದಂಬರಂ ಅಂಗಳದಲ್ಲಿ ನಡೆಯುತ್ತಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಲಾಢ್ಯವಾಗಿದೆ. ಆದರೆ ಆರ್‌ಸಿಬಿ ಈ ಗೆಲುವಿನೊಂದಿಗೆ ಅಭಿಯಾನವನ್ನು ಆರಂಭಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ನೂತನ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ ಈ ಪಂದ್ಯ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಆರ್‌ಸಿಬಿ ತಂಡದ ಚುಕ್ಕಾಣಿಯನ್ನು ಫಾಫ್ ಡುಪ್ಲೇಸಿಸ್ ವಹಿಸಲಿದ್ದಾರೆ.

ರಚಿನ್ ರವೀಂದ್ರ ಪದಾರ್ಪಣೆ
ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಚಿನ್ ರವೀಂದ್ರ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ. ಇವರು ಆರ್‌ಸಿಬಿ ವಿರುದ್ಧ ಐಪಿಎಲ್ 2024ರಲ್ಲಿ ಮೊದಲ ಬಾರಿಗೆ ಹಳದಿ ಜೆರ್ಸಿಯಲ್ಲಿ ಕಾನೀಸಿಕೊಳ್ಳಲಿದ್ದಾರೆ.
ನಾನು ಅದೃಷ್ಟಶಾಲಿಯಾಗಿದ್ದೇನೆ. ಕಳೆದ ವಾರ ನನಗೆ ನಾಯಕತ್ವ ಸಿಕ್ಕಿತು, ಆದರೆ ಕಳೆದ ವರ್ಷವೇ ಮಹಿ ಭಾಯ್ ಸುಳಿವು ನೀಡಿದ್ದರು. ಎಲ್ಲರಿಗೂ ಇಲ್ಲಿ ಅನುಭವವಾಗಿದೆ. ನಾವು ಪತಿರಾನ ಮತ್ತು ಕಾನ್ವೇಯನ್ನು ಕಳೆದುಕೊಳ್ಳಲಿದ್ದೇವೆ ಎಂದು ಟಾಸ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ನಾಯಕ ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಬೆಂಗಳೂರು ತಂಡ: ಫಾಫ್ ಡುಪ್ಲೇಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಗ್ಲೇನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಅರ್ಜುನ್ ರಾವತ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಮಯಾಂಕ್ ದಗಾರ್,
ಚೆನ್ನೈ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್, ಸಮಿರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ಮಹೀಶ್ ತೀಕ್ಷಣ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮನಾ,