17ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ ಸಿಕ್ಕಿದೆ. ಎಲ್ಲ ತಂಡಗಳು ಈಗಾಗಲೇ ತಲಾ ಒಂದೊಂದು ಪಂದ್ಯನ್ನಾದರೂ ಪಂದ್ಯವನ್ನು ಆಡಿವೆ. ಈ ಮಧ್ಯ ಐಪಿಎಲ್ ಅಧಿಕೃತ ಪ್ರಸಾರಕರು ನೀಡಿದ ಮಾಹಿತಿ ನಿಜಕ್ಕೂ ಈ ಲೀಗ್ ಎಷ್ಟು ಖ್ಯಾತಿ ಪಡೆದಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
17ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ಏಪ್ರಿಲ್ 22 ರಂದು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಿದವು. ಈ ಪಂದ್ಯ ಈಗ ದಾಖಲೆಯ ಪುಟ ಸೇರಿದೆ. ಗುರುವಾರ ಲೀಗ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಡಿಸ್ನಿ ಸ್ಟಾರ್ ನೆಟ್‌ವರ್ಕ್ ಅಂಕಿ ಅಂಶವನ್ನು ಬಹಿರಂಗ ಪಡಿಸಿದೆ. ಈ ಪ್ರಕಾರ ಮೊದಲ ಪಂದ್ಯವನ್ನು ಸುಮಾರು 16 ಕೋಟಿ 80 ಲಕ್ಷ ವೀಕ್ಷಿಸಿದ್ದಾರೆ.
1268 ಕೋಟಿ ನಿಮಿಷ ವೀಕ್ಷಣೆ

ಮೊದಲ ಪಂದ್ಯವು 1276 ಕೋಟಿ ನಿಮಿಷಗಳ ವೀಕ್ಷಣೆಗೆ ಒಳಪಟ್ಟಿದೆ ಎಂದು ಲೀಗ್‌ನ ಅಧಿಕೃತ ಬ್ರಾಡ್‌ಕಾಸ್ಟರ್ ಡಿಸ್ನಿ ಸ್ಟಾರ್ ನೆಟ್‌ವರ್ಕ್ ತಿಳಿಸಿದೆ. ಇದು ಯಾವುದೇ IPL ಋತುವಿನ ಆರಂಭಿಕ ದಿನದ ಗರಿಷ್ಠ ಅಂಕಿ ಅಂಶವಾಗಿದೆ. ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಯುಎಇಯಲ್ಲಿ ನಡೆದ ಐಪಿಎಲ್ -2020 ಸೀಸನ್ ಅನ್ನು ಡೇಟಾ ಒಳಗೊಂಡಿಲ್ಲ. ಮೊದಲ ದಿನ ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ ಒಟ್ಟು 61 ಮಿಲಿಯನ್ ವೀಕ್ಷಕರು ಸಿಮುಲ್‌ಕಾಸ್ಟ್ ಅನ್ನು ವೀಕ್ಷಿಸಿದ್ದಾರೆ.
ಭರ್ಜರಿ ಮನೋರಂಜನೆ
ಈ ಋತುವಿನ ಆರಂಭಿಕ ಪಂದ್ಯದಲ್ಲಿ ನೂತನ ನಾಯಕ ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ಆರು ವಿಕೆಟ್‌ಗಳಿಂದ ಪಂದ್ಯ ಗೆದ್ದು ಶುಭಾರಂಭ ಮಾಡಿದೆ. 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 17 ನೇ ಆವೃತ್ತಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಗಳಿಸಿತು. ಉತ್ತರವಾಗಿ ಚೆನ್ನೈ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಇನ್ನು ಈ ಲೀಗ್ ಆರಂಭವಾಗಿದ್ದು ಅಷ್ಟೇ. ಈ ಲೀಗ್ ಹೀಟ್ ಪಡೆಯುತ್ತಿದ್ದಂತೆ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಲೀಗ್‌ನ ಫೈನಲ್ ಪಂದ್ಯವನ್ನು ಎಷ್ಟು ಜನ ವೀಕ್ಷಿಸುತ್ತಾರೆ ಎಂಬ ಲೆಕ್ಕಾಚಾರಗಳನ್ನು ಅಭಿಮಾನಿಗಳು ಹಾಕಲು ಆರಂಭಿಸಿದ್ದಾರೆ.