For Quick Alerts
ALLOW NOTIFICATIONS  
For Daily Alerts
 

IPL 2023: ಸಿಎಸ್‌ಕೆ ವಿರುದ್ಧ ಗೆದ್ದರೂ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ!

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ನ ಆರಂಭವಾಗಿ ಈಗಾಗಲೇ ಎರಡು ವಾರಗಳು ಕಳೆದಿವೆ. ಇದರಲ್ಲಿ ಕೆಲವು ಪಂದ್ಯಗಳು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿವೆ. ಕೆಲವು ಪಂದ್ಯಗಳು ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಕುತೂಹಲಕಾರಿಯಾಗಿರುತ್ತವೆ. ಇದಕ್ಕೂ ಬುಧವಾರದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವೂ ಹೊರತಾಗಿರಲಿಲ್ಲ.

ಬುಧವಾರ, ಏಪ್ರಿಲ್ 12ರಂದು ನಾಲ್ಕು ಬಾರಿಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಐಪಿಎಲ್ 17ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸಲು ವಿಫಲವಾದ ಕಾರಣ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ.

CSK vs RR IPL 2023: Rajasthan Royals Captain Sanju Samson Fined Rs 12 Lakh For Slow Over Rate

ಆದರೂ, ಈ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ರಾಜಸ್ಥಾನ ರಾಯಲ್ಸ್ ತಂಡ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು ಮತ್ತು ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಎರಡನೇ ಇನ್ನಿಂಗ್ಸ್ ವೇಳೆ ನಿಧಾನಗತಿಯ ಓವರ್‌ರೇಟ್ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಫೀಲ್ಡಿಂಗ್ ತಂಡವು ತನ್ನ 20 ಓವರ್‌ಗಳನ್ನು ನಿಗದಿತ ಸಮಯದೊಳಗೆ ಬೌಲ್ ಮಾಡಲು ಸಾಧ್ಯವಾಗದಿದ್ದಾಗ ನಿಧಾನಗತಿ ಓವರ್-ರೇಟ್ ಸಂಭವಿಸುತ್ತದೆ. ಐಪಿಎಲ್‌ನ ಪ್ರತಿ ಪಂದ್ಯದಲ್ಲಿ ತಂಡವು 90 ನಿಮಿಷಗಳಲ್ಲಿ 20 ಓವರ್‌ಗಳನ್ನು ಬೌಲ್ ಮಾಡಬೇಕಾಗಿರುತ್ತದೆ. 90 ನಿಮಿಷಗಳ ಆಟದ ಅವಧಿಯಲ್ಲಿ ಕಾರ್ಯತಂತ್ರದ ಅವಧಿಗೆ ಐದು ನಿಮಿಷಗಳ ಅವಧಿಯನ್ನು ಒಳಗೊಂಡಿರುತ್ತದೆ.

CSK vs RR IPL 2023: Rajasthan Royals Captain Sanju Samson Fined Rs 12 Lakh For Slow Over Rate

"ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾಗಿರುವುದರಿಂದ, ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ," ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮೊದಲು ಏಪ್ರಿಲ್ 10ರಂದು ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡನೆಗೆ ಒಳಗಾದ ಮೊದಲ ನಾಯಕ ಎನಿಸಿದ್ದಾರೆ. ನಿಗದಿತ ಸಮಯಕ್ಕಿಂತ ಮೊದಲು ಅಂತಿಮ ಓವರ್ ಮುಗಿಸಲು ವಿಫಲವಾದ ಕಾರಣ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

CSK vs RR IPL 2023: Rajasthan Royals Captain Sanju Samson Fined Rs 12 Lakh For Slow Over Rate

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೆಚ್ಚುವರಿ ಫೀಲ್ಡರ್ ಅನ್ನು 30-ಯಾರ್ಡ್ ವೃತ್ತದೊಳಗೆ ಕರೆತರಲಾಯಿತು. ಅಂತಿಮವಾಗಿ ಎಲ್‌ಎಸ್‌ಜಿ ಉತ್ತಮ ಪ್ರದರ್ಶನ ನೀಡಿತು ಮತ್ತು ಕೊನೆಯ ಎಸೆತದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಒಂದು ವಿಕೆಟ್‌ನಿಂದ ಸೋಲಿಸಿತು.

ರಾಜಸ್ಥಾನ ತಂಡಕ್ಕೆ ರೋಚಕ ಗೆಲುವು
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಜೋಸ್ ಬಟ್ಲರ್ ಅವರ ಅರ್ಧಶತಕ ಮತ್ತು ಶಿಮ್ರಾನ್ ಹೆಟ್ಮೆಯರ್ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಸಿಎಸ್‌ಕೆ ತಂಡಕ್ಕೆ 176 ರನ್‌ಗಳ ಗುರಿಯನ್ನು ನೀಡಲಾಗಿತ್ತು.

ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 176 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗೆ 172 ರನ್ ಗಳಿಸಿತು ಮತ್ತು ತವರಿನಲ್ಲಿಯೇ 3 ರನ್‌ಗಳಿಂದ ಪರಾಭವಗೊಂಡಿತು.

Story first published: Thursday, April 13, 2023, 16:17 [IST]
Other articles published on Apr 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+