CSK vs SRH: ಪ್ಲೇ ಪ್ರವೇಶಿಸಿದ ಸನ್‌ರೈಸರ್ಸ್: ಇಶಾನ್ ಅರ್ಧಶತಕದ ಮಿಂಚು
ಚೆನ್ನೈ: ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 63ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಹಸಿರಾಗಿರಿಸಿಕೊಂಡಿದೆ. ಈ ಸೋಲು ಚೆನ್ನೈ ತಂಡದ ಪ್ಲೇ ಆಫ್ ಕನಸಿಗೆ ಪೆಟ್ಟು ಬಿದ್ದಿದೆ.
ಚೆನ್ನೈ ನೀಡಿದ್ದ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಚೆನ್ನೈ ಮೊದಲ ವಿಕೆಟ್‌ನ್ನು 2.3 ಓವರ್‌ಗಳಲ್ಲಿ ಪಡೆಯಿತು. ಎರಡನೇ ವಿಕೆಟ್‌ಗೆ ಹೆನ್ರಿಕ್ ಕ್ಲಾಸೆನ್ ಹಾಗೂ ಇಶಾನ್ ಕಿಶನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 31 ಎಸೆತಗಳಲ್ಲಿ 38 ರನ್ ಸೇರಿಸಿತು. ಅಭಿಷೇಕ್ ಶರ್ಮಾ 26 ರನ್ ಬಾರಿಸಿದಾಗ ಅಕಿಲ್ ಹುಸೇನ್ ಅವರು ತೋಡಿದ ಖೆಡ್ಡಾಗೆ ಬಲಿಯಾದರು.

3ನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ ಸಿಎಸ್‌ಕೆ ಬೌಲರ್‌ಗಳನ್ನು ಕಾಡಿತು. ಈ ಜೋಡಿ 41 ಎಸೆತಗಳಲ್ಲಿ 75 ರನ್ ಸೇರಿಸಿತು. ಹೆನ್ರಿಕ್ ಕ್ಲಾಸೆನ್ 26 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿದ್ದಾಗ ನೂರ್ ಅಹ್ಮದ್ ತೋಡಿದ ಖೆಡ್ಡಾಗೆ ಬಲಿಯಾದರು.
ಇಶಾನ್ ಅರ್ಧಶತಕ
ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತಮ್ಮ ನೈಜ ಆಟವನ್ನು ಆಡಿದರು. ಇವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿ ಅಬ್ಬರಿಸಿದರು. ಇವರು 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ಅನ್ಶುಲ್ ಕಾಂಬೋಜ್ ಅವರಿಗೆ ವಿಕೆಟ್ ಒಪ್ಪಿಸಿದರು. ನಿತೀಶ್ ಕುಮಾರ್ ರೆಡ್ಡಿ (11), ಸಲಿಲ್ ಆರೋರಾ (ಅಜೇಯ 10), ಆರ್ ಸ್ಮರಣ್ (ಅಜೇಯ 5) ತಂಡದ ಜಯದಲ್ಲಿ ಮಿಂಚಿದರು. ಸನ್‌ರೈಸರ್ಸ್ ಹೈದರಾಬಾದ್ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 181 ರನ್ ಸೇರಿಸಿ ಜಯ ಸಾಧಿಸಿತು.ಈ ಗೆಲುವಿನ ಮೂಲಕ ಹೈದರಾಬಾದ್ ತಂಡ ಆಡಿದ 13 ಪಂದ್ಯಗಳಲ್ಲಿ 8 ಜಯ ಸಾಧಿಸಿದ್ದು, 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಭದ್ರ ಪಡಿಸಿಕೊಂಡಿದ್ದು ಪ್ಲೇ ಆಫ್ ಪ್ರವೇಶಿಸಿದೆ. ಈ ಜಯದೊಂದಿಗೆ ಗುಜರಾತ್ ಟೈಟಾನ್ಸ್ ಸಹ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ.
ಜವಾಬ್ದಾರಿ ಮರೆತ ಬ್ಯಾಟರ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಸಂಜು ಸ್ಯಾಮ್ಸನ್ (27) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಭರವಸೆಯ ಯುವ ಆಟಗಾರ ಉರ್ವಿಲ್ ಪಟೇಲ್ (13) ಜವಾಬ್ದಾರಿ ಮರೆತರು. ಈ ಲೀಗ್‌ನಲ್ಲಿ ದೊಡ್ಡ ಇನಿಂಗ್ಸ್‌ಗಳನ್ನು ಆಡುವ ಮೂಲಕ ಭರವಸೆ ಮೂಡಿಸಿದ್ದ ಕಾರ್ತಿಕ್ ಶರ್ಮಾ ಅವರ ಆಟ 32 ರನ್‌ಗಳಿಗೆ ಕೊನೆಯಾಯಿತು. ರುತುರಾಜ್ ಗಾಯಕ್ವಾಡ್ (15) ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.

5ನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಡೆವಾಲ್ಡ್ ಬ್ರೆವಿಸ್ ಜೋಡಿ 38 ಎಸೆತಗಳಲ್ಲಿ 59 ರನ್ ಸೇರಿಸಿತು. ಡೆವಾಲ್ಡ್ ಬ್ರೆವಿಸ್ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿದರು. ಶಿವಂ ದುಬೆ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 28 ರನ್ ಸಿಡಿಸಿದರು. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 180 ರನ್ ಸೇರಿಸಿತು. ಎಸ್‌ಆರ್‌ಎಚ್ ತಂಡದ ಪರ ಪ್ಯಾಟ್ ಕಮಿನ್ಸ್ 3, ಸಕಿಬ್ ಹುಸೇನ್ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications