ವೇಗಿಗಳ ಪರಿಪೂರ್ಣ ಭಾರತ ಕ್ರಿಕೆಟ್ ತಂಡ ದಾಳಿಗೆ ಸಜ್ಜಾಗಿದೆ: ಸಚಿನ್


ನವದೆಹಲಿ, ಜೂ. 25: ಇಂಗ್ಲೆಂಡ್ ಪ್ರವಾಸಕ್ಕಾಗಿ ತೆರಳಿರುವ ಭಾರತ ಕ್ರಿಕೆಟ್ ತಂಡದ ಬಗ್ಗೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ನಾನು ಕಂಡ ಸಂಪೂರ್ಣ ದಾಳಿಯಾತ್ಮಕ ವೇಗಿಗಳಿರುವ ಮತ್ತು ಅಷ್ಟೇ ಐಷಾರಾಮಿ ತಂಡ ಈ ಬಾರಿಯದ್ದು ಎಂದಿದ್ದಾರೆ.
ಯುನೈಟೆಡ್ ಕಿಂಗ್ಡಮ್ ಗೆ ಭಾರತದ ಪ್ರವಾಸ ಸುಮಾರು 3 ತಿಂಗಳ ಅವಧಿಯನ್ನೊಳಗೊಂಡಿದ್ದು, ಇದರಲ್ಲಿ ಜೂನ್ 27ರಿಂದ ಆರಂಭಗೊಳ್ಳಲಿರುವ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳೂ ಸೇರಿವೆ. ಆದರೆ ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ 5 ಟೆಸ್ಟ್ ಸೀರೀಸ್ ಗಳತ್ತ ಎಲ್ಲರ ಗಮನ ಹರಿದಿರುವುದು ಸುಳ್ಳಲ್ಲ.
ಇಂಗ್ಲೆಂಡ್ ಪ್ರವಾಸದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸಚಿನ್, 'ಅಪಾಯಕಾರಿ ವೇಗದ ಬೌಲರ್ ಗಳಿರುವ ಸಂಪೂರ್ಣ ಭಾರತ ತಂಡವನ್ನು ನಾನು ಅನೇಕ ವರ್ಷಗಳ ಬಳಿಕ ನೋಡುತ್ತಿದ್ದೇನೆ. ನಾನು ಗಮನಿಸಿದಂತೆ ಈ ತಂಡದ ದಾಳಿ ಅತ್ಯುತ್ತಮವೆನಿಸಲಿದೆ' ಎಂದಿದ್ದಾರೆ.
'ಈ ಬಾರಿ ಸ್ವಿಂಗ್ ಬೌಲರ್ (ಭುವನೇಶ್ವರ್ ಕುಮಾರ್), ಟಾಲ್ ಬೌಲರ್ (ಇಶಾಂತ್ ಶರ್ಮಾ), ಸ್ಕಿಡ್ಡಿ ಬೌಲರ್ (ಜಸ್ ಪ್ರೀತ್ ಬುಮ್ರಾ) ಮತ್ತು ಕ್ವಿಕ್ ಬೌಲರ್ (ಉಮೇಶ್ ಯಾದವ್) ಗಳನ್ನೊಳಗೊಂಡ ಐಷಾರಾಮಿ (ಶ್ರೇಷ್ಠ ಎಂಬರ್ಥದಲ್ಲಿ) ತಂಡ ನಮ್ಮದು. ಬೌಲಿಂಗ್ ವಿಭಾಗದ ಈ ಸಂಯೋಜನೆ ಅತ್ಯುತ್ತಮವಾದುದು' ಎಂದು ಸಚಿನ್ ಹೇಳಿದ್ದಾರೆ.
ಸುಮಾರು 200 ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವಿ ತೆಂಡೂಲ್ಕರ್, 'ಈ ಹಿಂದೆ ಭಾರತ ತಂಡ ವಿಶೇಷ ಗುಣಗಳುಳ್ಳ ಆಟಗಾರರನ್ನು ಕಂಡಿತ್ತು. ಆದರೆ ಉತ್ತಮ ಬೌಲರ್ ಗಳ ಶ್ರೇಷ್ಠ ತಂಡವಾಗಿ ಇಷ್ಟರಮಟ್ಟಿಗೆ ಗಮನ ಸೆಳೆದಿದ್ದು ಇದೇ ಮೊದಲು' ಎಂದರು.
ಹಿಂದೆ ಅನೇಕ ಬಾರಿ ಭಾರತ ಗೆಲ್ಲಲು ಕೊಸರಾಡಿದ್ದ, ವಿಶ್ವ ಕ್ರಿಕೆಟ್ ನಲ್ಲಿ ಭಾರತ ಮಿನುಗುವಂತೆ ಮಾಡಿದ್ದ ಲಿಟ್ಲ್ ಮಾಸ್ಟರ್ ನ ಈ ಮೆಚ್ಚುಗೆ ಮಾತು ದೇಸಿ ತಂಡಕ್ಕೆ ಹಾರೈಕೆಯೆಂದುಕೊಳ್ಳೋಣ. ಪ್ರವಾಸ ಸರಣಿಯಲ್ಲಿ ಭಾರತ ಪ್ರಾಬಲ್ಯ ಮೆರೆಯಲೆಂದು ನಾವೂ ಹಾರೈಸೋಣಲ್ಲವೆ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications