CWG 2022: 190 ಸ್ಟ್ರೈಕ್‌ರೇಟ್‌ನಲ್ಲಿ ಅಬ್ಬರಿಸಿದ ಸ್ಮೃತಿ ಮಂಧಾನ; ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಪೈಪೋಟಿಯುತ ಗುರಿ

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ವಿಭಾಗದಲ್ಲಿ ಭಾರತ ವನಿತೆಯರು, ಇಂಗ್ಲೆಂಡ್ ವನಿತೆಯರು, ಆಸ್ಟ್ರೇಲಿಯ ವನಿತೆಯರು ಹಾಗೂ ನ್ಯೂಜಿಲೆಂಡ್ ವನಿತೆಯರ ತಂಡಗಳು ಸೆಮಿಫೈನಲ್ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ಇಂದು ( ಆಗಸ್ಟ್ 6 ) ನಡೆಯುತ್ತಿದ್ದು ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ವನಿತೆಯರ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಬಂದಿರುವ ಬಲಿಷ್ಠ ಇಂಗ್ಲೆಂಡ್ ವನಿತೆಯರಿಗೆ ಭಾರತ ತಂಡ ಈ ಪಂದ್ಯದಲ್ಲಿ ಉತ್ತಮ ಗುರಿ ನೀಡಲೇಬೇಕಾದ ಅನಿವಾರ್ಯತೆ ಇತ್ತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕಿದ್ದು ಎದುರಾಳಿ ಇಂಗ್ಲೆಂಡ್ ವನಿತೆಯರ ತಂಡಕ್ಕೆ 165 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿದೆ.

ಅಬ್ಬರಿಸಿದ ಸ್ಮೃತಿ ಮಂಧಾನ
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿಯರಾಗಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಕಣಕ್ಕಿಳಿದರು. ಈ ಪೈಕಿ ಶೆಫಾಲಿ ವರ್ಮಾ 15 ರನ್ ಕಲೆಹಾಕಿ ಔಟ್ ಆದರೆ, ಸ್ಮೃತಿ ಮಂಧಾನಾ 32 ಎಸೆತಗಳಲ್ಲಿ ಬರೋಬ್ಬರಿ 61 ರನ್ ಚಚ್ಚುವುದರ ಮೂಲಕ ಅಕ್ಷರಶಃ ಅಬ್ಬರಿಸಿದರು. 8 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಸ್ಮೃತಿ ಮಂಧಾನಾ 190.62 ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಬೀಸಿದರು. ಸ್ಮೃತಿ ಮಂದಾನ ಬ್ಯಾಟಿಂಗ್ ಅಬ್ಬರಕ್ಕೆ ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 64 ರನ್ ಕಲೆ ಹಾಕಿತ್ತು. ಹೀಗೆ ವೇಗದ ಆಟವನ್ನಾಡಿದ ಸ್ಮೃತಿ ಮಂಧಾನಾ ಒಂಬತ್ತನೇ ಓವರ್‌ನಲ್ಲಿ ಸ್ಕೈವರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಉಳಿದವರು ಗಳಿಸಿದ್ದೆಷ್ಟು?
ಹೀಗೆ ಸ್ಮೃತಿ ಮಂಧಾನ ಔಟ್ ಆದ ಬಳಿಕ ಟೀಮ್ ಇಂಡಿಯಾದ ರನ್ ವೇಗ ತಗ್ಗಿತು. ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20 ರನ್ ಕಲೆಹಾಕಿದರೆ, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್ ಬಾರಿಸಿದರು, ಪೂಜಾ ವಸ್ತ್ರಾಕರ್ ಡೈಮಂಡ್ ಡಕ್ ಔಟ್ ಆದರು ಹಾಗೂ ಜೆಮಿಮಾ ರೊಡ್ರಿಗಸ್ ಅಜೇಯ 44 ರನ್ ಮತ್ತು ಸ್ನೇಹ್ ರಾಣಾ ಯಾವುದೇ ರನ್ ಕಲೆಹಾಕಿದೆ ಅಜೇಯರಾಗಿ ಉಳಿದರು. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ತುಸು ವೇಗದ ಬ್ಯಾಟಿಂಗ್ ನಡೆಸಿದ್ದರೆ ಭಾರತ ಮತ್ತಷ್ಟು ರನ್ ಕಲೆಹಾಕಬಹುದಿತ್ತು.

ಆಡುವ ಬಳಗಗಳು
ಭಾರತ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ಸಿ), ತನಿಯಾ ಭಾಟಿಯಾ(ಡಬ್ಲ್ಯೂ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್
ಇಂಗ್ಲೆಂಡ್ ಆಡುವ ಬಳಗ: ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲೆ, ನಟಾಲಿ ಸ್ಕಿವರ್(ಸಿ), ಆಮಿ ಜೋನ್ಸ್(ಡಬ್ಲ್ಯೂ), ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇಸ್ಸಿ ವಾಂಗ್ ಮತ್ತು ಸಾರಾ ಗ್ಲೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications