Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮನ್ಸ್ ತೆಗೆದುಹಾಕಿ ಎಂದ ಬೋರ್ಡ್ ಸದಸ್ಯ

CWI member Conde Riley calls for West Indies coach Phil Simmons removal

ಲಂಡನ್, ಜುಲೈ 2: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್ ಅವರನ್ನು ಈ ಕೂಡಲೇ ತೆಗೆದು ಹಾಕಬೇಕು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್‌ (ಸಿಬ್ಲ್ಯೂಐ) ಸದಸ್ಯ ಕಾಂಡೆ ರಿಲೆ ಒತ್ತಾಯಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಸಿಮನ್ಸ್ ತನ್ನ ಸಂಬಂಧಿಕ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ರಿಲೆ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಕೊರೊನಾ ವೈರಸ್ ಕಾರಣ ಇಂಗ್ಲೆಂಡ್‌ನಲ್ಲಿ ವಿಂಡೀಸ್ ಅಟಗಾರರಿಗೆ ಜೈವಿಕ ಸುರಕ್ಷಾ ತಾಣದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸಿಮನ್ಸ್ ಮಾವ ತೀರಿಕೊಂಡ ಕಾರಣ ಜೈವಿಕ ಸುರಕ್ಷಾ ತಾಣದಿಂದ ಹೊರ ಬಂದಿದ್ದ ಸಿಮನ್ಸ್ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮುನ್ನ ಫಿಲ್ ಸಿಮನ್ಸ್, ಸಿಬ್ಲ್ಯೂಐ ಅನುಮತಿ ಪಡೆದಿದ್ದರು. ಶವ ಸಂಸ್ಕಾರದ ಬಳಿಕ ಕೊರೊನಾ ಪರೀಕ್ಷೆ ನಡೆಸಿದ್ದ ಸಿಮನ್ಸ್ ಅವರ ಫಲಿತಾಂಶ ನೆಗೆಟಿವ್ ಎಂದು ಬಂದಿತ್ತು. ಸಿಮನ್ಸ್ ಈಗ ಸೆಲ್ಫ್ ಐಸೊಲೇಶನ್ ಪಾಲಿಸುತ್ತಿದ್ದಾರೆ. ಈ ಸಂಗತಿಗಳು ಗೊತ್ತಿದ್ದೂ ಬಾರ್ಬೊಡೋಸ್ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಮುಖ್ಯಸ್ಥರೂ ಆಗಿರುವ ಕಾಂಡೆ, ಸಿಮನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಬಿಸಿಎ ಸದಸ್ಯರು ನನ್ನಲ್ಲಿ ಸಿಮನ್ಸ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅವರ ಈ ವರ್ತನೆ ಅಜಾಗರೂಕತೆಯದ್ದು. ಅದು ಯುಕೆಯಲ್ಲಿರುವ ವಿಂಡೀಸ್ ತಂಡದ 25 ಯುವ ಆಟಗಾರರ ಜೀವವನ್ನು ಸಮಸ್ಯೆಗೆ ತಂದೊಡ್ಡುವುದರಲ್ಲಿತ್ತು. ಆದರೆ ಸತ್ಯಾಂಶವೇನೆಂದರೆ ಸಂಪೂರ್ಣ ನಿರ್ವಹಣಾ ತಂಡ ಇದನ್ನು ಸಹಿಸಿಕೊಂಡಿದೆ,' ಎಂದು ರಿಲೆ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಜೊತೆ ಹೇಳಿಕೊಂಡಿದ್ದಾರೆ.

Story first published: Thursday, July 2, 2020, 8:32 [IST]
Other articles published on Jul 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+