ಮಗನಿಗಿಂತಲೂ ಅಪ್ಪ ಸೂಪರ್ ಫಿಟ್.. ದಡೂತಿ ದೇಹದಿಂದಲೇ ಸುದ್ದಿಯಲ್ಲಿದ್ದಾರೆ ಪಾಕ್ ಆಟಗಾರ
ಕ್ರಿಕೆಟ್ ಈಗ ವಿಶ್ವ ವ್ಯಾಪಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದು. ಈ ಕ್ರೀಡೆಯನ್ನು ಆಡಲು ಶಕ್ತಿ, ಯುಕ್ತಿಯ ಜೊತೆಗೆ ದೇಹವೂ ಹದ್ದು ಬಸ್ತಿನಲ್ಲಿರಬೇಕು. ಅಂದರೆ ಫಿಟ್ನೆಸ್ ಬಗ್ಗೆ ಆಟಗಾರರು ಹೆಚ್ಚಿನ ಆದ್ಯತೆ ನೀಡಬೇಕು. ಕ್ರಿಕೆಟ್ ಕ್ಷೇತ್ರದಲ್ಲಿ ಫಿಟ್ನೆಸ್ ಈಗ ಹಾಸು ಹೊಕ್ಕಿದೆ. ಈ ಸಮಯದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ದಢೂತಿ ದೇಹದ ಆಟಗಾರ ಎಂಟ್ರಿ ನೀಡಿದ್ದು ಎಲ್ಲರ ಗಮನ ಸೆಳೆದಿದ್ದಾನೆ.
ಸಮಾನ್ಯವಾಗಿ ದಢೂತಿ ದೇಹ ಇದ್ದರೆ ಸಾಕು ಜನ ಅವರನ್ನು ಬೇರೆ ಬೇರೆ ಹೆಸರಿನಿಂದಲೇ ಕರಿಯುತ್ತಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಟ್ರೋಲ್‌ಗಳಿಗೂ ಸೊಪ್ಪು ಹಾಕದೆ ಬೆಳೆದು ನಿಂತ ಆಟಗಾರ, ತಂದೆಯಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರನ್ನು ಮಾಡುವ ಆಸೆಯೊಂದಿಗೆ ಮೈದಾನಕ್ಕೆ ಇಳಿದಿದ್ದಾನೆ. ಒಂದು ಕಾಲದಲ್ಲಿ 140 ಕಿಲೋ ಗ್ರಾಮ್ ಇದ್ದರು. ಆದರೆ ಡಯೇಟ್ ಮಾಡಿ ತಮ್ಮ ತೂಕವನ್ನು 30 ಕೆ.ಜಿ ಇಳಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ನೀಡಿದ್ದಾರೆ.

ಯಾರು ಅಜಮ್ ಖಾನ್?
ಪ್ರಸ್ತುತ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಪಾಕ್ ಪರ ಅಜಮ್ ಖಾನ್ ವಿಕೆಟ್ ಕೀಪರ್ ಆಗಿ ಕಣಕ್ಕೆ ಇಳಿಯುವ ಮೂಲಕ ವಿಶ್ವದ ಗಮನ ಸೆಳೆದರು. ಇಂಗ್ಲೆಂಡ್ ವಿರುದ್ಧ 2021ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಪ್ಲೇಯರ್ ತನ್ನ ಆಟಕ್ಕಿಂತಲೂ ಹೆಚ್ಚು ಇವರ ದೇಹದಿಂದಲೇ ಸುದ್ದಿಯಲ್ಲಿದ್ದಾರೆ.
25 ವರ್ಷದ ಅಜಂ ಖಾನ್ ವಿಕೆಟ್ ಕೀಪರ್. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬದಲಿಗೆ ಆಜಮ್ ವಿಕೆಟ್ ಕೀಪರ್ ರೂಪದಲ್ಲಿ ಮೈದಾನಕ್ಕೆ ಇಳಿದರು. ಅಜಂ ಖಾನ್ ಅವರ ತಂದೆ ಮೊಯಿನ್ ಖಾನ್ ಕೂಡ ಪಾಕಿಸ್ತಾನದ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮೊಯಿನ್ ಖಾನ್ ತಮ್ಮ ದೇಶಕ್ಕಾಗಿ 288 ಪಂದ್ಯಗಳನ್ನು ಆಡಿದ್ದಾರೆ.

ಅಜಮ್ ತಂದೆ ಯಾರು?
2019 ರಲ್ಲಿ ಪಿಎಸ್ಎಲ್ ತಂಡ ಕ್ವೆಟ್ಟಾ ಗ್ಲಾಡಿಯೇಟರ್ಸ್‌ನಲ್ಲಿ ಆಯ್ಕೆಯಾದಾಗ ಅಜಮ್ ಖಾನ್ ಮೊದಲು ಬೆಳಕಿಗೆ ಬಂದರು. ಅಜಮ್ ಅವರ ಆಯ್ಕೆದಾಗ ಟೀಕೆಗಳು ಕೇಳಿ ಬಂದಿದ್ದವು. ಅವರ ತಂದೆ ಆ ತಂಡದ ಕೋಚ್ ಆಗಿದ್ದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿತ್ತು. ಒಂದು ಪಂದ್ಯದಲ್ಲಿ ಅಜಮ್‌ಗೆ ಅವಕಾಶ ನೀಡಿದಾಗ ಮೊಯಿನ್ ಖಾನ್ ವಿರುದ್ಧ ಪಕ್ಷಪಾತದ ಆರೋಪವು ಕೇಳಿ ಬಂದಿತ್ತು. ಆದರೆ ಈ ಪಂದ್ಯದಲ್ಲಿ ಅಜಮ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿರುವ ಸಮಯ ಇದು. ಆಟಗಾರನು ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ. ಈ ಯುಗದಲ್ಲಿಯೂ ಅಜಮ್ ಖಾನ್ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು 2021 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಅವರ ಹೆಸರನ್ನು 2021 ರ T20 ವಿಶ್ವಕಪ್‌ಗಾಗಿ ಪಾಕಿಸ್ತಾನದ ತಂಡದಲ್ಲಿ ಸೇರಿಸಲಾಗಿತ್ತು. ಕೊನೆಯಲ್ಲಿ ಅವರ ಹೆಸರನ್ನು ತಂಡದಿಂದ ಕೈ ಬಿಡಲಾಯಿತು.

ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ ಅಜಂ ಖಾನ್ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭ ಉತ್ತಮವಾಗಿ ಆರಂಭವಾಗಲಿಲ್ಲ. ಕ್ರಿಸ್ ಗೇಲ್ ಅವರನ್ನು ತನ್ನ ಆರಾಧ್ಯ ದೈವ ಎಂದು ಪರಿಗಣಿಸುವ ಅಜಮ್, ತನ್ನ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 6 ರನ್ ಗಳಿಸಲು ಶಕ್ತವಾಯಿತು. ಹಲವು ಟೀಕೆಗಳನ್ನು ಎದುರಿಸಿದ ಅಜಮ್ ಸುಮಾರು ಒಂದೂವರೆ ವರ್ಷಗಳ ನಂತರ ಮೈದಾನಕ್ಕೆ ಮರಳಿದ್ದಾರೆ. ಅಜಮ್ ಖಾನ್ ಮತ್ತೆ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾದರು. ಈ ಬಾರಿಯೂ ಅಜಂ ಅವರ ಬ್ಯಾಟ್ ಶಾಂತವಾಗಿದೆ.
ಅಜಮ್ ಖಾನ್ ಅವರನ್ನು ನೋಡಿದರೆ, ಪಾಕ್ ತಂಡದ ದಿಗ್ಗಜ ಆಟಗಾರ ಇಂಜಮಾಮ್ ಉಲ್ ಹಕ್ ನೆನಪಾಗದೇ ಇರಲು ಸಾಧ್ಯವೇ ಇಲ್ಲ. ಪ್ರೇಕ್ಷಕರು ಇಂಜಮಾಮ್ ಅವರನ್ನು ಆಲೂಗಡ್ಡೆ ಎಂದು ಕರೆಯುವ ಮೂಲಕ ಕೀಟಲೆ ಮಾಡುತ್ತಿದ್ದರು. ಒಮ್ಮೆ ಇಂಜಮಾಮ್ ವೀಕ್ಷಕನನ್ನು ಹೊಡೆಯಲು ಓಡಿದ್ದು ಸಹ ಇದೆ. ಆಜಮ್ ಖಾನ್ ಅಂತಹ ಯಾವುದೇ ತಪ್ಪು ಕೆಲಸವನ್ನು ಮಾಡಿಲ್ಲ. ತಂದೆಯಂತೆ ಅಜಮ್ ಪಾಕ್ ತಂಡದ ಪರ ಮಿಂಚಬೇಕು ಎಂಬ ಮಹದಾಸೆಯನ್ನು ಹೊತ್ತುಕೊಂಡಿದ್ದಾರೆ.
ಅಜಮ್ ಖಾನ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ WWE ಕುಸ್ತಿಪಟು ಬಿಗ್ ಷೋ ಅವರ ಪ್ರವೇಶ ಸಂಗೀತವು ಮೊಳಗುತ್ತಿದೆ. ಇದೀಗ ಈ ಕಾರಣದಿಂದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಆಜಮ್ ಖಾನ್ ತುಂಬಾ ದಪ್ಪ. ಅವರು ತಮ್ಮ ತೂಕದ ಬಗ್ಗೆ ಅನೇಕ ಬಾರಿ ಟೀಕೆಗಳಿಗೆ ಗುರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications