Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾದ 2020-21ರ ಗುತ್ತಿಗೆ ಪಟ್ಟಿಯಲ್ಲಿ ಡೇಲ್ ಸ್ಟೇನ್‌ ಹೆಸರಿಲ್ಲ!

Dale Steyn left out from CSA’s national contracts for 2020-21

ಕೇಪ್‌ಟೌನ್, ಮಾರ್ಚ್ 24: ಎಂಎಸ್ ಧೋನಿಯಂತ ಅನುಭವಿ ಆಟಗಾರರು ಮೂಲೆಗುಂಪಾಗುತ್ತಿರೋದು ಬರೀ ಭಾರತದಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ ಕೂಡ ಇಂಥದ್ದೇ ನಡೆ ತೋರಿದೆ. ಕ್ರಿಕೆಟ್ ಸೌತ್ ಆಫ್ರಿಕಾದ (ಸಿಎಸ್‌ಎ) 2020-21ರ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಅನುಭವಿ ವೇಗಿ ಡೇಲ್ ಸ್ಟೇನ್ ಹೆಸರೇ ಇಲ್ಲ (ಚಿತ್ರ ಕೃಪೆ: ಕ್ರಿಕೆಟ್ ಸೌತ್ ಆಫ್ರಿಕಾ).

ಕ್ರಿಕೆಟ್ ದಕ್ಷಿಣ ಆಫ್ರಿಕಾವು 2020-21ರ ಸೀಸನ್‌ಗೆ ಸಂಬಂಧಿಸಿ ಗುತ್ತಿಗೆ ಆಟಗಾರರ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಮಾರಕವೇಗಿ ಡೇಲ್ ಸ್ಟೇನ್ ಹೆಸರು ಕಾಣಿಸುತ್ತಿಲ್ಲ. ಆದರೆ ಎಡಗೈ ವೇಗಿ ಬ್ಯೂರನ್ ಹೆಡ್ರಿಕ್ಸ್ ಹೆಸರು 16 ಜನರನ್ನೊಳಗೊಂಡ ಪಟ್ಟಿಯಲ್ಲಿ ಸೇರಿಸಲಾಗಿದೆ.

ಗಾಯದ ಸಮಸ್ಯೆಯಿಂದಾಗಿ ಸುಮಾರು ಮೂರು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಿಂದ ಅನಿವಾರ್ಯವಾಗಿ ಹೊರಗಿರಬೇಕಾಗಿ ಬಂದಿದ್ದ 36ರ ಹರೆಯದ ಸ್ಟೇನ್, ಕಳೆದ ಫೆಬ್ರವರಿಯಲ್ಲಷ್ಟೇ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಕಮ್‌ ಬ್ಯಾಕ್‌ ಮಾಡಿದ್ದರು. ಅಲ್ಲದೆ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಆಡುವ ಆಶಯವನ್ನು ಹೊಂದಿದ್ದರು.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಬೋರ್ಡ್, ಯುವ ಆಟಗಾರರಾದ ಅನ್ರಿಕ್ ನಾರ್ಟ್ಜೆ, ಆಲ್ ರೌಂಡರ್ ಡ್ವೈನ್ ಪ್ರಿಟೋರಿಯಸ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸೆನ್‌ ಅವರನ್ನು ಗುತ್ತಿಗೆ ಪಟ್ಟಿಯಲ್ಲಿ ಪರಿಗಣಿಸಿದೆ. ಮಾಜಿ ನಾಯಕ ಫಾ ಡು ಪ್ಲೆಸಿಸ್ ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ, ಅಪಾರ ದಾಖಲೆಗಳನ್ನು ಉಳಿಸಿಕೊಂಡಿರುವ ಅನುಭವಿ ಸ್ಟೇನ್ ಅವರನ್ನು ಗುತ್ತಿಗೆಯಿಂದ ಹೊರಗಿಟ್ಟಿದ್ದು ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರು
ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗರ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಆ್ಯಂಡಿಲೆ ಫೆಹ್ಲಕ್ವಾಯೊ, ಡ್ವೇಯ್ನ್ ಪ್ರಿಟೋರಿಜಸ್ , ರಾಸ್ಸಿ ವ್ಯಾನ್ ಡೆರ್ ಡುಸೆನ್.

ಗುತ್ತಿಗೆ ಪಟ್ಟಿಯಲ್ಲಿರುವ ಮಹಿಳಾ ಆಟಗಾರ್ತಿಯರು
ತ್ರಿಶಾ ಚೆಟ್ಟಿ, ನಾಡಿನ್ ಡಿ ಕ್ಲರ್ಕ್, ಮಿಗ್ನಾನ್ ಡು ಪ್ರೀಜ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮಾರಿಜನ್ನೆ ಕಾಪ್, ಅಯಬೊಂಗಾ ಖಾಕಾ, ಮಸಾಬಾಟಾ ಕ್ಲಾಸ್, ಲಿಜೆಲ್ ಲೀ, ಸುನೆ ಲೂಸ್, ತುಮಿ ಸೆಖುಖುನೆ, ಕ್ಲೋಯ್ ಟ್ರಿಯಾನ್, ಡೇನ್ ವ್ಯಾನ್ ನೀಕೆರ್ಕ್, ಲಾರಾ ವೊಲ್ವಾರ್ಡ್.

Story first published: Tuesday, March 24, 2020, 18:14 [IST]
Other articles published on Mar 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+