ಐಪಿಎಲ್ 2019: ಗೆಲುವಿನ ಹಾದಿಗೆ ಮರಳಿದ ಆರ್ ಸಿಬಿಗೆ ಆಘಾತ

ಬೆಂಗಳೂರು, ಏಪ್ರಿಲ್ 25: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2019) ನಲ್ಲಿ ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಈಗಷ್ಟೇ ಮೇಲಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರು ಐಪಿಎಲ್ ನ ಮುಂದಿನ ಲೀಗ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.
ಭುಜದ ಗಾಯದಿಂದ ಬಳಲುತ್ತಿರುವ ಸ್ಟೈನ್ ಅವರ ಗಾಯದಿಂದ ಗುಣಮುಖರಾಗಿಲ್ಲ. ಗುಣಮುಖರಾದರೂ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ವೈದ್ಯಾಧಿಕಾರಿ ಹೇಳಿದ್ದಾರೆ. ಗಾಯಗೊಂಡಿದ್ದರಿಂದ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇಲ್ ಸ್ಟೈನ್ ಆಡಿರಲಿಲ್ಲ.
'ಸ್ಟೈನ್ ಅವರು ತಂಡಕ್ಕೆ ಸ್ಫೂರ್ತಿ ತುಂಬಿದ್ದರು, ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ಗಾಯ ಬೇಗ ವಾಸಿಯಾಗಲಿ, ಭವಿಷ್ಯಕ್ಕೆ ಶುಭವಾಗಲಿ' ಎಂದು ಆರ್ ಸಿಬಿ ಮ್ಯಾನೇಜ್ಮೆಂಟ್ ತನ್ನ ಪ್ರಕಟಣೆ ಹೊರಡಿಸಿದೆ.
ಈ ಬಾರಿ ಐಪಿಎಲ್ ನಲ್ಲಿ ಪ್ರತಿ ಓವರ್ ಗೆ 8.62 ಸರಾಸರಿಯಂತೆ 4 ವಿಕೆಟ್ ಗಳಿಸಿದ ಸ್ಟೈನ್ ಅವರು ಪವರ್ ಪ್ಲೇನಲ್ಲಿ ವಿಕೆಟ್ ಕಿತ್ತು, ರನ್ ಗಳಿಕೆಗೆ ಬ್ರೇಕ್ ಹಾಕುವ ಮೂಲಕ ಆರ್ ಸಿಬಿಗೆ ಬಲ ತಂದಿದ್ದರು. ಆಸ್ಟ್ರೇಲಿಯಾದ ವೇಗಿ ನಾಥನ್ ಕೌಲ್ಟರ್ ನೈಲ್ ಅವರು ಗಾಯಗೊಂಡಿದ್ದರಿಂದ ಅವರ ಬದಲಿಗೆ ಆರ್ ಸಿಬಿ ತಂಡ ಸೇರಿದ್ದ ಸ್ಟೈನ್ ಅವರು ಕೂಡಾ ಈಗ ಗಾಯಗೊಂಡಿರುವುದು ಆರ್ ಸಿಬಿ ಪಾಲಿಗೆ ದುರದೃಷ್ಟಕರ ಸಂಗತಿ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications