ಪ್ರಥಮ ODI ದ್ವಿಶತಕ: 190 ರನ್‌ಗಳಿಸಿದ್ದಾಗಲೇ ಸಚಿನ್ ಔಟಾಗಿದ್ದರು ಎಂದು ಸುಳ್ಳು ಹೇಳಿದ ಡೇಲ್ ಸ್ಟೇಯ್ನ್

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ಅದೆಷ್ಟೋ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಆಟಗಾರ. ಅದರಲ್ಲಿ ಸಚಿನ್ ಬಾರಿಸಿದ ದ್ವಿಶತಕವೂ ಒಂದು. ಏಕದಿನ ಕ್ರಿಕೆಟ್ ಆರಂಭವಾದ ನಾಲ್ಕು ದಶಕದ ಬಳಿಕ ಮೊಟ್ಟ ಮೊದಲ ಬಾರಿಗೆ ಈ ಸಾಧನೆ ಸಚಿನ್ ಮೂಲಕ ಸಾಧ್ಯವಾಯಿತು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆದ ಈ ಪಂದ್ಯದ ಬಗ್ಗೆ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್ ಹೇಳಿಕೆಯೊಂದನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 190 ರನ್ ಗಳಿಸಿದ್ದ ಸಂದರ್ಭದಲ್ಲಿ ತಾನು ಬೌಲಿಂಗ್ ಮಾಡುವಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಆದರೆ ಅಂಪಾಯರ್ ಅದಕ್ಕೆ ಔಟ್ ನೀಡಲಿಲ್ಲ ಎಂದು ಸ್ಟೇಯ್ನ್ ಹೇಳಿದ್ದಾರೆ. ಅಂಪಾಯರ್ ಆಗಿದ್ದ ಇಯಾಲ್ ಗೌಲ್ಡ್ ಸಚಿನ್ ತೆಂಡೂಲ್ಕರ್‌ಗೆ ಔಟ್ ತೀರ್ಪು ನೀಡಲು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.
ಹಾಗಾದರೆ ಅಂದು ನಡೆದದ್ದೇನು? ನಿಜಕ್ಕೂ ಸಚಿನ್ ಔಟಾಗಿದ್ದರಾ? ಮುಂದೆ ಓದಿ..

190ಕ್ಕೆ ಸಚಿನ್ ಔಟಾಗಬೇಕಿತ್ತು!
ಏಕದಿನ ಇತಿಹಾಸದ ಚೊಚ್ಚಲ ದ್ವಿಶತಕ ಬಾರಿಸುವ ಮುನ್ನವೇ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದಿದ್ದೆ ಎಂದು ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ ಹೇಳಿಕೆಯನ್ನು ನೀಡಿದ್ದರೆ. ಖಾಸಗಿ ಕ್ರೀಡಾ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂದಿದ್ದ ಡೇಲ್ ಸ್ಟೇನ್ ಹತ್ತು ವರ್ಷಗಳ ಹಿಂದಿನ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ಸಚಿನ್ 190 ರನ್ ಗಳಿಸಿದ್ದ ವೇಳೆ ಔಟಾಗಬೇಕಿತ್ತು. ಆದರೆ ಎಲ್‌ಬಿಡಬ್ಲ್ಯೂ ನೀಡಲು ಅಂಪೈರ್ ನಿರಾಕರಿಸಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.

ಅಂಕಿಅಂಶಗಳು ಬೇರೆಯದ್ದೇ ಹೇಳುತ್ತಿದೆ
ವಿಚಿತ್ರ ಏನೆಂದರೆ ಗ್ವಾಲಿಯರ್‌ನಲ್ಲಿ ನಡೆದ ಆ ಪಂದ್ಯವನ್ನೂ ಆಳವಾಗಿ ಗಮನಿಸಿದಾಗ ಈ ರೀತಿಯ ಯಾವುದೇ ಸನ್ನಿವೇಶವೂ ಉಂಟಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ಡೇಲ್ ಸ್ಟೇಯ್ನ್ 31 ಎಸೆತಗಳನ್ನು ಬೌಲ್ ಮಾಡಿದ್ದರು. ಆದರೆ ಯಾವುದೇ ಒಂದು ಎಸೆತವೂ ಎಲ್‌ಬಿಡಬ್ಲ್ಯೂಗೆ ಸಮೀಪವಾಗಿಲ್ಲ ಎನ್ನುವುದು ಗೊತ್ತಾಗುತ್ತದೆ.

ಔಟಾಗಬಹುದಾಗಿದ್ದ ಸಂದರ್ಭಗಳೇ ಇಲ್ಲ
ಸ್ಟೇಯ್ನ್ ಹೇಳಿದಂತೆ 190ರ ಬಳಿಯಿದ್ದಾಗ ಸ್ಟೇಯ್ನ್ ಸಚಿನ್‌ಗೆ ಬಾಲ್ ಎಸೆದಿದ್ದು ಕೇವಲ ಮೂರೇ ಎಸೆಯಗಳನ್ನು. ಆ ಮೂರೂ ಎಸೆತಗಳನ್ನು ಕೂಡ ಸಚಿನ್ ತೆಂಡೂಲ್ಕರ್ ಸ್ಪಷ್ಟವಾಗಿ ಬ್ಯಾಟ್ ಮೂಲಕವೇ ಎದುರಿಸಿದ್ದರು. ಹೀಗಾಗಿ ಸ್ಟೇನ್ ಸಚಿನ್ ತೆಂಡೂಲ್ಕರ್‌ಗೆ ಎಸೆದ 31 ಎಸತಗಳನ್ನೂ ಸಚಿನ್ ಔಟಾಗಬಹುದಾಗಿದ್ದ ಸಂದರ್ಭಗಳು ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಪ್ರೇಕ್ಷಕರನ್ನು ನೋಡಿ ಎಂದರಂತೆ ಅಂಪೈರ್
ಸ್ಕೈ ಸ್ಪೋರ್ಟ್ಸ್‌ನ ಕ್ರಿಕೆಟ್ ಪಾಡ್ ಕಾಸ್ಟ್ ವಿದ್ ಜೇಮ್ಸ್ ಆಂಡರ್ಸನ್ ಕಾರ್ಯಕ್ರಮದಲ್ಲಿ ಡೇಲ್ ಸ್ಟೈನ್ ಈ ಮಾತನ್ನು ಹೇಳಿದ್ದಾರೆ. ಸಚಿನ್‌ಗೆ ಯಾಕೆ ಔಟ್ ನೀಡಿಲ್ಲ ಎಂದು ಅಂಪಾಯರ್ ಬಳಿ ಕೇಳಿದಾಗ "ಸುತ್ತಲೂ ಪ್ರೇಕ್ಷಕರನ್ನೊಮ್ಮೆ ನೋಡು, ನಾನು ಆತನಿಗೆ ಔಟ್ ನೀಡಿದರೆ ಮರಳಿ ಹೋಟೆಲ್‌ಗೆ ಹೋಗಲಾರೆ ಎಂದು ಹೇಳಿದ್ದರು ಎಂಬುದಾಗಿಯೂ ಈ ಸಂದರ್ಭದಲ್ಲಿ ಸ್ಟೇಯ್ನ್ ಹೇಳಿಕೆಯನ್ನು ನೀಡಿದ್ದಾರೆ.

ಟೆಸ್ಟ್ ಅಂತಿಮ ಶತಕವೂ ಆಫ್ರಿಕಾ ವಿರುದ್ಧ
ಸಚಿನ್ ತೆಂಡೂಲ್ಕರ್ ಈ ಪಂದ್ಯದಲ್ಲಿ ಮೊತ್ತ ಮೊದಲ ಬಾರಿಗೆ ದ್ವಿಶತಕದ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ಭಾರತ 403 ರನ್‌ಗಳ ಬೃಹತ್ ರನ್ ಪೇರಿಸಿತ್ತು. ಇನ್ನು ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನ ಅಂತಿಮ ಶತಕವೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧವೇ ದಾಖಲಾಗಿರುವುದು ಕಾಕತಾಳೀಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications