ವೆಸ್ಟ್ ಇಂಡೀಸ್ ವೇಗಿಯ ಬೌನ್ಸರ್‌ಗೆ ಆಸ್ಪತ್ರೆ ಸೇರಿದ ಬ್ಯಾಟರ್
ಕ್ರಿಕೆಟ್ ಮೈದಾನದಲ್ಲಿ ಗಾಯವಾಗುವುದು ಸಾಮಾನ್ಯ. ಅಲ್ಲದೆ ಹಲವು ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಜೀವ ಬಿಟ್ಟಿದ್ದನ್ನು ನೋಡಿದ್ದೇವೆ. ಇತ್ತೀಚೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ದೇಶೀಯ ಕ್ರಿಕೆಟ್ ಲೀಗ್‌ನಲ್ಲೂ ಇಂತಹದ್ದೇ ಒಂದು ಸನ್ನಿವೇಶ ಕಂಡು ಬಂದಿದ್ದು, ಆಗಿದ್ದು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ವೆಸ್ಟ್ ಇಂಡೀಸ್‌ನಲ್ಲಿ ಪ್ರಸ್ತುತ ದೇಶೀಯ ಕ್ರಿಕೆಟ್ ಆಡಲಾಗುತ್ತಿದೆ. ಈ ವೇಳೆ ಬೌಲರ್ ಎಸೆದ ಚೆಂಡು ನೇರವಾಗಿ ಬ್ಯಾಟರ್ ಹೆಲ್ಮೆಟ್‌ಗೆ ಬಡೆದಿದೆ. ಚೆಂಡು ಹೆಲ್ಮೆಟ್‌ಗೆ ಬಿದ್ದ ರಭಸಕ್ಕೆ ಬ್ಯಾಟರ್ ಕೆಳಕ್ಕೆ ಕುಸಿದು ಬಿದ್ದಿದ್ದಾನೆ. ಬಳಿಕ ಆತನೇ ಚೇತರಿಸಿಕೊಂಡು ಎದ್ದಿದ್ದಾನೆ.

ವೆಸ್ಟ್ ಇಂಡೀಸ್ ಪ್ರಸ್ತುತ ಚಾಂಪಿಯನ್‌ಶಿಪ್ ಅನ್ನು ಆಡುತ್ತಿದೆ. ಈ ಟೂರ್ನಿಯಲ್ಲಿ ಲೀವರ್ಡ್ ಐಲ್ಯಾಂಡ್ಸ್ vs ಟ್ರಿನಿಡಾಡ್ ಮತ್ತು ಟೊಬಾಗೋ ತಂಡಗಳು ಕಾದಾಟ ನಡೆಸಿವೆ. ಈ ಪಂದ್ಯಕ್ಕೆ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ ಸಾಕ್ಷಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೇಗದ ಬೌಲರ್ ಜೇಡನ್ ಸೀಲ್ಸ್ ಎಸೆದ ಚೆಂಡು ಜೆರೆಮಿಯಾ ಲೂಯಿಸ್ ಹೆಲ್ಮೆಟ್‌ಗೆ ತಗುಲಿತು. ಚೆಂಡು ತುಂಬ ವೇಗವಾಗಿ ಹೆಲ್ಮೆಟ್‌ಗೆ ಬಡಿದಿದ್ದರಿಂದ ಬ್ಯಾಟರ್ ಪಿಚ್ ಮೇಲೆ ಬಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಳಿಕ ಬ್ಯಾಟರ್ ತಾವೇ ಚೇತರಿಸಿಕೊಂಡು ಎದ್ದು, ತಮ್ಮ ಹೆಲ್ಮೆಟ್ ತೆಗೆದು ಫುಟ್ಬಾಲ್ ರೀತಿ ಒದ್ದರು. ಅಲ್ಲದೆ ಬ್ಯಾಟ್ ಬೀಸಾಡಿ ಮೈದಾನ ಬಿಟ್ಟು ಹೊರಡಲು ಆರಂಭಿಸಿದರು. ಇವರ ಗಾಯ ತುಂಬ ಹೆಚ್ಚಾಗಿದ್ದರಿಂದ ಇವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ನಂತರ ಬ್ಯಾಟರ್‌ರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಇವರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಈ ಘಟನೆ ನಡೆದ ಬಳಿಕ ಅಂಪೈರ್ ಹಾಗೂ ರೆಫರಿ ಕೆಲ ಹೊತ್ತು ಸಮಾಲೋಚನೆ ನಡೆಸಿ, ನಾಯಕರನ್ನು ಕರೆದು, ಪಿಚ್ ತುಂಬ ಅಪಾಯಕಾರಿಯಾಗಿದೆ. ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಪಂದ್ಯವು ಮೂರನೇ ದಿನದ ಮೊದಲ ಸೆಷನ್‌ನಲ್ಲಿ ರದ್ದು ಗೊಳಿಸಲಾಯಿತು. ಮೂರನೇ ದಿನದ ವೇಳೆಗೆ, ಒಟ್ಟು 147 ಓವರ್‌ಗಳು ಬೌಲ್ ಮಾಡಲ್ಪಟ್ಟಿದ್ದು, 27 ವಿಕೆಟ್‌ಗಳು ಬಿದ್ದಿದ್ದವು. ಚಾಂಪಿಯನ್‌ಶಿಪ್‌ನ ನಿಯಮಾವಳಿಗಳ ಪ್ರಕಾರ, ಪಂದ್ಯ ರದ್ದಾಗುವವರೆಗೆ ಎರಡೂ ತಂಡಗಳು ಗಳಿಸಿದ ಅಂಕಗಳನ್ನು ಆಯಾ ತಂಡಗಳಿಗೆ ನೀಡಲಾಗಿದೆ. ಇದೇ ಮೈದಾನದಲ್ಲಿ ಮೇ 17 ರಿಂದ 20ರ ವರೆಗೆ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದ್ದು, ಈ ವರೆಗೆ ಈ ಪಿಚ್ ಮೇಲೆ ಯಾವುದೇ ಪಂದ್ಯ ಆಡಿಸದಿರಲು ನಿರ್ಧರಿಸಲಾಗಿದೆ. ಅಲ್ಲದೆ ಫೈನಲ್ ಪಂದ್ಯದ ವೇಳೆಗೆ ಈ ಪಿಚ್ ಸರಿಪಡಿಸಿ, ಸ್ಪರ್ಧಾತ್ಮಕ ರೀತಿಯಲ್ಲಿ ನೀಡುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಸೂಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications