ಟಿ20 ಕ್ರಿಕೆಟ್: ಮಹಿಳಾ ಸೂಪರ್ ಲೀಗ್‌ನಲ್ಲಿ ಡೇನಿಯೆಲ್ ವ್ಯಾಟ್ ಐತಿಹಾಸಿಕ ಶತಕ

ಹೊಸದಿಲ್ಲಿ, ಆಗಸ್ಟ್ 19: ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ಡೇನಿಯಲ್ ವ್ಯಾಟ್, ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ (ಡಬ್ಲ್ಯುಸಿಎಸ್‌ಎಲ್) ಶತಕ ಸಿಡಿಸಿದ ಮೊತ್ತ ಮೊದಲ ಇಂಗ್ಲಿಷ್ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ವ್ಯಾಟ್, ಸದರ್ನ್ ವೈಪರ್ಸ್ ಪರ 60 ಎಸೆತಗಳಲ್ಲಿ 110 ರನ್‌ಗಳನ್ನು ಚೆಚ್ಚಿ ಅಬ್ಬರಿಸಿದ್ದರು.
ಇದೇ ವೇಳೆ ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ (ಡಬ್ಲ್ಯುಸಿಎಸ್‌ಎಲ್) ಇತಿಹಾಸದಲ್ಲಿ ಇದು ಎರಡನೇ ಅತ್ಯಧಿಕ ಮೊತ್ತ ಕೂಡ ಆಗಿದೆ. 2017ರಲ್ಲಿ ನ್ಯೂಜಿಲೆಂಡ್ ತಂಡದ ನಾಯಕಿ ಸೂಝಿ ಬೇಟ್ಸ್ 119 ರನ್‌ಗಳನ್ನು ಬಾರಿಸಿದ್ದು, ಸಾರ್ವಕಾಲಿಕ ಶ್ರೇಷ್ಠ ದಾಖಲೆಯಾಗಿ ಉಳಿದಿದೆ.
"ಕಠಿಣವಾದ ಪಿಚ್ ಇದಾಗಿತ್ತು. ನನಗೆ ಮತ್ತು ಸೂಝಿ ಇಬ್ಬರಿಗೂ ಆರಂಭದಲ್ಲಿ ಬ್ಯಾಟ್ ಮಾಡುವುದು ಕಷ್ಟವಾಯಿತು. ಇಂತಹ ಪಿಚ್‌ಗಳಲ್ಲಿ ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಬ್ಯಾಟ್ ಬೀಸಬೇಕಾಗುತ್ತದೆ. ಪಿಚ್‌ನಿಂದ ಹೊರಬರುವ ಸಂದರ್ಭದಲ್ಲಿ ನಾನು ಇದನ್ನು ಮಾಡಿದ್ದಾದರೂ ಹೇಗೆ ಎಂಬುದನ್ನು ಆಲೋಚಿಸುತ್ತಿದ್ದೆ," ಎಂದು ಶತಕದ ಬಳಿಕ ಮಾತನಾಡಿದ ವ್ಯಾಟ್ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
"ಆಡುವ ಸಂದರ್ಭದಲ್ಲಿ ಯಾವ ಆಲೋಚನೆಯೂ ಇಲ್ಲದೆ ಬೌಂಡರಿಗಳನ್ನು ಗಳಿಸುವುದರ ಕಡೆಗಷ್ಟೇ ಗಮನ ನೀಡುತ್ತಿದ್ದೆ. ಕಳೆದ 15 ತಿಂಗಳಲ್ಲಿ ನಾನು ಯಾವುದೇ ಶತಕ ಗಳಿಸಿಲ್ಲ. ಹೀಗಾಗಿ ಮರಳಿ ಶತಕ ದಾಖಲಿಸಿರುವುದು ಸಂತಸ ನೀಡಿದೆ," ಎಂದಿದ್ದಾರೆ.
ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೈಪರ್ಸ್ ತಂಡ, ವ್ಯಾಟ್ ಅವರ ಶತಕದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 178 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಸರ್ರೇ ಸ್ಟಾರ್ಸ್ ತಂಡ 16.4 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ವೈಪರ್ಸ್ ತಂಡ 89 ರನ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ವೈಪರ್ಸ್ ಆಡಿದ 6 ಪಂದ್ಯಗಳಲ್ಲಿ 3 ಜಯ, 1 ಸೋಲು, 1ಟೈ ಹಾಗೂ ಮತ್ತೊಂದು ಪಂದ್ಯದಲ್ಲಿ ಫಲಿತಾಂಶ ಕಾಣದೆ ಒಟ್ಟು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 6 ತಂಡಗಳ ನಡುವಣ ರೌಂಡ್ ರಾಬಿನ್ ಮಾದರಿಯ ಲೀಗ್ ಟೂರ್ನಿ ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications