ದಾನಿಶ್ ಕನೆರಿಯಾ ಪ್ರಕರಣ ಪಾಕಿಸ್ತಾನದ ನೈಜ ಬಣ್ಣವನ್ನು ತೋರಿಸಿದೆ; ಗೌತಮ್ ಗಂಭೀರ್

ಹಿಂದು ಧರ್ಮ ಎಂಬ ಕಾರಣಕ್ಕೆ ದಾನೀಶ್ ಕನೇರಿಯಾ ಅವರನ್ನು ಪಾಕಿಸ್ತಾನ ತಂಡದಲ್ಲಿ ಕೆಲ ಆಟಗಾರರು ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದರು. ಶೋಯೆಬ್ ಅಖ್ತರ್ ನೀಡಿದ ಈ ಹೇಳಿಕೆಗೆ ಸ್ವತಃ ದಾನಿಶ್ ಕನೇರಿಯಾ ಕೂಡ ಧ್ವನಿಗೂಡಿಸಿದ್ದರು. ಈ ಸುದ್ದಿ ಇದೀಗ ಭಾರತದಲ್ಲಿ ಭಾರೀ ಸದ್ದು ಮಾಡ್ತಿದೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ದಾನೀಶ್ ಕನೆರಿಯಾ ಅವರ ಪ್ರಕರಣ ಪಾಕಿಸ್ಥಾನದ ನೈಜ ಮುಖವನ್ನು ತೋರಿಸುತ್ತದೆ ಎಂದು ಹೇಳಿಕೆಯನ್ನು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ.
ಟೀ್ ಇಂಡಿಯಾ ಸುಧೀರ್ಘ ಅವಧಿಗೆ ಅಜರುದ್ಧೀನ್ ಅವರ ನಾಯಕತ್ವದಲ್ಲಿ ಆಡಿದೆ. ಆದರೆ ಭಾರತದಲ್ಲಿ ಇಂತಾ ಸ್ಥಿತಿಯಿರಲಿಲ್ಲ. ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಅವರೇ ಪ್ರದಾನಿಯಾಗಿರುವ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಅಸಮಾದಾನವನ್ನು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗಂಭೀರ್ ವ್ಯಕ್ತಪಡಿಸಿದ್ದಾರೆ.
55-60 ಟೆಸ್ಟ್ ಪಂದ್ಯಗಳನ್ನು ದಾನೀಶ್ ಕನೇರಿಯಾ ಅವರು ಪಾಕಿಸ್ತಾನಕ್ಕಾಗಿ ಆಡಿದ್ದಾರೆ. ಆದರೆ ಆಷ್ಟಾಗಿಯೂ ಈ ರೀತಿಯ ಹಿಂಸೆಯನ್ನು ನೀಡಿರೋದು ನಾಚಿಕೆಗೇಡು ಎಂದು ಗಂಭೀರ್ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕಿಸ್ತಾನದ ಟಿವಿ ಸಂದರ್ಶನದಲ್ಲಿ ದಾನೀಶ್ ಕನೇರಿಯಾ ಅವರು ಅನುಭವಿಸಿದ ಸಂಕಷ್ಠಗಳ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications