Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳೆ ಮೇಲೆ ಸ್ನೇಹಿತ ಅತ್ಯಾಚಾರವೆಸಗಿದ್ದು ದನುಷ್ಕ ಅಮಾನತಿಗೆ ಕಾರಣ!

Danushka Gunathilaka Suspended by SLC After Friend is Accused of Rape

ಕೊಲಂಬೋ, ಜುಲೈ 23: ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಗೊಳಿಸಿದ ಸಂಗತಿಯೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ದನುಷ್ಕ ಅವರ ಸ್ನೇಹಿತ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಿಗಿದ್ದ ಆರೋಪದ ಮೇಲೆ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ ಅಮಾನತು ಮಾಡಿರುವುದುದಾಗಿ ತಿಳಿದು ಬಂದಿದೆ.

ಇಂದು (ಜುಲೈ 23) ಶ್ರೀಲಂಕಾದ ಬ್ಯಾಟ್ಸ್ಮನ್ ದನುಷ್ಕ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಳಿಸಿತ್ತು. ವಿಚಾರಣೆ ವೇಳೆ ಆಟಗಾರ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಕಾರಣ ನೀಡಿತ್ತು. ಆದರೆ ದನುಷ್ಕ ಅವರ ಅಮಾನತಿಗೆ ಅಸಲಿ ಕಾರಣ, ಅವರ ಸ್ನೇಹಿತನ ಮೇಲೆ ಅತ್ಯಾಚಾರ ಆರೋಪವಿರುವುದು ಎಂದು ವರದಿಯೊಂದು ಹೇಳಿದೆ.

ಗುಣತಿಲಕ ಮತ್ತು (ಹೆಸರು ತಿಳಿಸದ) ಅವರ ಸ್ನೇಹಿತ ಭಾನುವಾರ ತಾವು ತಂಗಿದ್ದ ಕೊಲಂಬೋದ ಹೋಟೆಲ್ ರೂಮಿಗೆ ಇಬ್ಬರು ನಾರ್ವೇಯನ್ ಮಹಿಳೆಯರನ್ನು ಕರೆದುಕೊಂಡು ಹೋಗಿದ್ದರು. ಅದರಲ್ಲಿ ಒಬ್ಬಳ ಮೇಲೆ ಶ್ರೀಲಂಕಾ ಮೂಲದ, ಬ್ರಿಟಿಷ್ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತಿ (ಗುಣತಿಲಕ ಅವರ ಸ್ನೇಹಿತ) ಅತ್ಯಾಚಾರವೆಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

'ದನುಷ್ಕ ಸ್ನೇಹಿತನ ಮೇಲೆ ಅತ್ಯಾಚಾರ ಆರೋಪವಿರುವುದರಿಂದ 26ರ ಹರೆಯದ ಆ ವ್ಯಕ್ತಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ವಿಚಾರಣೆಯನ್ನೂ ಮುಂದುವರೆಸಲಿದ್ದೇವೆ. ಆದರೆ ತನ್ನ ಮೇಲೆ ಅತ್ಯಾಚಾರವಾಗಿರುವುದಾಗಿ ದೂರಿತ್ತಿರುವ ನಾರ್ವೇಯನ್ ಮಹಿಳೆ ಗುಣತಿಲಕ ಅವರ ಮೇಲೆ ಆರೋಪ ಹೊರಿಸಿಲ್ಲ' ಎಂದು ಪೊಲೀಸ್ ಅಧಿಕೃತ ಮೂಲಗಳು ತಿಳಿಸಿವೆ.

Story first published: Monday, July 23, 2018, 15:15 [IST]
Other articles published on Jul 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+