ಭಾರತ vs ವಿಂಡೀಸ್: ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಆಟಗಾರರು

ಆ್ಯಂಟಿಗುವಾ, ಆಗಸ್ಟ್ 17: ವಿಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆ್ಯಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 17) ಅಭ್ಯಾಸ ಪಂದ್ಯವನ್ನಾಡಲಿದೆ. ಇದಕ್ಕಾಗಿ ವೆಸ್ಟ್ ಇಂಡೀಸ್ 14 ಜನರಿರುವ 'ಎ' ತಂಡವನ್ನು ಪ್ರಕಟಿಸಿದ್ದು, ಡ್ಯಾರೆನ್ ಬ್ರಾವೋ, ಜಾನ್ ಕ್ಯಾಂಪ್‌ಬೆಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬ್ರಾವೋ ಮತ್ತು ಕ್ಯಾಂಪ್‌ಬೆಲ್ ಇಬ್ಬರೂ ಭಾರತ-ವಿಂಡೀಸ್ ನಡುವಣ ಮೊದಲ ಟೆಸ್ಟ್‌ನಲ್ಲಿ ಬ್ಯಾಟ್ ಬೀಸಲಿದ್ದಾರೆ. ಮೊದಲ ಟೆಸ್ಟ್ ಆಗಸ್ಟ್ 22ರಂದು ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯ ಆಗಸ್ಟ್ 17-18ರ ವರೆಗೆ ನಡೆಯಲಿದೆ.
ವಿಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಎರಡೂ ಸರಣಿಗಳನ್ನು ಗೆದ್ದಿರುವ ಕೊಹ್ಲಿ ಪಡೆ ಟೆಸ್ಟ್‌ನಲ್ಲೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಅಭ್ಯಾಸಕ್ಕಾಗಿ ಭಾರತ 16 ಜನರ ಹೆಸರನ್ನು ಪ್ರಕಟಿಸಿದ್ದು, ಆಡುವ 11 ಮಂದಿ ಯಾರೆಂಬುದು ಟಾಸ್ ವೇಳೆ ಗೊತ್ತಾಗಲಿದೆ. ಪಂದ್ಯ 7 pmಗೆ ಆರಂಭ.
ವೆಸ್ಟ್ ಇಂಡೀಸ್ ತಂಡ: ಜಾಹ್ಮರ್ ಹ್ಯಾಮಿಲ್ಟನ್ (ಸಿ & ವಿಕೆ), ಡ್ಯಾರೆನ್ ಬ್ರಾವೋ, ಜಾನ್ ಕ್ಯಾಂಪ್ಬೆಲ್, ಜೊನಾಥನ್ ಕಾರ್ಟರ್, ಅಕಿಮ್ ಫ್ರೇಸರ್, ಕಿಯಾನ್ ಹಾರ್ಡಿಂಗ್, ಕವೆಮ್ ಹಾಡ್ಜ್, ಬ್ರಾಂಡನ್ ಕಿಂಗ್, ಜೇಸನ್ ಮೊಹಮ್ಮದ್, ಮಾರ್ಕ್ವಿನೊ ಮೈಂಡ್ಲೆ, ಖಾರಿ ಪಿಯರೆ, ರೋಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಜೆರೆಮಿ ಸೊಲೊಜಾನೊ.
ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರಿಷಬ್ ಪಂತ್, ಚೇತೇಶ್ವರ್ ಪೂಜಾರ, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಾಹ, ಇಶಾಂತ್ ಶರ್ಮಾ, ರೋಹಿತ್ ಶರ್ಮಾ, ಹನುಮ ವಿಹಾರಿ, ಉಮೇಶ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications