Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಪಿಎಲ್‌ನ ಸೇಂಟ್ ಲೂಸಿಯಾ ಝೌಕ್ಸ್‌ ತಂಡಕ್ಕೆ ಡ್ಯಾರೆನ್ ಸ್ಯಮಿ ನಾಯಕ

Darren Sammy to lead St. Lucia Zouks in 2020 CPL season

ಪೋರ್ಟ್ ಆಫ್ ಸ್ಪೇನ್, ಏಪ್ರಿಲ್ 23: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್ ರೌಂಡರ್ ಡ್ಯಾರೆನ್ ಸ್ಯಮಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2020ರ ಸೀಸನ್‌ನಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಪಾಕಿಸ್ತಾನದಲ್ಲಿ ಕೋಚಿಂಗ್ ಜವಾಬ್ದಾರಿ ಮುಗಿಸಿರುವ ಸ್ಯಮಿ, ಈ ಬಾರಿಯ ಸಿಪಿಎಲ್ ಸೀಸನ್‌ನಲ್ಲಿ ಆಡಲಿದ್ದಾರೆ.

ಸೇಂಟ್‌ ಲೂಸಿಯಾಕ್ಕೆ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಮಾತನಾಡಿರುವ ಸ್ಯಮಿ, 'ಭಾವೋದ್ರಿಕ್ತ ಅಭಿಮಾನಿಗಳ ಎದುರು ತವರಲ್ಲಿ ಆಡುವುದು ರೋಮಾಂಚನ ನೀಡುತ್ತದೆ. ಸೇಂಟ್ ಲೂಸಿಯಾ ತಂಡವನ್ನು ಹೊಳೆಯುವಂತೆ ಮಾಡುತ್ತೇನೆ,' ಎಂದಿದ್ದಾರೆ.

'ಸೇಂಟ್‌ ಲೂಸಿಯಾ ತಂಡ ತನ್ನ ಆಟಗಾರರನ್ನು ಭದ್ರಪಡಿಸುವ ಹಾದಿಯಲ್ಲಿದೆ. ಅಲ್ಲದೆ ವರ್ಷವನ್ನು ಯಶಸ್ವಿ ವರ್ಷವಾಗಿಸುವತ್ತ ತಂಡ ಯೋಚಿಸಿದೆ,' ಎಂದು ಡ್ಯಾರೆನ್ ಸ್ಯಮಿ ಹೇಳಿದ್ದಾರೆ. ಸೇಂಟ್ ಲೂಸಿಯಾ ತಂಡದ ಕೋಚ್ ಆ್ಯಂಡಿ ಫ್ಲವರ್ ಕೂಡ ಸ್ಯಮಿ ನಾಯಕತ್ವದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಪರ ಡ್ಯಾರೆನ್ ಸ್ಯಮಿ, 38 ಟೆಸ್ಟ್ ಪಂದ್ಯಗಳಲ್ಲಿ 1323 ರನ್, 126 ಏಕದಿನ ಪಂದ್ಯಗಳಲ್ಲಿ 1871 ರನ್, 68 ಟಿ20 ಪಂದ್ಯಗಳಲ್ಲಿ 587 ರನ್ ಗಳಿಸಿದ್ದಾರೆ. ಏಕದಿನದಲ್ಲಿ 81 ವಿಕೆಟ್‌, ಟಿ20ಯಲ್ಲಿ 44 ವಿಕೆಟ್, ಟೆಸ್ಟ್‌ನಲ್ಲಿ 84 ವಿಕೆಟ್ ಪಡೆದಿದ್ದಾರೆ.

Story first published: Thursday, April 23, 2020, 15:06 [IST]
Other articles published on Apr 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+