IPL Auction 2023: ಚೆನ್ನೈ ತಂಡದ ಆಲ್‌ರೌಂಡರ್ ವಿಭಾಗಕ್ಕೆ ಬಲ ತುಂಬಲಿದ್ದಾರೆ ಕಿವೀಸ್ ಪ್ಲೇಯರ್
ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಡೇರಿಲ್ ಮಿಚೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಜಿದ್ದಿಗೆ ಬಿದ್ದರು. ಈ ವೇಳೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಆರಂಭದಲ್ಲಿ ಜಿದ್ದು ಕಂಡು ಬಂದಿತು.
ಆದರೆ, ಮಧ್ಯದಲ್ಲಿ ಬಿಡ್ ಅಖಾಡಕ್ಕೆ ರಾಯಲ್ ಆಗಿ ಎಂಟ್ರಿ ನೀಡಿದ ಡೇರಿಲ್ ಮಿಚೆಲ್ ಅವರಿಗೆ ಹಣ ಹೂಡಲು ಮುಂದಾಯಿತು. ಕೊನೆಗೆ 14 ಕೋಟಿ ನೀಡಿ ಬಾಜಿ ಗೆದ್ದು ಬೀಗಿತು.

ಡೇರಿಲ್ ಮಿಚೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ನ್ಯೂಜಿಲೆಂಡ್ ತಂಡದ ಟಾಪ್ ಆರ್ಡರ್‌ಗೆ ಆಧಾರವಾಗಿರುವ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲ್ಲರು. ಇವರು ಒಟ್ಟು 56 ಅಂತಾರಾಷ್ಟ್ರೀಯ ಪಂದ್ಯಗಳನ್ನು ನ್ಯೂಜಿಲೆಂಡ್ ತಂಡದ ಪರ ಆಡಿದ್ದು, 5 ಅರ್ಧಶತಕ ಸೇರಿದಂತೆ 1069 ರನ್ ಸಿಡಿಸಿದ್ದಾರೆ. ಅಲ್ಲದೆ ಚುಟುಕು ಫಾರ್ಮೆಟ್‌ನಲ್ಲಿ ಇವರು ಎಂಟು ವಿಕೆಟ್ ಸಹ ಕಬಳಿಸಿದ್ದಾರೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮಿಚೆಲ್ 10 ಪಂದ್ಯಗಳಲ್ಲಿ 592 ರನ್ ಬಾರಿಸಿದ್ದಾರೆ. ಅಲ್ಲದೆ 2 ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ. ಇವರಿಗೆ ಭಾರತದ ಪಿಚ್‌ಗಳ ಮೇಲೆ ಆಡುವ ಅನುಭವ ಇದ್ದು, ಇವರನ್ನು ಕೊಳ್ಳಲು ಮಾಲೀಕರು ಮುಗಿ ಬಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications