What A Catch: ಚೆನ್ನೈ ಸೂಪರ್ ಕಿಂಗ್ಸ್ ಸೋತರೂ ವೈರಲ್ ಆಗುತ್ತಿದೆ ಡೇವಿಡ್ ಬ್ರೆವಿಸ್ ಕ್ಯಾಚ್
ಚೆನ್ನೈನಲ್ಲಿ ನಡೆದ ಎಂ ಎ ಚಿದಂಬರಂ ಕ್ರೀಡಾಗಂಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್‌ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿದೆ. ಈ ಮೂಲಕ ಚೆನ್ನೈ ತವರಿನಲ್ಲಿ ಸತತ ಐದು ಸೋಲುಗಳನ್ನು ಕಂಡಿದೆ. ಈ ಮೂಲಕ ಸಿಎಸ್‌ಕೆ ಪ್ಲೇ ಆಫ್ ರೇಸ್‌ನಿಂದ ಹೊರ ನಡೆದಿದೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಸ್ಟಾರ್ ಆಟಗಾರ ಹಿಡಿದ ಕ್ಯಾಚ್ ಸಖತ್ ವೈರಲ್ ಆಗುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಯಾಮ್ ಕರನ್ ಬಾರಿಸಿದ 88 ರನ್‌ಗಳ ನೆರವಿನಿಂದ 19.2 ಓವರ್‍ಗಳಲ್ಲಿ 190 ರನ್ ಸೇರಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ 19.4 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಸೇರಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಸೋತರೂ ಸಹ ಡೇವಿಡ್ ಬ್ರೆವಿಸ್ ಹಿಡಿದ ಆ ಕ್ಯಾಚ್ ಸಖತ್ ವೈರಲ್ ಆಗುತ್ತಿದೆ.

ರವೀಂದ್ರ ಜಡೇಜಾ 18ನೇ ಓವರ್ ಮಾಡಲು ಮೈದಾನಕ್ಕೆ ಬಂದರು. ಈ ವೇಳೆ ಪಂಜಾಬ್ ಪರ ಶಶಾಂಕ್ ಸಿಂಗ್ ಬ್ಯಾಟ್ ಮಾಡ್ತಾ ಇದ್ದರು. ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶಶಾಂಕ್ ವಿಶ್ವಾಸದಿಂದ ಮುನ್ನುಗುತ್ತಿದ್ದರು. ಈ ವೇಳೆ ಶಶಾಂಕ್ ಸಿಂಗ್ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ಮೇಲಿನಿಂದ ಸಿಕ್ಸರ್ ಬಾರಿಸಲು ಮುಂದಾದರು. ಆದರೆ ಅದೇ ಕ್ಷೇತ್ರದಲ್ಲಿ ಸೂಪರ್ ಮ್ಯಾನ್ ಡೇವಿಡ್ ಬ್ರಾವಿಸ್ ಅಮೋಘ ಕ್ಯಾಚ್ ಪಡೆದರು.
ಆಗಿದ್ದೇನು?
ಚೆಂಡು ತಾನು ನಿಂತಲ್ಲೇ ಬರುತ್ತಿರುವುದನ್ನು ಗಮನಿಸಿ ಡೇವಿಡ್ ಬ್ರಾವಿಸ್ ನೆಗೆದು ಕ್ಯಾಚ್ ಪಡೆಯಲು ಮುಂದಾದರು. ಆದರೆ ಆಯಾ ತಪ್ಪಿ ಬೌಂಡರಿ ಲೈನ್ ಹೊರಗೆ ಹೊರಟರು. ಇವರು ಬಲಗಾಲು ಬೌಂಡರಿ ಹೊರಗೆ ಇಡುತ್ತಿದ್ದಂತೆ ಮತ್ತೆ ನೆಗೆದು ಚೆಂಡನ್ನು ಆಗಸಕ್ಕೆ ಚಿಮ್ಮಿದರು. ಅಂತಿಮವಾಗಿ ಬ್ರೆವಿಸ್ ಬೌಂಡರಿ ಗೆರೆಯೊಳಗೆ ನುಗ್ಗಿ ಅದ್ಭುತ ಕ್ಯಾಚ್ ಪೂರ್ಣಗೊಳಿಸಿದರು. ಮೈದಾನದಲ್ಲಿದ್ದ ಅಂಪೈರ್ ಮೂರನೇ ಅಂಪೈರ್‌ಗೆ ಕ್ಯಾಚ್ ಪರಿಶೀಲಿಸಲು ಸೂಚಿಸಿದರು. ಮೂರನೇ ಅಂಪೈರ್ ಪರಿಶೀಲಿಸಿದ ಬಳಿಕ ಔಟ್ ಎಂದು ತೀರ್ಮಾನ ತಿಳಿಸಿದರು. ಈ ಮೂಲಕ ಶಶಾಂಕ್ ಸಿಂಗ್ 12 ಎಸೆತಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಎರಡನೇ ಸ್ಥಾನಕ್ಕೆ ಬಡ್ತಿ
ಪಂಜಾಬ್ ಕಿಂಗ್ಸ್ ಈ ಪಂದ್ಯದಲ್ಲಿ ಜಯ ಸಾಧಿಸುತ್ತಾ ಇದ್ದಂತೆ ಅಂಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡಿತು. 2 ಅಂಕಗಳೊಂದಿಗೆ ಪಂಜಾಬ್ ಆಡಿದ 10 ಪಂದ್ಯಗಳಲ್ಲಿ 13 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಮೂಲಕ ಪ್ಲೇ ಆಫ್‌ಗೆ ತಾನು ಸಹ ಕಠಿಣ ಸ್ಪರ್ಧಿ ಎಂದು ಸಾರಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications