For Quick Alerts
ALLOW NOTIFICATIONS  
For Daily Alerts
 

ಮಿಲ್ಲರ್, ಡು ಪ್ಲೆಸಿಸ್ ಜೊತೆಯಾಟ, ಆಸೀಸ್‌ ವಿರುದ್ಧ ದ.ಆಫ್ರಿಕಾಕ್ಕೆ ಜಯ

David Miller, Faf du Plessis plunder records as they smash Australia

ಹೋಬಾರ್ಟ್, ನವೆಂಬರ್ 11: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಹೋಬಾರ್ಟ್‌ನ ಬೆಲ್ಲರೈವ್ ಓವಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನಾಡುತ್ತಿದ್ದು, ಅಮೋಘ ಜೊತೆಯಾಟ ನೀಡಿದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಫಾ ಡು ಪ್ಲೆಸಿಸ್ ದಾಖಲೆ ಬರೆದಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 40 ರನ್ ಜಯ ಸಾಧಿಸಿದೆ.2-1ರಿಂದ ಏಕದಿನ ಸರಣಿ ದಕ್ಷಿಣ ಆಫ್ರಿಕಾ ವಶವಾಗಿದೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43618

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾಕ್ಕೆ ಬೀಸುಗೈ ಬ್ಯಾಟ್ಸ್ಮನ್ ಗಳಾದ ಮಿಲ್ಲರ್ ಮತ್ತು ಪ್ಲೆಸಿಸ್ ಜೊತೆಯಾಟದ ಬೆಂಬಲ ದೊರೆಯಿತು. ನಾಯಕ ಪ್ಲೆಸಿಸ್ 15 ಬೌಂಡರಿ, 2 ಸಿಕ್ಸರ್ ಸೇರಿ 125 ರನ್ ಪೇರಿಸಿದರೆ, ಮಿಲ್ಲರ್ 13 ಬೌಂಡರಿ, 4 ಸಿಕ್ಸರ್ ಸೇರಿ ತಂಡದ ಖಾತೆಗೆ 139 ರನ್ ಸೇರಿಸಿದರು.

15.3 ಓವರ್ ನಲ್ಲಿ ಮಾರ್ಕ್ರಮ್ ಔಟಾದಾಗ ಆಫ್ರಿಕಾದ ಮೂರನೇ ವಿಕೆಟ್ ನಷ್ಟಕ್ಕೆ ಬರೀ 55 ರನ್ ಕಲೆ ಹಾಕಿತ್ತು. ಅನಂತರ ಜೊತೆಯಾಟಕ್ಕೆ ನಿಂತ ಮಿಲ್ಲರ್-ಪ್ಲೆಸಿಸ್ ಜೋಡಿ ಭರ್ಜರಿ 252 ರನ್ ಸೇರಿಸಿತು. ಆಸ್ಟ್ರೇಲಿಯಾ ವಿರುದ್ಧ ಆಫ್ರಿಕಾ ದಾಖಲಿಸಿದ ಅತ್ಯಧಿಕ ಜೊತೆಯಾಟದ ರನ್ ಇದು. ಹೀಗಾಗಿ ಸೌತ್ ಆಫ್ರಿಕಾ 50 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 320 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಶಾನ್ ಮಾರ್ಷ್ 106, ಮಾರ್ಕಸ್ ಸ್ಟೊಯಿನಿಸ್ 63, ಅಲೆಕ್ಸ್ ಕ್ಯಾರಿ 42 ರನ್ ಪೇರಿಸಿ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಜಯ ಒಲಿಯಲಿಲ್ಲ. ಆಸ್ಟ್ರೇಲಿಯಾ 50 ಓವರ್ ಗೆ 9 ವಿಕೆಟ್ ಕಳೆದು 280 ರನ್ ಪೇರಿಸಲಷ್ಟೇ ಶಕ್ತವಾಯಿತು.

Story first published: Sunday, November 11, 2018, 17:31 [IST]
Other articles published on Nov 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+