ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಅಳಿಸಿದ ಡೇವಿಡ್ ಮಿಲ್ಲರ್
ಅಹಮದಾಬಾದ್: ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ, ಸೂರ್ಯಕುಮಾರ್ ಯಾದವ್ ಪಡೆಯನ್ನು ಸೋಲಿಸಿ ಅಬ್ಬರಿಸಿತು. ಈ ಪಂದ್ಯದಲ್ಲಿ 36 ವರ್ಷದ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರ ಈ ಕ್ಲಾಸಿಕ್ ಇನಿಂಗ್ಸ್ ಫಲವಾಗಿ ಇವರು ದೊಡ್ಡ ದಾಖಲೆಯನ್ನು ಬರೆದರು. ಹಾಗಿದ್ದಾರೆ ಭಾರತದ ವಿರುದ್ಧ ಡೇವಿಡ್ ಮಿಲ್ಲರ್ ನಿರ್ಮಿಸಿದ ದಾಖಲೆ ಏನು ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ದಕ್ಷಿಣ ಆಫ್ರಿಕಾ ಸೂಪರ್ 8 ಹಂತದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ಪಂದ್ಯದಲ್ಲಿ ಆಫ್ರಿಕಾ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಧಾರವಾಗಿದ್ದು, ಡೇವಿಡ್ ಮಿಲ್ಲರ್ ಹಾಗೂ ಡೆವಾಲ್ಡ್ ಬ್ರೆವಿಸ್. ಈ ಜೋಡಿ 4ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮಿಲ್ಲರ್ 35 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿದಂತೆ 63 ರನ್ ಗಳಿಸಿದರು. ಈ ಮೂಲಕ ಮಿಲ್ಲರ್ ದೊಡ್ಡ ದಾಖಲೆಯನ್ನು ಬರೆದರು.

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಡೆವಿಡ್ ಮಿಲ್ಲರ್ ದಾಖಲೆ ಅಮೋಘ. ಇವರು ಭಾನುವಾರ ನಡೆದ ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸಿದರು. ಈ ಮೂಲಕ ಇವರು ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇವರು ಭಾರತದ ವಿರುದ್ಧ 26 ಇನ್ನಿಂಗ್ಸ್‌ಗಳಲ್ಲಿ ಅವರು ಈಗ 39 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಡೇವಿಡ್ ಮಿಲ್ಲರ್, ದಕ್ಷಿಣ ಆಫ್ರಿಕಾ, 39 ಸಿಕ್ಸರ್
ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ, 38 ಸಿಕ್ಸರ್
ನಿಕೋಲಸ್ ಪೂರನ್, ವೆಸ್ಟ್ ಇಂಡೀಸ್, 35 ಸಿಕ್ಸರ್
ದಸುನ್ ಶನಕ್, ಶ್ರೀಲಂಕಾ, 30 ಸಿಕ್ಸರ್
ಎವಿನ್ ಲೂಯಿಸ್, ವೆಸ್ಟ್ ಇಂಡೀಸ್, 28 ಶತಕ
ಭಾರತಕ್ಕೆ ಮುಖಭಂಗ
ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 76 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಭಾರತ 2022 ಟಿ20 ವಿಶ್ವಕಪ್ ಬಳಿಕ ಮೊದಲ ಸೋಲನ್ನು ಅನುಭವಿಸಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ ಗೆಲುವು ದಾಖಲಿಸಿ ಪ್ರಶಸ್ತಿಯ ಸುತ್ತು ಪ್ರವೇಶಿಸಿತ್ತು. ಟೀಮ್ ಇಂಡಿಯಾ ಲೀಗ್ ಹಂತದ ಪಂದ್ಯದಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಹೊಂದಿದೆ. ಸೂಪರ್ 8 ಹಂತದಲ್ಲಿ ಭಾರತದ ಚೆನ್ನೈನಲ್ಲಿ ಫೆ.26 ರಂದು ಜಿಂಬಾಬ್ವೆ ವಿರದ್ಧ, ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications