ವಿಶ್ವಕಪ್ ಬಳಿಕ ಐಸಿಸಿ ಹುದ್ದೆ ತ್ಯಜಿಸಲಿರುವ ಡೇವಿಡ್ ರಿಚರ್ಡ್ಸನ್

ಲಂಡನ್, ಜುಲೈ 4: ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ಸನ್ ಅವರು 2019ರ ವಿಶ್ವಕಪ್ ಬಳಿಕ ಹುದ್ದೆಯಿಂದ ಕೆಳಕ್ಕಿಳಿಯಲಿದ್ದಾರೆ.
2012ರಿಂದ ಈ ಹುದ್ದೆಯನ್ನು ವಹಿಸಿಕೊಂಡಿರುವ ಡೇವಿಡ್ ರಿಚರ್ಡ್ಸನ್, ತಮ್ಮ ಒಪ್ಪಂದದ ಅವಧಿನ ಮುಗಿಯುತ್ತಿರುವುದರಿಂದ ಕ್ರಿಕೆಟ್ ಜಗತ್ತಿನ ಪರಮೋಚ್ಛ ಆಡಳಿತ ಮಂಡಳಿಯ ಉನ್ನತ ಅಧಿಕಾರವನ್ನು ಅಂತ್ಯಗೊಳಿಸಲಿದ್ದಾರೆ.
ಅವರ ಸ್ಥಾನಕ್ಕೆ ಶೀಘ್ರದಲ್ಲಿಯೇ ಅರ್ಹರ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.
ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಆಗಿರುವ ರಿಚರ್ಡ್ಸನ್, 2002ರಲ್ಲಿ ಐಸಿಸಿಯ ಮೊದಲ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಐಸಿಸಿಯಲ್ಲಿ ದೀರ್ಘ ಕಾಲದ ಅನುಭವವುಳ್ಳ ರಿಚರ್ಡ್ಸನ್ ಅವರನ್ನು ಐಸಿಸಿ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಹರೂನ್ ಲಾರ್ಗಟ್ ಅವರ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
ಐಸಿಸಿ ಆದಾಯ ಹಂಚಿಕೆ ವಿಚಾರದಲ್ಲಿ 'ಬಿಗ್ ಥ್ರೀ' ದೇಶಗಳಾದ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ನಡುವೆ ಉದ್ಭವಿಸಿದ ತಿಕ್ಕಾಟವನ್ನು ಬಗೆಹರಿಸಿದ, ವಿಶ್ವಕಪ್‌ಅನ್ನು ಹತ್ತು ತಂಡಗಳಿಗೆ ಕಡಿತಗೊಳಿಸಿದ ಮತ್ತು ಏಕದಿನ ಲೀಗ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಅನುಮೋದನೆ ನೀಡಿದ ಕೀರ್ತಿ ರಿಚರ್ಡ್ಸನ್ ಅವರಿಗೆ ಸಲ್ಲುತ್ತದೆ.
ಅಲ್ಲದೆ, ಅವರ ಅವಧಿಯಲ್ಲಿ ಐಸಿಸಿಯ ಆದಾಯವೂ ಹೆಚ್ಚಾಗಿದೆ. 2014ರಲ್ಲಿ ಸ್ಟಾರ್ ಸ್ಪೋರ್ಟ್ಸ್ ಜತೆ ಎಂಟು ವರ್ಷಗಳ ಪ್ರಸಾರ ಹಕ್ಕು ಒಪ್ಪಂದವನ್ನು ಪ್ರಕಟಿಸಿದ್ದರು.
ಟೀಕೆಗಳ ನಡುವೆಯೂ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಟೆಸ್ಟ್ ಆಡುವ ಮಾನ್ಯತೆಯನ್ನು ಐಸಿಸಿ ನೀಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications