ಡೆಲ್ಲಿ ತಂಡಕ್ಕೆ ಮರಳಿದ ವಾರ್ನರ್: ಬಂದಿದ್ದೇ ತಡ ರೀಲ್ಸ್ ಮಾಡಲು ಐಡಿಯಾ ಕೊಡಿ ಅಂದ್ರು!

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಇದರೊಂದಿಗೆ ಇಷ್ಟು ದಿನ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಆಡುತ್ತಿದ್ದ ಡೇವಿಡ್ ವಾರ್ನರ್ ಈ ಋತುವಿನಲ್ಲಿ ಡೆಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ.
2 ಕೋಟಿ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿಗೆ ಬಂದಿದ್ದ ವಾರ್ನರ್ ಅವರನ್ನು ದೆಹಲಿ 6 ಕೋಟಿ 25 ಲಕ್ಷಕ್ಕೆ ಖರೀದಿಸಿತು. ಈ ಮೂಲಕ ಡೇವಿಡ್ ವಾರ್ನರ್‌ನ ಮೊದಲ ಐಪಿಎಲ್ ತಂಡ ಆದರೆ, ಡೆಲ್ಲಿಗೆ ಮರಳಿದ್ದಾರೆ. ಡೇವಿಡ್ ವಾರ್ನರ್ 2009 ರಿಂದ 2013 ರವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಪ್ರತಿನಿಧಿಸಿದ್ದರು. ನಂತರ ಅವರು 2014 ರಿಂದ 2021 ರವರೆಗೆ ಸನ್‌ರೈಸರ್ಸ್‌ಗಾಗಿ ದೀರ್ಘಕಾಲ ಆಡಿದರು.
ಡೇವಿಡ್ ವಾರ್ನರ್ ಅವರು ಅಂತಿಮವಾಗಿ ತಮ್ಮ ಹಳೆಯ ತಂಡವನ್ನು ಸೇರಿಕೊಂಡಿದ್ದು ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂಬರುವ ಋತುವಿನಲ್ಲಿ ಹೊಸ ಮ್ಯಾನೇಜ್‌ಮೆಂಟ್, ಹೊಸ ತಂಡದ ಸದಸ್ಯರು ಮತ್ತು ಹೊಸ ಸಿಬ್ಬಂದಿಯನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮತ್ತೆ ದೆಹಲಿಯ ಅಭಿಮಾನಿಗಳಿಗೆ ಹತ್ತಿರವಾಗುತ್ತಿರುವುದು ಸಂತಸ ತಂದಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಾರ್ನರ್ ತಮ್ಮ ಹೊಸ ತಂಡ ದೆಹಲಿಯ ಅಭಿಮಾನಿಗಳಿಗೂ ಶುಭ ಹಾರೈಸಿದ್ದಾರೆ. ಅದೇನೆಂದರೆ, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ಸಲಹೆಗಳನ್ನು ನೀಡುವಂತೆ ಅವರು ತಮ್ಮ ಹೊಸ ಅಭಿಮಾನಿಗಳ ತಂಡವನ್ನು ಕೇಳಿದರು. ಕಳೆದ ಋತುವಿನಲ್ಲಿ ಸನ್ ರೈಸರ್ಸ್ ತಂಡವನ್ನು ಪ್ರತಿನಿಧಿಸಿದ್ದ ವಾರ್ನರ್ ಹಲವು ಕಾರಣಗಳಿಂದ ತಂಡದ ರೀಟೈನ್ ಪಟ್ಟಿಯಿಂದ ಹೊರಗುಳಿದಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ವಾರ್ನರ್ ಭಾರಿ ಬೆಲೆ ಪಡೆಯುತ್ತಾರೆ ಎಂಬ ಎಲ್ಲಾ ಊಹಾಪೋಹಗಳ ಹೊರತಾಗಿಯೂ, ಇದು ಸಂಭವಿಸಲಿಲ್ಲ. ಸಾಮಾನ್ಯ ಬೆಲೆಗೆ ವಾರ್ನರ್ ಮಾರಾಟವಾದ್ರು.
ಡೇವಿಡ್ ವಾರ್ನರ್ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಐಪಿಎಲ್ 41.6ರ ಬ್ಯಾಟಿಂಗ್ ಸರಾರಸಿಯಲ್ಲಿ ವಾರ್ನರ್ 150 ಪಂದ್ಯಗಳನ್ನು ಆಡಿದ್ದು, 5449 ರನ್ ಗಳಿಸಿದ್ದಾರೆ.
ಡೇವಿಡ್ ವಾರ್ನರ್ ಹೆಸರಿನಲ್ಲಿ 4 ಶತಕಗಳು ಸೇರಿದಂತೆ ಬರೋಬ್ಬರಿ 50 ಅರ್ಧ ಶತಕಗಳು ಸೇರಿವೆ. ಇದರ ಜೊತೆಗೆ ವಾರ್ನರ್ 200 ಭರ್ಜರಿ ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ.
ಡೇವಿಡ್ ವಾರ್ನರ್ ಹರಾಜಾದ ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಹೀಗಿದೆ
ಡೇವಿಡ್ ವಾರ್ನರ್ (6.25 ಕೋಟಿ), ಮಿಚೆಲ್ ಮಾರ್ಷ್ (6.5 ಕೋಟಿ), ಶಾರ್ದೂಲ್ ಠಾಕೂರ್ (10.75 ಕೋಟಿ), ಮುಸ್ತಾಫಿಜುರ್ ರೆಹಮಾನ್ (2 ಕೋಟಿ), ಕುಲ್ದೀಪ್ ಯಾದವ್ (2 ಕೋಟಿ), ಅಶ್ವಿನ್ ಹೆಬ್ಬಾರ್ (20 ಲಕ್ಷ), ಸರ್ಫರಾಜ್ ಖಾನ್ (20 ಲಕ್ಷ), ಕಮಲೇಶ್ ನಾಗರಕೋಟಿ (1.1 ಕೋಟಿ), ಕೆಎಸ್ ಭರತ್ (2 ಕೋಟಿ), ಮನ್ದೀಪ್ ಸಿಂಗ್ (1.1 ಕೋಟಿ), ಸೈಯದ್ ಖಲೀಲ್ ಅಹ್ಮದ್ (5.25 ಕೋಟಿ), ಚೇತನ್ ಸಕರಿಯಾ (4.2 ಕೋಟಿ), ಲಲಿತ್ ಯಾದವ್ ( 65 ಲಕ್ಷ), ರಿಪಾಲ್ ಪಟೇಲ್ (20 ಲಕ್ಷ), ಯಶ್ ಧುಲ್ (50 ಲಕ್ಷ), ರೋವ್ಮನ್ ಪೊವೆಲ್ (2.8 ಕೋಟಿ), ಪ್ರವೀಣ್ ದುಬೆ (50 ಲಕ್ಷ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications