ಐಪಿಎಲ್ 2019: ವಿರಾಟ್ ಕೊಹ್ಲಿ ದಾಖಲೆ ಸರಿ ದೂಗಿಸಿದ ಡೇವಿಡ್ ವಾರ್ನರ್

ಹೈದರಾಬಾದ್, ಏಪ್ರಿಲ್ 22: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 21) ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅರ್ಧ ಶತಕ ಬಾರಿಸುವುದರೊಂದಿಗೆ ಎಸ್‌ಆರ್‌ಎಚ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ.
'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'
38 ಎಸೆತಗಳಲ್ಲಿ ವಾರ್ನರ್ 67 ರನ್ ಕಲೆ ಹಾಕಿದರು. ಮತ್ತೊಬ್ಬ ಆಟಗಾರ ಜಾನಿ ಬೇರ್ಸ್ಟೊವ್ ಕೂಡ 43 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದ್ದರಿಂದ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.
ಐಪಿಎಲ್ ಸೀಸನ್‌ನಲ್ಲಿ ಡೇವಿಡ್ ವಾರ್ನರ್ ಮತ್ತು ಕೊಹ್ಲಿಯ ಸಾಧನೆಯ ಕೆಲ ಅಂಕಿ ಅಂಶಗಳು ಇಲ್ಲಿವೆ.

ಐದು ಸಾರಿ 500+ ರನ್
ಪಂದ್ಯದಲ್ಲಿ 67 ರನ್ ಸೇರಿದ್ದರಿಂದ 2019ರ ಸೀಸನ್‌ನಲ್ಲಿ ವಾರ್ನರ್ ಒಟ್ಟು 500 ರನ್ ಪೂರೈಸಿಕೊಂಡಿದ್ದಾರೆ. ಇಲ್ಲಿಗೆ ಒಟ್ಟಿಗೆ 5 ಐಪಿಎಲ್ ಸೀಸನ್‌ಗಳಲ್ಲಿ ವಾರ್ನರ್ 500+ ರನ್ ಬಾರಿಸಿದಂತಾಗಿದೆ. ಹೀಗಾಗಿ ಇದೇ ಸಾಧನೆ ಹೊಂದಿರುವ ಕೊಹ್ಲಿ ಸಾಲಿನಲ್ಲಿ ವಾರ್ನರ್ ಕೂಡ ಸೇರಿದ್ದಾರೆ.

ಕೊಹ್ಲಿ-ವಾರ್ನರ್ ಮುಂದು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 2011, 2013, 2015, 2016 ಮತ್ತು 2018ರಲ್ಲಿ 500+ ರನ್‌ಗಳನ್ನು ಗಳಿಸಿದ್ದರು. ಐಪಿಎಲ್‌ನಲ್ಲಿ ಐದು ಸಾರಿ 500+ ರನ್ ಗಳಿಸಿದವರ ಸಾಲಿನಲ್ಲಿ ಕೊಹ್ಲಿ ಮತ್ತು ವಾರ್ನರ್ ಸದ್ಯ ಮುಂದಿದ್ದಾರೆ.

ದ್ವಿತೀಯ ಸ್ಥಾನದಲ್ಲಿರುವ ಪ್ರಮುಖ ಆಟಗಾರರು
ಐಪಿಎಲ್ ಇತಿಹಾಸದಲ್ಲಿ ಐದು ಸಾರಿ 500+ ರನ್ ಗಳಿಸಿ ದಾಖಲೆ ಸೃಷ್ಟಿಸಿರುವ ಕೊಹ್ಲಿ ಮತ್ತು ವಾರ್ನರ್ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಕ್ರಿಸ್ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ ಇದ್ದಾರೆ. ಇವರೆಲ್ಲರ ಹೆಸರಿನಲ್ಲಿ ತಲಾ 3 ಸಾರಿ 500+ ರನ್ ಗಳಿಸಿದ ದಾಖಲೆಯಿದೆ.

ಈ ಸೀಸನ್‌ನಲ್ಲಿ ಅತ್ಯಧಿಕ ರನ್
ಚೆಂಡು ವಿರೂಪ ಕ್ರಕರಣದಲ್ಲಿ ಒಂದು ವರ್ಷದ ನಿಷೇಧ ಅನುಭವಿಸಿದ ವಾರ್ನರ್, ಸ್ಟೀವ್ ಸ್ಮಿತ್ ಈಗ ಐಪಿಎಲ್‌ಗೆ ಹಿಂದಿರುಗಿದ್ದಾರೆ. ಕಳೆದ ವರ್ಷ ನಿಷೇಧಕ್ಕೀಡಾಗಿದ್ದರಿಂದ ಇಬ್ಬರೂ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಇವರಲ್ಲಿ ವಾರ್ನರ್ ಈ ಸೀಸನ್‌ನಲ್ಲಿ ಈಗಾಗಲೇ ಒಟ್ಟು 517 ರನ್‌ನೊಂದಿಗೆ ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications