Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್‌

ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್‌ ನಡೆಯುತ್ತಿದೆ. ಈ ಲೀಗ್‌ನ 21ನೇ ಪಂದ್ಯದಲ್ಲಿ ಸಿಡ್ನಿ ಥಂಡರ್ ಮತ್ತು ಹೋಬಾರ್ಟ್ ಹರಿಕೇನ್ಸ್ ತಂಡಗಳು ಕಾದಾಟವನ್ನು ನಡೆಸಿದವು. ಸಿಡ್ನಿ ಥಂಡರ್ ನೀಡಿದ್ದ 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೋಬಾರ್ಟ್‌ ತಂಡ ಇನ್ನು 13 ಎಸೆತ ಬಾಕಿ ಇರುವಂತೆ 6 ವಿಕೆಟ್‌ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸಿಡ್ನಿ ತಂಡ ಸೋಲು ಕಂಡರೂ ಸಹ ಆರಂಭಿಕ ಆಟಗಾರ ಡೇವಿಡ್ ವಾರ್ನರ್‌ ಶತಕ ಬಾರಿಸುವ ಮೂಲಕ, ವಿರಾಟ್‌ ಕೊಹ್ಲಿ ಸಾಧನೆಯ ಸಮಕ್ಕೆ ನಿಂತಿದ್ದಾರೆ.

ಸಿಡ್ನಿ ಥಂಡರ್ಸ್ ಪರ ಬ್ಯಾಟ್ ಮಾಡಿದ ಡೇವಿಡ್ ವಾರ್ನರ್ ತಮ್ಮ ನೈಜ ಆಟವನ್ನು ಆಡಿದರು. ಇವರು ಕೇವಲ 65 ಎಸೆತಗಳಲ್ಲಿ 11 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 130 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಮೂಲಕ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಅವರ ಸಮಕ್ಕೆ ನಿಂತರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟಿ20 ಕ್ರಿಕೆಟ್‌ನಲ್ಲಿ ತಲಾ 9 ಶತಕಗಳನ್ನು ಗಳಿಸಿದ್ದಾರೆ.

David Warner Equals Virat Kohli s T20 Century Record with Masterclass in Big Bash League

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆ ವೆಸ್ಟ್‌ ಇಂಡೀಸ್‌ ತಂಡದ ಕ್ರಿಸ್‌ ಗೇಲ್‌ ಅವರಿಗೆ ಸಲ್ಲುತ್ತದೆ. ಇವರು ಆಡಿದ 463 ಪಂದ್ಯಗಳಲ್ಲಿ 22 ಶತಕ ಬಾರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ 333 ಪಂದ್ಯಗಳಲ್ಲಿ 11 ಶತಕ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ರಿಲೀ ರೊಸ್ಸೌ 391 ಪಂದ್ಯಗಳಲ್ಲಿ 9 ಶತಕ ಬಾರಿಸಿದ್ದಾರೆ. ಇನ್ನು ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ಸಹ ಇಷ್ಟೇ ಶತಕಗಳನ್ನು ಕಲೆ ಹಾಕಿದ್ದಾರೆ.

ಡೇವಿಡ್‌ ವಾರ್ನರ್ ಹಾಗೂ ವಿರಾಟ್‌ ಕೊಹ್ಲಿ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಇವರಿಬ್ಬರೂ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿರುವುದರಿಂದ ಈ ಇಬ್ಬರೂ ತಮ್ಮ ಶತಕಗಳ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಬಹುದು.

ಪಂದ್ಯದ ಫಲಿತಾಂಶ

ಗುರಿಯನ್ನು ಹಿಂಬಾಲಿಸಿದ ಆರಂಭಿಕ ಆಟಗಾರರಾದ ಟಿಮ್ ವಾರ್ಡ್ ಮತ್ತು ಮಿಚೆಲ್ ಓವನ್ (45) ಜೋಡಿ ಮೊದಲ ವಿಕೆಟ್‌ಗೆ 108 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ ಟಿಮ್ ವಾರ್ಡ್ ಅಮೋಘ ಆಟದ ಪ್ರದರ್ಶನ ನೀಡಿದರು. ಇವರು 49 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 90 ರನ್‌ ಬಾರಿಸಿ ಜಯದಲ್ಲಿ ಮಿಂಚಿದರು. ಉಳಿದಂತೆ ನಿಖಿಲ್ ಚೌಧರಿ, ಮ್ಯಾಥ್ಯೂ ವೇಡ್‌ ತಂಡಕ್ಕೆ ಜಯದ ಮಾಲೆ ತೊಡಿಸಿದರು.

Story first published: Sunday, January 4, 2026, 8:05 [IST]
Other articles published on Jan 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+