Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPLನಲ್ಲಿ ಡೇವಿಡ್ ವಾರ್ನರ್ ದಾಖಲೆ: ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿ

David Warner Involved In Most Century Stands In IPL

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ನಾಯಕ ಡೇವಿಡ್ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವಿನ ಬಳಿಕ ಪ್ಲೇ ಆಫ್‌ಗೆ ಎಂಟ್ರಿಕೊಟ್ಟ ಎಸ್‌ಆರ್‌ಹೆಚ್ ಪರ ವಾರ್ನರ್ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನೀಡಿದ 150 ರನ್‌ಗಳ ಗುರಿ ಬೆನ್ನಟ್ಟಿದ ಎಸ್‌ಆರ್‌ಎಚ್ ಭಾರೀ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸಿತು. ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹಾ ವಿಕೆಟ್ ಕೈ ಚೆಲ್ಲದೆ ಸನ್‌ರೈಸರ್ಸ್ ಹೈದ್ರಾಬಾದ್‌ಗೆ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ತಂದುಕೊಟ್ಟರು.

ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ SRH: ಪ್ಲೇ ಆಫ್‌ಗೆ ಎಂಟ್ರಿ

ಶತಕದ ಜೊತೆಯಾಟವಾಡಿದ ಈ ಜೋಡಿ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಒಂದು ವಿಕೆಟ್‌ ಅನ್ನು ಬಿಟ್ಟುಕೊಡದೆ 2.5 ಓವರ್ ಬಾಕಿ ಇರುವಂತೆಯೇ ಪಂದ್ಯ ಗೆದ್ದುಕೊಂಡಿತು. ಇದರ ಜೊತೆಗೆ ವಾರ್ನರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ (23) ಆಡಿದ ಆಟಗಾರ ಎಂಬ ಸಾಧನೆ ಮಾಡಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿಯಾಗಿರುವ ಆಟಗಾರರು:

ಡೇವಿಡ್ ವಾರ್ನರ್ 140 ಇನ್ನಿಂಗ್ಸ್‌ಗಳಲ್ಲಿ 23 ಶತಕದ ಜೊತೆಯಾಟ

ಕ್ರಿಸ್‌ಗೇಲ್ 131 ಇನ್ನಿಂಗ್ಸ್‌ಗಳಲ್ಲಿ 20 ಶತಕದ ಜೊತೆಯಾಟ

ವಿರಾಟ್ ಕೊಹ್ಲಿ 183 ಇನ್ನಿಂಗ್ಸ್‌ಗಳಲ್ಲಿ 17 ಶತಕದ ಜೊತೆಯಾಟ

ಎಬಿ ಡಿವಿಲಿಯರ್ಸ್ 155 ಇನ್ನಿಂಗ್ಸ್‌ಗಳಲ್ಲಿ 15 ಶತಕದ ಜೊತೆಯಾಟ

ಗೌತಮ್ ಗಂಭೀರ್ 152 ಇನ್ನಿಂಗ್ಸ್‌ಗಳಲ್ಲಿ 14 ಶತಕದ ಜೊತೆಯಾಟ

ಶಿಖರ್ ಧವನ್ 172 ಇನ್ನಿಂಗ್ಸ್‌ಗಳಲ್ಲಿ 13 ಶತಕದ ಜೊತೆಯಾಟ

Story first published: Wednesday, November 4, 2020, 9:43 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+