ಐಪಿಎಲ್‌ಗೆ ಮರಳಿ ದಾಖಲೆ ಬರೆದ ಸನ್ ರೈಸರ್ಸ್‌ನ ಡೇವಿಡ್ ವಾರ್ನರ್!


ಕೋಲ್ಕತ್ತಾ, ಮಾರ್ಚ್ 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಮರಳಿ 37ನೇ ಅರ್ಧ ಶತಕ ದಾಖಲಿಸಿದ್ದಾರೆ. ಭಾನುವಾರ (ಮಾರ್ಚ್ 24) ಕೋಲ್ಕತ್ತಾದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ಸ್ ರೈಡರ್ಸ್ ನಡುವಿನ ಪಂದ್ಯದಲ್ಲಿ ವಾರ್ನರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಮುಂಬೈ vs ಡೆಲ್ಲಿ ಪಂದ್ಯದ Live Score, ScoreCard ಕೆಳಗಿದೆ
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಐಪಿಎಲ್ 2ನೇ ಪಂದ್ಯದಲ್ಲಿ ಹೈದರಾಬಾದ್ ಪ್ರತಿನಿಧಿಸಿದ್ದ ಡೇವಿಡ್ ವಾರ್ನರ್ 53 ಎಸೆತಗಳಿಗೆ 85 ರನ್ ಸಿಡಿಸಿದರು. ಇದರಲ್ಲಿ 9 ಬೌಂಡರಿ ಮತ್ತು 3 ಸಿಕ್ಸ್‌ಗಳೂ ಸೇರಿದ್ದವು. ವಾರ್ನರ್ ಈ ಅರ್ಧಶತಕದೊಂದಿಗೆ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆಗೂ ಕಾರಣರಾಗಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅತ್ಯಧಿಕ ರನ್ ಬಾರಿಸಿದ ದಾಖಲೆಗಾಗಿ ಡೇವಿಡ್ ಗುರುತಿಸಿಕೊಂಡಿದ್ದಾರೆ. ಈಗ ವಾರ್ನರ್ ಒಟ್ಟು 762 ರನ್‌ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 757 ರನ್‌ನೊಂದಿಗೆ ಕೆಕೆಆರ್ ವಿರುದ್ಧ ಅತ್ಯಧಿಕ ರನ್‌ಗಾಗಿ ಗುರುತಿಸಿಕೊಂಡಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆತಿಥೇಯ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪದಲ್ಲಿ ಪಾಲ್ಗೊಂಡು ನಿಷೇಧಕ್ಕೀಡಾಗಿದ್ದರಿಂದ ಕಳೆದ ವರ್ಷ ಐಪಿಎಲ್‌ನಲ್ಲಿ ವಾರ್ನರ್ ಪಾಲ್ಗೊಂಡಿರಲಿಲ್ಲ. ಈ ಬಾರಿ ಮತ್ತೆ ಐಪಿಎಲ್‌ಗೆ ಹಿಂದಿರುಗಿದ್ದಷ್ಟೇ ಅಲ್ಲ, ಉತ್ತಮ ಬ್ಯಾಟಿಂಗ್‌ಗಾಗಿ ವಾರ್ನರ್ ಗಮನ ಸೆಳೆದರು. ಅಂದ್ಹಾಗೆ ಕೆಕೆಆರ್ ವಿರುದ್ಧದ ಈ ಪಂದ್ಯವನ್ನು ಹೈದರಾಬಾದ್ 6 ವಿಕೆಟ್‌ಗಳಿಂದ ಸೋತಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications