ವಾರ್ನರ್ or ಮನೀಶ್ ಪಾಂಡೆ: ಪಂತ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಯಾರು?

ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಿಷಭ್ ಪಂತ್ ಅವರು 2023ರ ಐಪಿಎಲ್‌ನ ಎಲ್ಲಾ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಹೀಗಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಂಗಾಮಿ ನಾಯಕನ ಅವಶ್ಯಕತೆಯಿದೆ.
ಕಳೆದ ಶುಕ್ರವಾರ ಬೆಳಿಗ್ಗೆ ಭೀಕರ ಅಪಘಾತದ ನಂತರ ರಿಷಭ್ ಯಾವುದೇ ಮೂಳೆ ಮುರಿತ ಅಥವಾ ಗಂಭೀರ ಆಂತರಿಕ ಗಾಯಗಳನ್ನು ಹೊಂದಿಲ್ಲ. ಆದರೆ ಮೇಲ್ಮೈ ಗಾಯದಿಂದ ಚರ್ಮ ಹರಿದಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನು ಐಪಿಎಲ್ ಆಡದಂತೆ ತಡೆಯಲಿದೆ.
ಈಗಾಗಲೇ ಸನ್‌ರೈಸರ್ಸ್ ತಂಡದ ನಾಯಕತ್ವದ ಅನುಭವ ಹೊಂದಿರುವ ಹಿರಿಯ ಆಟಗಾರ ಡೇವಿಡ್ ವಾರ್ನರ್ ಅವರು ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ ಮನೀಶ್ ಪಾಂಡೆ ಮತ್ತೊಂದು ಆಯ್ಕೆಯಾಗಿದೆ. ಆದರೆ ಪಾಂಡೆ ಇತ್ತೀಚೆಗೆ ತಂಡವನ್ನು ಸೇರಿಕೊಂಡಿರುವುದು ನಾಯಕತ್ವ ಅಸಂಭವವಾಗಿದೆ. ಯಾವುದೇ ಸಂದರ್ಭದಲ್ಲಿಯೂ, ಪಂದ್ಯಾವಳಿ ಸಮೀಪ ಬರುವವರೆಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ಬಹಿರಂಗಪಡಿಸುವುದಿಲ್ಲ.

ಪಂತ್ ಭೀಕರ ಕಾರು ಅಪಘಾತದಿಂದ ಬದುಕುಳಿಯುವಲ್ಲಿ ಯಶಸ್ವಿ
ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಭೀಕರ ಕಾರು ಅಪಘಾತದಿಂದ ಬದುಕುಳಿಯುವಲ್ಲಿ ಯಶಸ್ವಿಯಾದರು. ಕಾರು ಚಾಲನೆಯಿರುವಾಗ ನಿದ್ರೆಗೆ ಜಾರಿ ವೇಗದ ಕಾರನ್ನು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ರಿಷಭ್ ಪಂತ್ ಅವರ ಬೆನ್ನಿನ ಮೇಲೆ ಸಣ್ಣಪುಟ್ಟ ಗಾಯಗಳ ಜೊತೆಗೆ ಹಣೆಯ ಮೇಲೆ ಬಲವಾದ ಪೆಟ್ಟು ಬಿದ್ದಿದೆ.
ಪೃಥ್ವಿ ಶಾ, ಮನೀಶ್ ಪಾಂಡೆ ಮತ್ತು ಮಿಚೆಲ್ ಮಾರ್ಷ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಲು ಅನುಭವವಿರುವ ಆಟಗಾರರಾಗಿದ್ದಾರೆ. ಆದಾಗ್ಯೂ, ಡೇವಿಡ್ ವಾರ್ನರ್ ಅವರು ಆಸ್ಟ್ರೇಲಿಯಾ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಪ್ರಶಸ್ತಿಗಳಿಗೆ ಯಶಸ್ವಿಯಾಗಿ ಮುನ್ನಡೆಸಿದ ನಂತರ ಮುಂಚೂಣಿ ಸ್ಥಾನದಲ್ಲಿದ್ದಾರೆ.

ಡೇವಿಡ್ ವಾರ್ನರ್ ಮತ್ತೆ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರರಲ್ಲಿ ವಾರ್ನರ್ ಕೂಡ ಒಬ್ಬರು. ಒಂದು ವೇಳೆ ರಿಷಭ್ ಪಂತ್ ಐಪಿಎಲ್ 2023ರಲ್ಲಿ ಭಾಗವಹಿಸದಿದ್ದರೆ, ಸುದೀರ್ಘ ಅನುಪಸ್ಥಿತಿಯ ನಂತರ ಡೇವಿಡ್ ವಾರ್ನರ್ ಮತ್ತೆ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.
2021ರ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ನಂತರ ಮತ್ತೆ ಡೆಲ್ಲಿ ತಂಡ ಸೇರಿದ ನಂತರ ಫಾರ್ಮ್‌ಗೆ ಮರಳುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ನಿಸ್ಸಂದೇಹವಾಗಿ ಹೊರಕ್ಕೆ
ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳುವುದು ಇದೀಗ ಮೊದಲ ಆದ್ಯತೆಯಾಗಿರುವುದರಿಂದ, ದೆಹಲಿ ಕ್ಯಾಪಿಟಲ್ಸ್ ಈ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ತಿಳಿದುಬಂದಿದೆ. ಸಮಯ ಬಂದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಕುತೂಹಲಕಾರಿ ಅಂಶವೆಂದರೆ, ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ಒಳಗಾದ ನಂತರ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ನಾಯಕನನ್ನಾಗಿ ಮಾಡಲಾಗಿತ್ತು. ರಿಷಭ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ನಿಸ್ಸಂದೇಹವಾಗಿ ಹೊರಗುಳಿದಿದ್ದರೂ, ಅವರು ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಎಂದು ನಿರ್ಧರಿಸಲು ಇನ್ನೂ ಕಾಲಾವಕಾಶ ಇದೆ ಎಂದು ಬಿಸಿಸಿಐ ತಿಳಿಸಿದೆ.
"ರಿಷಭ್ ಪಂತ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಅವರು ವಿಶ್ರಾಂತಿ ಪಡೆಯಲಿ ಮತ್ತು ಉತ್ತಮ ಆರೋಗ್ಯದಿಂದ ಹೊರಬರಲಿ. ಒಮ್ಮೆ ಚೇತರಿಸಿಕೊಂಡ ನಂತರ, ಪಂತ್ ಅವರನ್ನು ಸಂಪೂರ್ಣ ಮೌಲ್ಯಮಾಪನಕ್ಕಾಗಿ ಎನ್‌ಸಿಎಗೆ ವರದಿ ಮಾಡಲಾಗುತ್ತದೆ. ವೈದ್ಯರ ಪ್ರಕಾರ, ಪಂತ್ ಆರು ತಿಂಗಳ ಕಾಲ ಹೊರಗಿರಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಆಸ್ಪತ್ರೆ ವೈದ್ಯರೊಂದಿಗೆ ಸಂಪರ್ಕದಲ್ಲಿದೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಐಪಿಎಲ್ 2023ರ ದೆಹಲಿ ಕ್ಯಾಪಿಟಲ್ಸ್ ಪೂರ್ಣ ತಂಡ
ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಷ್ ಪಾಂಡೆ, ರಿಲೀ ರೊಸೌವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications