ರಿಷಭ್ ಪಂತ್‌ಗೆ 1.63 ಕೋಟಿ ರೂಪಾಯಿ ಮೋಸ ಮಾಡಿದ ಹರಿಯಾಣ ಕ್ರಿಕೆಟರ್: ಕೇಸ್ ದಾಖಲು

ಟೀಂ ಇಂಡಿಯಾ ವಿಕೆಟ್ ಕೀಪರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಸ್ಥಳೀಯ ಕ್ರಿಕೆಟಿಗನಿಂದ ಮೋಸಕ್ಕೆ ಒಳಗಾಗಿದ್ದಾರೆ. ಹರ್ಯಾಣದ ಕ್ರಿಕೆಟಿಗ ಮೃಣಾಂಕ್ ಸಿಂಗ್ ದುಬಾರಿ ವಾಚ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಕಡಿಮೆ ಬೆಲೆಗೆ ಕೊಡಿಸುವ ಭರವಸೆಯೊಂದಿಗೆ ಪಂತ್ ಅವರಿಂದ 1.63 ಕೋಟಿ ರೂಪಾಯಿ ಮೌಲ್ಯದ ಹಣ ಪಡೆದು ಪರಾರಿಯಾಗಿದ್ದಾರೆ.
ರಿಷಬ್ ಪಂತ್‌ಗೆ ದುಬಾರಿ ವಾಚ್ ಎಂದರೆ ತುಂಬಾ ಇಷ್ಟ. ವ್ಯಾನ್‌ಗಾರ್ಡ್ ಯಾಚಿಂಗ್ ಸಿರೀಸ್‌ನಿಂದ ವಾಚ್ ಖರೀದಿಸಲು ಸಾಕಷ್ಟು ಹಣ ಸುರಿದಿದ್ದರೆ. ಫ್ರಾಂಕ್ ಮರ್ಲರ್ 36 ಲಕ್ಷದ 25 ಸಾವಿರದ 120 ರೂ. ಅಲ್ಲದೇ ಇನ್ನೊಂದು ಕ್ರೇಜಿ ಕಲರ್ ರಿಚರ್ಡ್ ಮಿಲ್ಲೆ ಮತ್ತೊಂದು ವಾಚ್ ಗಾಗಿ 62 ಲಕ್ಷ 60 ಸಾವಿರ ರೂ.ಗೆ ಖರೀದಿಸಿದ್ದಾರೆ. ಆದ್ರೆ ಈ ಮಟ್ಟಿಗೆ ಹಣ ಪಡೆದು ಈ ಕಡೆ ವಾಚ್ ಕೂಡ ಇಲ್ಲ, ದುಡ್ಡು ಸಹ ಇಲ್ಲ ಎಂಬಂತಾಗಿದೆ.

ವಾಚ್‌ಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಕೈ ಕೊಟ್ಟರು
ವಾಚ್‌ಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಮತ್ತು ಬ್ರ್ಯಾಂಡೆಡ್ ವಾಚ್‌ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಪಂತ್‌ಗೆ ಬೋಗಸ್ ಚೆಕ್ ನೀಡಿ ವಂಚಿಸುತ್ತಿದ್ದ. ತಾನು ಮೋಸ ಹೋಗಿರುವುದನ್ನು ಅರಿತ ರಿಷಬ್ ಪಂತ್ ಹಾಗೂ ಆತನ ಮ್ಯಾನೇಜರ್ ಪುನೀತ್ ಸೋಲಂಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಮೃಣಾಂಕ್ ಸಿಂಗ್ 2021 ರ ಜನವರಿಯಲ್ಲಿ ರಿಷಬ್ ಪಂತ್ ಮತ್ತು ಅವರ ಮ್ಯಾನೇಜರ್ ಪುನೀತ್ ಸೋಲಂಕಿ ಅವರನ್ನು ಭೇಟಿಯಾದರು. ದುಬಾರಿ ಬೆಲೆಯ ಐಷಾರಾಮಿ ಕೈಗಡಿಯಾರಗಳು, ಬ್ಯಾಗ್‌ಗಳು ಮತ್ತು ಆಭರಣಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಹೊಸ ವ್ಯವಹಾರವನ್ನು ಅವರು ಪ್ರಾರಂಭಿಸಿದ್ದಾರೆ ಎಂದು ಅವರು ಸ್ವತಃ ಮನವರಿಕೆ ಮಾಡಿದರು. ಅವರು ಈ ರೀತಿಯ ಅನೇಕ ಕ್ರಿಕೆಟಿಗರಿಗೆ ವಾಚ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಳೆಯ ವಾಚ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ
ಹಳೆಯ ವಾಚ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ಮೃಣಾಂಕ್ ಸಿಂಗ್ ಹೇಳಿದ ಮಾತನ್ನು ನಂಬಿದ ರಿಷಬ್ ಪಂತ್ ಮತ್ತು ಸೋಲಂಕಿ ಅವರಿಗೆ ದುಬಾರಿ ವಾಚ್ ಹಾಗೂ ಒಂದಿಷ್ಟು ಚಿನ್ನಾಭರಣ ನೀಡಿದ್ದಾರೆ. ಫೆಬ್ರವರಿಯಲ್ಲಿ ಮೃಣಾಂಕ್ ಸಿಂಗ್ ಅವರು 1.63 ಲಕ್ಷ ಹಾಗೂ 70 ಸಾವಿರ 731 ರೂ.ಗಳ ಚೆಕ್ ಅನ್ನು ರಿಷಬ್ ಪಂತ್ ಅವರಿಂದ ಮರು ಮಾರಾಟಕ್ಕಾಗಿ ಖರೀದಿಸಿದ್ದರಂತೆ. ಆದರೆ, ಚೆಕ್ ಬೌನ್ಸ್ ಆಗುತ್ತಿದ್ದಂತೆ ಮೃಣಾಂಕ್ ವಿರುದ್ಧ ರಿಷಬ್ ಪಂತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕಳೆದ ವಾರ ನ್ಯಾಯಾಲಯ ಆತನಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು. ಜುಹು ಪೊಲೀಸರು ಆತನನ್ನು ಬಂಧಿಸಿ ಆತನಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಮೃಣಾಂಕ್ ಸಿಂಗ್ ಕೈಯಿಂದ ಅನೇಕ ಜನರು ಮೋಸ ಹೋಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಪ್ಲೇ ಆಫ್ ಟಿಕೆಟ್ ಕಳೆದುಕೊಂಡ ಡೆಲ್ಲಿ
ಐಪಿಎಲ್ 2022 ಸೀಸನ್ ಪ್ಲೇ-ಆಫ್ ರೇಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಟಿಕೆಟ್ ಕಳೆದುಕೊಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಎದುರಾಳಿ ಮುಂಬೈಗೆ 160ರನ್‌ಗಳ ಗುರಿ ನೀಡಿ ಡಿಫೆಂಡ್ ಮಾಡಿಕೊಳ್ಳಲಾಗದೆ ಪಂದ್ಯ ಸೋತಿತು. ಜೊತೆಗೆ ಪ್ಲೇ ಆಫ್ ತಲುಪುವ ಅವಕಾಶವನ್ನು ರಿಷಭ್ ಪಂತ್ ಮಿಸ್ ಮಾಡಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications