Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs CSK: ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ 17ನೇ ಆವೃತ್ತಿಯ 13ನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್ ಮಾಡಿಕೊಂಡಿತು. ಚೆನ್ನೈ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ.

ಡೆಲ್ಲಿ ತಂಡದ ಪರ ಕುಲ್ದೀಪ್‌ ಯಾದವ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ಗಾಯದಿಂದ ಬಳಲುತ್ತಿರುವ ಇವರು ಮೈದಾನಕ್ಕೆ ಇಳಿಯುತ್ತಿಲ್ಲ. ಇವರ ಬದಲಿಗೆ ವೇಗಿ ಇಶಾಂತ್‌ ಶರ್ಮಾ ತಂಡ ಸೇರಿಕೊಂಡಿದ್ದಾರೆ. ಇನ್ನು ಇದೇ ಟೂರ್ನಿಯಲ್ಲಿ ಮೊದಲ ಬಾರಿಗೆ ಸ್ಟಾರ್ ಪ್ಲೇಯರ್‌ ಪೃಥ್ವಿ ಶಾ ಅಂಗಳ ಪ್ರವೇಶಿಸಲಿದ್ದಾರೆ. ಇವರು ಡೆಲ್ಲಿ ತಂಡಕ್ಕೆ ಬಿಗ್‌ ಇನ್ನಿಂಗ್ಸ್‌ ಆಡುವ ಸೂಚನೆ ನೀಡಿದ್ದಾರೆ.

DC vs CSK IPL Match Toss Report Won the toss and elected to Field First on Spinning Track

ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕೆ ಇಳಿಯುತ್ತಿರುವ ಪೃಥ್ವಿ ಶಾ, ಅಬ್ಬರಿಸುವ ಸೂಚನೆ ನೀಡಿದ್ದಾರೆ. ಗಾಯದ ಕಾರಣದಿಂದ ಕೆಲವು ತಿಂಗಳು ಮೈದಾನದಿಂದ ಹೊರಗುಳಿದಿದ್ದ, ಪೃಥ್ವಿ ಶಾ ಐಪಿಎಲ್‌ನಲ್ಲಿ ಆರ್ಭಟಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಡೆಲ್ಲಿ ತಂಡದ ಪರ ಬಿಗ್ ಇನ್ನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಮಿಂಚುವ ಯೋಜನೆಯನ್ನು ಮಾಡಿಕೊಂಡಿದ್ದಾರೆ. ಪೃಥ್ವಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪವರ್ ಪ್ಲೇನಲ್ಲಿ ಪವರ್‌ ಫುಲ್‌ ಆಟವನ್ನು ಆಡಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ತಂಡಕ್ಕೆ ಮರಳಿರುವ ಇಶಾಂತ್ ಶರ್ಮಾ ತಮ್ಮ ಅನುಭವವನ್ನು ತಂಡಕ್ಕೆ ಧಾರೆ ಎರೆಯಬೇಕಿದೆ. ಅಲ್ಲದೆ ಪವರ್‌ ಪ್ಲೇನಲ್ಲಿ ಚೆನ್ನೈ ತಂಡಕ್ಕೆ ಕಟ್ಟಿ ಹಾಕಿದರೆ ಮಾತ್ರ ಗೆಲುವಿನ ಕನಸು ನನಸಾಗುತ್ತದೆ. ಇವರಿಗೆ ಸ್ಟಾರ್ ಬೌಲರ್‌ಗಳಾದ ಖಲೀಲ್ ಅಹ್ಮದ್‌, ಮುಖೇಶ್ ಕುಮಾರ್, ಎರ್ನಿಕ್ ನಾರ್ಟ್ಜೆ ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ.

ಸಿಎಸ್‌ಕೆ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಮಹೇಂದ್ರ ಸಿಂಗ್ ಧೋನಿ, ದೀಪಕ್ ಚಾಹರ್, ಮುಸ್ತಾಫಿಜುರ್, ತುಷಾರ್ ದೇಶಪಾಂಡೆ, ಮತೀಶ್‌ ಪತೀರಾಣ್,

ಡೆಲ್ಲಿ ಕ್ಯಾಪಿಟಲ್ಸ್‌ ತಂಡ: ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚ್ ಮಾರ್ಷ್, ರಿಷಭ್ ಪಂತ್ (ನಾಯಕ), ಟ್ರಿಸ್ಟಿಯನ್ ಸ್ಟಬ್ಸ್, ಅಭಿಷೇಕ್‌ ಪೋರೆಲ್‌, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಎರ್ನಿಕ್ ನಾರ್ಟ್ಜೆ, ಖಲೀಲ್‌ ಅಹ್ಮದ್,

Story first published: Sunday, March 31, 2024, 19:05 [IST]
Other articles published on Mar 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+