DC vs GT: ಆ ಒಂದು ತಪ್ಪಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ಪಂದ್ಯವನ್ನು ಸೋತಿತು
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 19ನೇ ಆವೃತ್ತಿ ಐಪಿಎಲ್‌ನ 14ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಜಯ ಸಾಧಿಸುವ ಕನಸು ಡೆಲ್ಲಿ ತಂಡದ್ದಾಗಿತ್ತು. ಟೈಟಾನ್ಸ್ ಹ್ಯಾಟ್ರಿಕ್ ಸೋಲಿನ ಭೀತಿಯನ್ನು ತಪ್ಪಿಸಿಕೊಳ್ಳಲು ಕಣಕ್ಕೆ ಇಳಿದಿದ್ದವು. ಆದರೆ ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಟೈಟಾನ್ಸ್ ರೋಚಕ ಜಯ ಸಾಧಿಸಿತು.
ಗುಜರಾತ್ ಟೈಟಾನ್ಸ್ ತಂಡ ಮೊದಲ ಗೆಲುವಿನ ನಗೆ ಬೀರುವಲ್ಲಿ ಹಲವು ಆಟಗಾರರು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಅದರಲ್ಲಿ ಎದ್ದು ಕಾಣುವ ಆಟಗಾರ ಎಂದರೆ ನಾಯಕ ಶುಭಮನ್ ಗಿಲ್. ಇವರು 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೊದಲ ಬಾರಿಗೆ ಪ್ರಸಕ್ತ ಋತುವಿನಲ್ಲಿ ಮೊದಲ ಅರ್ಧಶತಕ ಬಾರಿಸಿದ ಸಾಧನೆಯನ್ನು ತಮ್ಮದಾಗಿಸಿಕೊಂಡರು.

ಇದೇ ಪಂದ್ಯದಲ್ಲಿ ಟೈಟಾನ್ಸ್ ಪರ ಜೋಸ್ ಬಟ್ಲರ್ ಸಹ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 32 ಎಸೆತಗಳಲ್ಲಿ 55 ರನ್ ಸಿಡಿಸಿದರು. ಈ ಸ್ಟಾರ್ ಆಟಗಾರರ ಆಟವು ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲವಾಯಿತು. ಇದು ಗೆಲುವಿನ ಟರ್ನಿಂಗ್ ಪಾಯಿಂಟ್ ಅಲ್ಲವೇ ಅಲ್ಲ.
ಸ್ಪಿನ್ ಬೌಲರ್ ರಶೀದ್ ಖಾನ್ 4 ಓವರ್ ಬೌಲಿಂಗ್ ನಡೆಸಿ 17 ರನ್ ನೀಡಿ ಭರವಸೆಯ ಬ್ಯಾಟರ್ ನಿತೀಶ್ ರಾಣಾ, ಭರ್ಜರಿ ಫಾರ್ಮ್‌ನಲ್ಲಿರುವ ಸಮೀರ್ ರಿಜ್ವಿ, ಅಕ್ಷರ್ ಪಟೇಲ್ ಅವರ ವಿಕೆಟ್ ಪಡೆದು ಮಿಂಚಿದರು. ಇವರ ಈ ಬಿಗುವಿನ ದಾಳಿಯ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಆದರೆ ಪಂದ್ಯಕ್ಕೆ ತಿರುವು ನೀಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳು ಮಾಡಿದ ಆ ಒಂದು ತಪ್ಪು.

ಡೆಲ್ಲಿ ತಂಡದ ಆ ಒಂದು ತಪ್ಪು
ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 13 ರನ್ ಅವಶ್ಯಕತೆ ಇತ್ತು. ಪ್ರಸಿದ್ಧ್ ಕೃಷ್ಣ ಕೊನೆಯ ಓವರ್ ಮಾಡಲು ಮುಂದಾದರು. ಮೊದಲ ಎಸೆತದಲ್ಲಿ ವಿಪ್ರಜ್ ನಿಗಮ್ ಬೌಂಡರಿ ಬಾರಿಸಿದರು. ಎರಡನೇ ವಿಕೆಟ್‌ಗೆ ವಿಪ್ರಜ್ ನಿಗಮ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮೂರನೇ ಎಸೆತದಲ್ಲಿ ಕುಲ್‌ದೀಪ್ ಯಾದವ್ ಒಂದು ರನ್ ಪಡೆದ ಸ್ಟ್ರೈಕ್ ಡೇವಿಡ್ ಮಿಲ್ಲರ್ ನೀಡಿದರು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಸಿಕ್ಸರ್ ಬಾರಿಸಿದರು. ಕೊನೆಯ 2 ಎಸೆತಗಳಲ್ಲಿ 2 ರನ್ ಅವಶ್ಯಕತೆ ಇತ್ತು. ಆದರೆ ಐದನೇ ಎಸೆತದಲ್ಲಿ ಮಿಲ್ಲರ್ ಒಂದು ರನ್ ಪಡೆಯದೇ ಒತ್ತಡಕ್ಕೆ ಒಳಗಾದರು. ಆದರೆ ಕೊನೆಯ ಎಸೆತವನ್ನು ಪ್ರಸಿದ್ಧ್ ಆಫ್ ಸ್ಟಂಪ್ ಆಚೆಗೆ ಚೆಂಡನ್ನು ಎಸೆದರು. ಮಿಲ್ಲರ್ ಒಂದು ರನ್ ಪಡೆಯಲು ಮುಂದಾದರು. ಬಟ್ಲರ್ ಕೈಗೆ ಸೇರಿದ ಚೆಂಡು ನೇರವಾಗಿ ಸ್ಟಂಪ್‌ಗೆ ಥ್ರೋ ಮಾಡಿದರು. ಕುಲ್‌ದೀಪ್ ಯಾದವ್ ಕ್ರೀಸ್‌ಗೆ ಬರುವ ಮುನ್ನವೇ ಸ್ಟಂಪ್ಸ್ ಎಗರಿತ್ತು. ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಸಿಂಗಲ್ ರನ್ ಪಡೆದಿದ್ದರೂ, ಪಂದ್ಯ ಟೈ ಆಗುತ್ತಿತ್ತು. ಈ ಸುವರ್ಣ ಅವಕಾಶವನ್ನು ಸಹ ಮಿಲ್ಲರ್ ಕೈ ಚೆಲ್ಲಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications