ಐಪಿಎಲ್ ವಿಶಿಷ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ

ನವದೆಹಲಿ, ಏಪ್ರಿಲ್ 18: ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ಹಿರಿಮೆಗೆ ಪಾತ್ರರಾಗಿದ್ದಾರೆ. ನವದೆಹಲಿಯಲ್ಲಿ ಗುರುವಾರ (ಏಪ್ರಿಲ್ 18) ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮಿಶ್ರಾ ಈ ದಾಖಲೆ ನಿರ್ಮಿಸಿದರು.
ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ Live Score ಕೆಳಗಿದೆ
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ಮಿಶ್ರಾ 150 ವಿಕೆಟ್ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಲಸಿತ್ ಮಾಲಿಂಗ ಇದ್ದಾರೆ.
ಶ್ರೀಲಂಕಾ ವೇಗಿ ಮಾಲಿಂಗ ಒಟ್ಟು 114 ಐಪಿಎಲ್ ಪಂದ್ಯಗಳಲ್ಲಿ 161 ವಿಕೆಟ್ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಿಶ್ರಾ 140 ಪಂದ್ಯಗಳಲ್ಲಿ 150 ವಿಕೆಟ್ ಉರುಳಿಸಿದ್ದಾರೆ. ಈ ಯಾದಿಯಲ್ಲಿ ತೃತೀಯ ಸ್ಥಾನದಲ್ಲಿರುವ ಪೀಯೂಷ್ ಚಾವ್ಲಾ 152 ಪಂದ್ಯಗಳಲ್ಲಿ 146 ವಿಕೆಟ್ ಪಡೆದಿದ್ದಾರೆ.
ಇನ್ನುಳಿದ ಸ್ಥಾನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ (126 ಪಂದ್ಯ, 143 ವಿಕೆಟ್), 5ನೇ ಸ್ಥಾನದಲ್ಲಿ ಚೆನ್ನೈ ತಂಡದಲ್ಲಿರುವ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ 153 ಪಂದ್ಯಗಳಲ್ಲಿ 141 ಐಪಿಎಲ್ ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications