ಚೊಚ್ಚಲ ಐಪಿಎಲ್ ಅರ್ಧ ಶತಕ ಬಾರಿಸಿ ಹಿಸ್ಟರಿ ಬರೆದ ರಿಯಾನ್ ಪರಾಗ್!

ನವದೆಹಲಿ, ಮೇ 4: ರಾಜಸ್ಥಾನ್ ರಾಯಲ್ಸ್ ಯುವ ಬ್ಯಾಟ್ಸ್ಮನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಪೂರ್ವ ಸಾಧನೆಗೆ ಕಾರಣರಾಗಿದ್ದಾರೆ. ಐಪಿಎಲ್ ನಲ್ಲಿ ಅರ್ಧಶತಕ ಬಾರಿಸಿದ ಅತೀ ಕಿರಿಯ ಬ್ಯಾಟ್ಸ್ಮನ್ ಹಿರಿಮೆ ಈಗ ಪರಾಗ್ ಮುಡಿಗೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪರಾಗ್ ಈ ದಾಖಲೆ ನಿರ್ಮಿಸಿದ್ದಾರೆ.
ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶನಿವಾರ (ಮೇ 4) ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ 53ನೇ ಪಂದ್ಯದಲ್ಲಿ ಕಾದಾಡಿದ್ದವು. ಇದರಲ್ಲಿ ರಾಜಸ್ಥಾನ್ ಪರ ಒದ್ದಾಡಿದ್ದು ಪರಾಗ್ ಒಬ್ಬರೆ.
49 ಎಸೆತಗಳಿಗೆ 50 ರನ್ ಬಾರಿಸಿದ ಪರಾಗ್ ಐಪಿಎಲ್ ಇತಿಹಾಸದಲ್ಲೇ ವಿಶಿಷ್ಠ ದಾಖಲೆಗೆ ಕಾರಣರಾದರು.

ಸ್ಯಾಮ್ಸನ್ ದಾಖಲೆ ಬದಿಗೆ
ಐಪಿಎಲ್ ನಲ್ಲಿ ಅರ್ಧ ಶತಕ ಬಾರಿಸಿದ ಅತೀ ಕಿರಿಯ ಬ್ಯಾಟ್ಸ್ಮನ್ ದಾಖಲೆ ಈ ಹಿಂದೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿತ್ತು. ಈಗ ರಾಜಸ್ಥಾನ್ ತಂಡದಲ್ಲೇ ಇರುವ ಸ್ಯಾಮ್ಸನ್ 2013ರಲ್ಲಿ ದಾಖಲೆ ನಿರ್ಮಿಸಿದ್ದರು. ಸ್ಯಾಮ್ಸನ್‌ಗೆ ಆಗ 18 ವರ್ಷ 169 ದಿನ ವಯಸ್ಸಾಗಿತ್ತು. ನೂತನ ದಾಖಲೆ ಬರೆದಿರುವ ಪರಾಗ್‌ಗೆ 17 ವರ್ಷ 175 ದಿನ ವಯಸ್ಸು.

ಪರಾಗ್ ಅರ್ಧ ಶತಕ ವ್ಯರ್ಥ
ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಅತೀ ಪ್ರಮುಖವಾಗಿದ್ದ ಪಂದ್ಯದಲ್ಲೇ ರಾಜಸ್ಥಾನ್ ರಾಯಲ್ಸ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಹೀಗಾಗಿ ಪರಾಗ್ ದಾಖಲೆ ತಂಡಕ್ಕೆ ಗೆಲುವು ತರಲಿಲ್ಲ. ಪಂದ್ಯವನ್ನು ಆರ್‌ಆರ್ 5 ವಿಕೆಟ್‌ಗಳಿಂದ ಸೋತಿತು. ರಾಜಸ್ಥಾನ್ ತಂಡ ಐಪಿಎಲ್ ಕಡೇಯ ಪಂದ್ಯ ಆಡಿದಂತಾಯಿತು.

ಶಾ, ಪಂತ್, ಗಿಲ್ ದಾಖಲೆ
ಐಪಿಎಲ್‌ನಲ್ಲಿ ಇದೇ ದಾಖಲೆ ಈ ಹಿಂದೆ ಪೃಥ್ವಿ ಶಾ, ರಿಷಬ್ ಪಂತ್ ಮತ್ತು ಶುಭ್‌ಮಾನ್ ಗಿಲ್ ಕೂಡ ಮಾಡಿದ್ದರು. ಪೃಥ್ವಿ ಶಾ 2018ರಲ್ಲಿ (18 ವರ್ಷ 169 ದಿನಗಳು), ರಿಷಬ್ ಪಂತ್ 2016ರಲ್ಲಿ (18 ವರ್ಷ 212 ದಿನಗಳು), ಶುಭ್‌ಮಾನ್ ಗಿಲ್ 2018ರಲ್ಲಿ (18 ವರ್ಷ 237 ದಿನಗಳು) ದಾಖಲೆ ಬರೆದಿದ್ದರು.

ಆರ್ಆರ್ ಸೋಲಿಗೆ ಇಶಾಂತ್, ಮಿಶ್ರಾ ಕಾರಣ
ಗೆಲುವು ಮುಖ್ಯವಾಗಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದ್ದು ಅನುಭವಿ ಬೌಲರ್ ಇಶಾಂತ್ ಶರ್ಮಾ ಮತ್ತು ಅಮಿತ್ ಮಿಶ್ರಾ. ಇಶಾಂತ್ 38 ರನ್‌ಗೆ 3, ಮಿಶ್ರಾ 17 ರನ್‌ಗೆ 3 ವಿಕೆಟ್ ಕಬಳಿಸಿದ್ದರಿಂದ ಆರ್‌ಆರ್ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 115 ರನ್ ಪೇರಿಸಲಷ್ಟೇ ಶಕ್ತವಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications