Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ವಿಶೇಷ ಬೌಲಿಂಗ್ ಸಾಧನೆಗಾಗಿ ದಾಖಲೆ ಬರೆದ ದೀಪಕ್ ಚಾಹರ್

Deepak Chahar scripts IPL record with incredible show against Kolkata

ಚೆನ್ನೈ, ಏಪ್ರಿಲ್ 10: ಚೆನ್ನೈ ಸೂಪರ್ ಕಿಂಗ್ಸ್‌ನ ಮಧ್ಯಮ ವೇಗಿ ದೀಪಕ್ ಚಾಹರ್, ಸೋಮವಾರ (ಏಪ್ರಿಲ್ 9) ನಡೆದ ಐಪಿಎಲ್ 23ನೇ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿಗೆ ಕಾರಣರಾದ ಚಾಹರ್ ವಿಶೇಷ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಕೆಕೆಆರ್ vs ಸಿಎಸ್‌ಕೆ ಪಂದ್ಯದಲ್ಲಿ ಚಾಹರ್ 4 ಓವರ್‌ ಎಸೆದು 20 ರನ್‌ ನೀಡಿ ಕೆಕೆಆರ್ 3 ವಿಕೆಟ್ ಕೆಡವಿದ್ದರು. ಆರಂಭಿಕ ಆಟಗಾರ ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಮತ್ತು ನಿತೀಶ್ ರಾಣಾ ವಿಕೆಟ್‌ಗಳು ಚಾಹರ್‌ಗೆ ಲಭಿಸಿತ್ತು.

ದೀಪಕ್ ಚಾಹರ್ ಬೌಲಿಂಗ್ ನೆರವಿನಿಂದ ಚೆನ್ನೈ, ಎದುರಾಳಿ ಕೋಲ್ಕತ್ತಾವನ್ನು 20 ಓವರ್‌ಗಳಿಗೆ 108 ರನ್‌ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಚೇಸಿಂಗ್‌ ವೇಳೆ ಫಾ ಡು ಪ್ಲೆಸಿಸ್ 43 ರನ್ ಬೆಂಬಲದೊಂದಿಗೆ 17.2 ಓವರ್‌ನಲ್ಲಿ 3 ವಿಕೆಟ್ ಕಳೆದು 111 ರನ್ ಬಾರಿಸುವುದರೊಂದಿಗೆ 7 ವಿಕೆಟ್ ಗೆಲುವನ್ನಾಚರಿಸಿತು.

ಅಂದ್ಹಾಗೆ ಚಾಹರ್ ವಿಶಿಷ್ಟ ದಾಖಲೆ ಬರೆದಿದ್ದು ಡಾಟ್ ಬಾಲ್‌ಗಾಗಿ. 4 ಓವರ್‌ ಎಸೆದಿದ್ದ ಚಾಹರ್‌ 20 ಎಸೆತಗಳು ಡಾಟ್ ಎನಿಸಿತ್ತು. ಅಂದರೆ ಕೇವಲ 4 ಎಸೆತಗಳು ಮಾತ್ರ ಎದುರಾಳಿ ಕೆಕೆಆರ್ ಆಟಗಾರರಿಂದ ಬೌಂಡರಿ ಬಾರಿಸಲ್ಪಟ್ಟಿತ್ತು. ಇಲ್ಲಿ ಕೆಕೆಆರ್ ವಿರುದ್ಧವೇ ಚಾಹರ್ ಅತೀ ಹೆಚ್ಚು ಡಾಟ್ ಎಸೆದು ದಾಖಲೆ ಬರೆದಿದ್ದಾರೆ.

ಅಂತು ಈ ಸಾಧನೆಗಾಗಿ ಚಾಹರ್ ಈಗ ಮೊದಲ ಸ್ಥಾನದಲ್ಲಿದ್ದಾರೆ. 4 ಓವರ್‌ಗಳಲ್ಲಿ ತಲಾ 19 ಡಾಟ್ ಸಾಧನೆಗಾಗಿ ಈ ಹಿಂದೆ ಆಶೀಶ್ ನೆಹ್ರಾ ಮತ್ತು ಮುನಾಫ್ ಪಟೇಲ್ ಗುರುತಿಸಿಕೊಂಡಿದ್ದರು. ನೆಹ್ರಾ ಅವರು ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ 19 ಡಾಟ್ ಎಸೆದು 6 ರನ್‌ಗೆ 1 ವಿಕೆಟ್ ಪಡೆದಿದ್ದರು. ಮುನಾಫ್, ಕೆಕೆಆರ್ ಎದುರು 19 ಡಾಟ್ ಎಸೆದು 14 ರನ್ನಿಗೆ 2 ವಿಕೆಟ್ ಮುರಿದಿದ್ದರು.

Story first published: Wednesday, April 10, 2019, 8:59 [IST]
Other articles published on Apr 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+