For Quick Alerts
ALLOW NOTIFICATIONS  
For Daily Alerts
 

ದೀಪಕ್ ಹೂಡಾ ಮ್ಯಾಚ್ ವಿನ್ನರ್ ಆಗಲು ಗೌತಮ್ ಗಂಭೀರ್ ಕಾರಣ: ವಿಜಯ್ ದಹಿಯಾ

Deepak hooda and GG

ಟೀಂ ಇಂಡಿಯಾ ಯುವ ಸ್ಫೋಟಕ ಬ್ಯಾಟರ್ ದೀಪಕ್ ಹೂಡಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಹೊಸ ಬ್ಯಾಟಿಂಗ್ ಸ್ಟಾರ್ ಆಗಿ ರೂಪುಗೊಂಡಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಡೆದಿದ್ದ ಐರ್ಲೆಂಡ್ ಪ್ರವಾಸದಲ್ಲಿ ದೀಪಕ್ ಹೂಡಾ ಚೊಚ್ಚಲ ಟಿ20 ಶತಕ ಬಾರಿಸಿದ್ದಲ್ಲದೆ, ಪ್ಲೇಯರ್ ಆಫ್ ದಿ ಸೀರೀಸ್‌ನೊಂದಿಗೆ ಹೊರಬಂದರು.

ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಈಗಾಗಲೇ ಹೂಡಾ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಬದಲಿಗೆ ಹೂಡಾ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸಬೇಕೆಂದು ಅನೇಕ ಕ್ರಿಕೆಟ್ ಪಂಡಿತರು ಮತ್ತು ಮಾಜಿ ಆಟಗಾರರು ಒತ್ತಾಯಿಸಿದ್ದಾರೆ. ಈ ಮೂಲಕ ದೀಪಕ್ ಹೂಡ ಸ್ಫೋಟಕ ಇನ್ನಿಂಗ್ಸ್‌ ಜೊತೆಗೆ ಆಫ್ ಸ್ಪಿನ್ನರ್ ಆಗಿ ಬೌಲಿಂಗ್ ಮಾಡುವುದು ಕೂಡ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ದೀಪಕ್ ಹೂಡಾ ಮ್ಯಾಚ್ ವಿನ್ನರ್ ಆಗಿದ್ದು ಹೇಗೆ?

ದೀಪಕ್ ಹೂಡಾ ಮ್ಯಾಚ್ ವಿನ್ನರ್ ಆಗಿದ್ದು ಹೇಗೆ?

ದೀಪಕ್ ಹೂಡಾ ಅವರನ್ನು ಅಂತಹ ಮ್ಯಾಚ್ ವಿನ್ನರ್ ಆಗಿ ಪರಿವರ್ತಿಸಿದ ಸಂಪೂರ್ಣ ಕ್ರೆಡಿಟ್ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ವಿಜಯ್ ದಹಿಯಾ ಹೇಳಿದ್ದಾರೆ. ಹೂಡಾ ಕಳೆದ ಐಪಿಎಲ್ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ಪರ ಮುಖ್ಯ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದು ಅವರ ವೃತ್ತಿಜೀವನದ ಮಹತ್ವದ ತಿರುವು. ಆಟಗಾರನ ಈ ಬೆಳವಣಿಗೆಯ ಹಿಂದೆ ಗಂಭೀರ್ ನೀಡಿದ ಆಳವಾದ ಬೆಂಬಲವಿದೆ ಎಂದು ಲಕ್ನೋದ ಸಹಾಯಕ ಕೋಚ್ ವಿಜಯ್ ದಹಿಯಾ ಬಹಿರಂಗಪಡಿಸಿದ್ದಾರೆ.

ಪ್ರತಿ ಸೀಸನ್‌ನಲ್ಲಿ ತಂಡಕ್ಕಾಗಿ ಆಡುತ್ತೀರಿ ಎಂದು ಭರವಸೆ ನೀಡಿದ್ದರು!

ಪ್ರತಿ ಸೀಸನ್‌ನಲ್ಲಿ ತಂಡಕ್ಕಾಗಿ ಆಡುತ್ತೀರಿ ಎಂದು ಭರವಸೆ ನೀಡಿದ್ದರು!

ಇನ್ನು ಗೌತಿ (ಗೌತಮ್ ಗಂಭೀರ್) ದೀಪಕ್ ಹೂಡಾಗೆ ಏನೇ ಆಗಲಿ, ನೀವು ಋತುವಿನ ಎಲ್ಲಾ ಪಂದ್ಯಗಳಲ್ಲಿ ತಂಡಕ್ಕಾಗಿ ಆಡುತ್ತೀರಿ ಎಂದು ಹೇಳಿದ್ದರು. ಇದನ್ನು ಕೇಳಿದ ದೀಪಕ್‌ ಹೂಡಾಗೆ ಸಂತೋಷದ ಜೊತೆಗೆ ಆಶ್ಚರ್ಯವನ್ನುಂಟು ಮಾಡಿತು. ಈ ಹಿಂದೆ ದೀಪಕ್ ಹೂಡಾಗೆ ಐಪಿಎಲ್‌ನಲ್ಲಿ ಅಂತಹ ಬೆಂಬಲ ಸಿಕ್ಕಿಲ್ಲ ಎಂದು ವಿಜಯ್ ದಹಿಯಾ ಹೇಳಿದ್ದಾರೆ.

ಗಂಭೀರ್ ಬೆಂಬಲದ ನಂತರ, ಹೂಡಾ ತಮ್ಮ ವೃತ್ತಿಜೀವನದಲ್ಲಿ ಹಿಂತಿರುಗಿ ನೋಡಲಿಲ್ಲ. ಭಾರತದ ಜರ್ಸಿಯಲ್ಲಿ ಮಿಂಚಿದ ಹೂಡಾ ಪ್ರತಿ ಪಂದ್ಯದಲ್ಲೂ ರನ್‌ಗಳಿಸುತ್ತಾ ಬಂದಿದ್ದಾರೆ. ಭಾರತ ಪರ ಅಜೇಯ 47, 104, 33 ಮತ್ತು 59 ರನ್ ಸಿಡಿಸಿದ್ದಾರೆ (ಡರ್ಬಿಶೈರ್ ವಿರುದ್ಧ).

ದೀಪಕ್ ಹೂಡ ಕಲಿಯುವ ಹಂಬಲವಿದೆ ಎಂದ ದಹಿಯಾ

ದೀಪಕ್ ಹೂಡ ಕಲಿಯುವ ಹಂಬಲವಿದೆ ಎಂದ ದಹಿಯಾ

ದೀಪಕ್ ಹೂಡಾ ಕೂಡ ಆಟದ ಉತ್ತಮ ವಿದ್ಯಾರ್ಥಿ. ಅವನು ಪ್ರತಿದಿನ ತನ್ನನ್ನು ತಾನು ಸುಧಾರಿಸಿಕೊಳ್ಳಲು ಬಯಸುತ್ತಾನೆ. ದೀಪಕ್ ಒಂದು ಉದ್ದೇಶದಿಂದ ತರಬೇತಿ ಪಡೆಯುತ್ತಿದ್ದಾನೆ. ಅವನಿಗೆ ಆಟದಲ್ಲಿ ಇನ್ನಿಲ್ಲದ ಬಾಯಾರಿಕೆ ಮತ್ತು ಉತ್ಸಾಹವಿದೆ. ಕೆಲವೊಮ್ಮೆ ಅವರು ಹೆಚ್ಚು ತೀವ್ರತೆಯಿಂದ ಆಡುತ್ತಾರೆ. ಈ ಕಾರಣಕ್ಕಾಗಿ ಕೆಲವೊಮ್ಮೆ ದೀಪಕ್‌ಗೆ ಸ್ವಲ್ಪ ಕಡಿಮೆ ಅಗ್ರೆಸ್ಸಿವ್ ಆಗುವಂತೆ ಕೇಳಿದ್ದೆವು ಎನ್ನುತ್ತಾರೆ ವಿಜಯ್ ದಹಿಯಾ.

ಟಿ20 ಫಾರ್ಮೆಟ್‌ನಲ್ಲಿ ಈ ರೀತಿಯ ಆಟದಿಂದ ಒಳ್ಳೆಯದಾಗುವುದಾದರೆ ಅಂತಹ ತೀವ್ರವಾದ ಮನಸ್ಥಿತಿಯೊಂದಿಗೆ ಆಟವಾಡುವುದರಲ್ಲಿ ತಪ್ಪೇನಿಲ್ಲ. ಆದರೆ ನಿರೀಕ್ಷೆಯಂತೆ ಕೆಲಸಗಳು ಆಗದಿದ್ದರೆ ಅದು ದುರಂತ. ಆದರೆ ದೀಪಕ್ ಇದರಿಂದ ಕಲಿಯುತ್ತಾನೆ. ಅವರು ತಮ್ಮ ಕೆಲಸದ ಬಗ್ಗೆ ತುಂಬಾ ಪ್ರಾಮಾಣಿಕರು. ಇವೆಲ್ಲವೂ ಆಟಗಾರನಾಗಿ ದೀಪಕ್ ಅವರ ಬೆಳವಣಿಗೆಯ ಭಾಗವಾಗಿದೆ ಎಂದು ವಿಜಯ್ ದಹಿಯಾ ಸೇರಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ಪರ ದೀಪಕ್ ಹೂಡಾ ಮಿಂಚು

ಲಕ್ನೋ ಸೂಪರ್ ಜೈಂಟ್ಸ್ ಪರ ದೀಪಕ್ ಹೂಡಾ ಮಿಂಚು

ದೀಪಕ್ ಹೂಡಾ ಕಳೆದ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಹಲವು ಉತ್ತಮ ಇನ್ನಿಂಗ್ಸ್ ಆಡಿದ್ದರು. ಋತುವಿನ ಮೊದಲ ಪಂದ್ಯದಿಂದಲೂ, ಅವರು ಬೇರೆ ಯಾವುದೇ ಐಪಿಎಲ್ ಫ್ರಾಂಚೈಸಿ ಪರ ಆಡದ ರೀತಿಯಲ್ಲಿ ವಿಭಿನ್ನ ಆಟಗಾರರಾಗಿದ್ದರು. ಪರಿಸ್ಥಿತಿಗೆ ಅನುಗುಣವಾಗಿ, ಹೂಡಾ ಪ್ರಮುಖ ಬ್ಯಾಟರ್ ಪಾತ್ರ ಮತ್ತು ಆಕ್ರಮಣಕಾರಿ ಬ್ಯಾಟರ್ ಪಾತ್ರ ಎರಡನ್ನೂ ನಿರ್ವಹಿಸಿದ್ದಾರೆ. ಈ ಋತುವಿನಲ್ಲಿ ದೀಪಕ್‌ 451 ರನ್ ಗಳಿಸಿದರು. ತಮ್ಮ ಚೊಚ್ಚಲ ಋತುವಿನಲ್ಲಿ ಲಕ್ನೋವನ್ನು ಪ್ಲೇಆಫ್‌ಗೆ ಕರೆದೊಯ್ಯುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು.

Story first published: Friday, July 22, 2022, 19:30 [IST]
Other articles published on Jul 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+