For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ನಿವೃತ್ತಿ ಘೋಷಿಸಿದ ಭಾರತದ ಆಲ್ ರೌಂಡರ್ ರಜತ್ ಭಾಟಿಯಾ

Delhi all-rounder Rajat Bhatia announces retirement from cricket

ನವದೆಹಲಿ, ಜುಲೈ 29: ದೆಹಲಿ ಕ್ರಿಕೆಟ್ ತಂಡದ ಆಲ್ ರೌಂಡರ್ ರಜತ್ ಭಾಟಿಯಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸುಮಾರು ಎರಡು ದಶಕಗಳ ವೃತ್ತಿ ಬದುಕು ಕಂಡಿದ್ದ ರಜತ್ ಬುಧವಾರ (ಜುಲೈ 29) ವೃತ್ತಿಪರ ಆಟ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.

1999-2000ರಲ್ಲಿ ರಜತ್ ಭಾಟಿಯಾ ತಮಿಳುನಾಡು ತಂಡದ ಪರ ಪ್ರಥಮದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅನಂತರ ಎರಡು ವರ್ಷಗಳ ಬಳಿಕ ಅವರು ತನ್ನ ತವರು ತಂಡ ಡೆಲ್ಲಿಗೆ ಬಂದಿದ್ದರು. ಅಲ್ಲಿಂದ 2015ರ ವರೆಗೂ ಡೆಲ್ಲಿ ತಂಡಕ್ಕಾಗಿ ಆಡಿದ್ದ ರಜತ್ ಮತ್ತೆ ಉತ್ತರಖಂಡ ತಂಡಕ್ಕೆ ಹೋಗಿದ್ದರು.

ಬಲಗೈ ಬ್ಯಾಟ್ಸ್‌ಮನ್, ಬಲಗೈ ಮಧ್ಯಮ ವೇಗಿ ಆಗಿದ್ದ ಭಾಟಿಯಾ ಕಡೇಯ ಪ್ರಥಮದರ್ಜೆ ಪಂದ್ಯ ಆಡಿದ್ದೆಂದರೆ 2019ರಲ್ಲಿ ರಣಜಿ ಟ್ರೋಫಿಯಲ್ಲಿ. 2018-19ರ ರಣಜಿ ಟ್ರೋಫಿ ಸೀಸನ್‌ನಲ್ಲಿ ರಜತ್ 175ರ ಸರಾಸರಿಯಂತೆ 700 ರನ್ ಕಲೆ ಹಾಕಿದ್ದರು. ಭಾಟಿಯಾಗೀಗ 40ರ ಹರೆಯ.

ರಜತ್ ಭಾಟಿಯಾ 112 ಪ್ರಥಮದರ್ಜೆ ಪಂದ್ಯಗಳಲ್ಲಿ 6482 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ. ಪ್ರಥಮದರ್ಜೆಯಲ್ಲಿ 137 ವಿಕೆಟ್ ಕೂಡ ಪಡೆದಿದ್ದಾರೆ. ಇನ್ನು ಲಿಸ್ಟ್ 'ಎ'ನಲ್ಲಿ 3038 ರನ್, 93 ವಿಕೆಟ್‌, 146 ಟಿ20 ಪಂದ್ಯಗಳಲ್ಲಿ 1251 ರನ್, 111 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Wednesday, July 29, 2020, 13:34 [IST]
Other articles published on Jul 29, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+