Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 Points Table: ಡೆಲ್ಲಿ ವಿರುದ್ಧ ಆರ್‍‌ಸಿಬಿ ಸೋತ ಬಳಿಕ ಅಂಕ ಪಟ್ಟಿಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ?

ಈ ಬಾರಿಯ ಐಪಿಎಲ್‌ ರೋಚಕತೆ ಹೆಚ್ಚಿಸುತ್ತಿದೆ. ಎಲ್ಲ ತಂಡಗಳು ಈಗ ಸುಮಾರು 5 ಪಂದ್ಯಗಳನ್ನು ಆಡಿವೆ. ಈ ವೇಳೆ ಅಂಕ ಪಟ್ಟಿಯಲ್ಲಿ ದಿನವೂ ಎರಿಳಿತಗಳು ಕಾಣುತ್ತವೆ. ಒಂದು ತಂಡ ಗೆದ್ದರೆ, ಉಳಿದ ತಂಡಗಳಿಗೂ ಟೆನ್ಷನ್ ಆರಂಭವಾಗುತ್ತದೆ. ಹೀಗಾಗಿ ಎಲ್ಲ ತಂಡಗಳು ತಮ್ಮ ಸ್ಥಿರ ಪ್ರದರ್ಶನದತ್ತ ಚಿತ್ತವನ್ನು ನೆಟ್ಟಿವೆ. ಈ ಬಾರಿಯ ಒಂದು ವಿಶೇಷ ಅಂದರೆ ಟ್ರೋಫಿ ಗೆಲ್ಲದ ಮೂರು ತಂಡಗಳು ಟಾಪ್‌ 4ರಲ್ಲಿ ಕಾಣಿಸಿಕೊಂಡಿವೆ. ಹಾಗಿದ್ದರೆ ಆರ್‍‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದ ಬಳಿಕ ಪಾಯಿಂಟ್ಸ್ ಟೇಬಲ್ ಏನು ಹೇಳುತ್ತೇ ಎಂಬುರ ಬಗ್ಗೆ ವರದಿ ಇಲ್ಲಿದೆ.

ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಬುಟ್ಟಿಯಲ್ಲಿ 8 ಅಂಕಗಳು ಇವೆ. ಇಷ್ಟೇ ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್‌ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ ರನ್‌ ರೇಟ್‌. ಗುಜರಾತ್ 1.413 ರನ್‌ ರೇಟ್‌ ಹೊಂದಿದ್ದರೆ, ಡೆಲ್ಲಿ 1.278 ರನ್‌ ರೇಟ್‌ ಹೊಂದಿದೆ. ತವರಿನಲ್ಲಿ ಆರ್‍‌ಸಿಬಿ ಎರಡನೇ ಸೋಲನ್ನು ಕಂಡರೂ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಆರ್‍‌ಸಿಬಿ ಆಡಿದ 5 ಪಂದ್ಯಗಳಲ್ಲಿ 3 ಜಯ, 2 ಸೋಲು ಕಂಡಿದ್ದು, 6 ಅಂಕಗಳೊಂದಿಗೆ (0.539 ರನ್‌ ರೇಟ್‌) ಮೂರನೆ ಸ್ಥಾನದಲ್ಲಿದೆ.

Delhi Beat RCB as IPL 2025 Points Table Gets More Exciting

ಪಂಜಾಬ್‌ ಕಿಂಗ್ಸ್‌ ಆಡಿದ 4 ಪಂದ್ಯಗಳಲ್ಲಿ 6 ಅಂಕ ಕಲೆ ಹಾಕಿದ್ದು ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್‌ ಕಿಂಗ್ಸ್‌ ತನ್ನ ಐದನೇ ಪಂದ್ಯವನ್ನು ಸನ್‌ ರೈಸರ್‍ಸ್‌ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಪಂಜಾಬ್‌ ಗೆಲುವು ದಾಖಲಿಸಿದರೆ, ಅಂಕ ಪಟ್ಟಿಯಲ್ಲಿ ಆರ್‍‌ಸಿಬಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಸನ್‌ ತಂಡ ಅಬ್ಬರದ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರೆ, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಬಹುದು.

ತಲಾ 2 ಜಯ

ಲಕ್ನೋ ಸೂಪರ್‍‌ ಜೈಂಟ್ಸ್ ಸಹ ಆರು ಅಂಕಗಳನ್ನು ಕಲೆ ಹಾಕಿದ್ದು ಪ್ಲೇ ಆಫ್‌ ಕನಸು ಕಾಣುತ್ತಿದೆ. ಉಳಿದಂತೆ ಕೆಕೆಅರ್‍‌, ರಾಜಸ್ಥಾನ ತಂಡಗಳು ತಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಈ ಎರಡೂ ತಂಡಗಳು ಸಹ ಮುಂದಿನ ಹಂತದ ರೇಸ್‌ನಲ್ಲಿವೆ. ಈ ತಂಡಗಳು ಮುಂದಿನ 9 ಪಂದ್ಯಗಳಲ್ಲಿ 7 ಜಯ ದಾಖಲಿಸುವುದು ಅನಿವಾರ್ಯ. ಆಗಲು ಈ ತಂಡಗಳು ಸುಲಭವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದಿಲ್ಲ. ರನ್‌ ರೇಟ್ ಆಧಾರದಲ್ಲಿ ಈ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.

Delhi Beat RCB as IPL 2025 Points Table Gets More Exciting

ಕಠಿಣ ಹಾದಿ

ಮಾಜಿ ಚಾಂಪಿಯನ್ಸ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಆಡಿರುವ 5 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿವೆ. ಈ ತಂಡಗಳಿಗೆ ಮುಂದಿನ ಹಂತ ತಲುಪುವುದು ಕಷ್ಟವಾಗಲಿದೆ. ಈ ತಂಡಗಳು ಮುಂದಿನ 9 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಈ ವೇಳೆ ರನ್‌ ರೇಟ್‌ ಮೇಲೂ ಗಮನ ವಹಿಸಬೇಕಾಗುತ್ತದೆ. ಅಂದಾಗ ಮಾತ್ರ ಮುಂದಿನ ಹಂತದ ಕನಸು ನನಸಾಗಲಿದೆ.

Story first published: Friday, April 11, 2025, 11:30 [IST]
Other articles published on Apr 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+