ಐಪಿಎಲ್‌ನಿಂದ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಹರ್ಷಲ್ ಪಟೇಲ್

ನವದೆಹಲಿ, ಏಪ್ರಿಲ್ 11: ಡೆಲ್ಲಿ ಕ್ಯಾಪಿಟಲ್ಸ್‌ನ ವೇಗಿ ಹರ್ಷಲ್ ಪಟೇಲ್ ಅವರು ಮುಂಬರಲಿರುವ ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರು ಬಲಗೈಗೆ ಗಾಯ ಮಾಡಿಕೊಂಡಿರುವುದು ಇದಕ್ಕೆ ಕಾರಣ. ಈ ವಿಚಾರವನ್ನು ಡಿಸಿ ಕೋಚ್ ರಿಕಿ ಪಾಂಟಿಂಗ್ ಗುರುವಾರ (ಏಪ್ರಿಲ್ 11) ತಿಳಿಸಿದ್ದಾರೆ.
'ಏಪ್ರಿಲ್ 1ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಹರ್ಷಲ್ ಪಟೇಲ್ ಕೈಗೆ ಗಾಯ ಮಾಡಿಕೊಂಡಿದ್ದರು. ಅವರ ಬಲಗೈ ಮೂಳೆ ಮುರಿದಿದೆ. ಅವರು ಒಂದಿಷ್ಟು ಎಕ್ಸ್ ರೇಗಳಿಗೆ ಒಳಗಾಗಿದ್ದಾರೆ. ಆದರೆ ಪಟೇಲ್ 3-4 ವಾರಗಳ ಕಾಲ ಟೂರ್ನಮೆಂಟ್‌ನಿಂದ ಹೊರಗಿರಬೇಕಾಗಿದೆ' ಎಂದು ರಿಕಿ ಮಾಹಿತಿ ನೀಡಿದ್ದಾರೆ.
ಪಟೇಲ್ ಅವರು 6ರಲ್ಲಿ 2 ಪಂದ್ಯಗಳಲ್ಲಿ ಆಡುವ 11ರಲ್ಲಿ ಡೆಲ್ಲಿ ಪರ ಮೈದಾನಕ್ಕಿಳಿದಿದ್ದರು. ಮಾರ್ಚ್ 30ರ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ 40 ರನ್ನಿಗೆ 2 ವಿಕೆಟ್ ಮುರಿದಿದ್ದರು. ಈ ಪಂದ್ಯ ಸೂಪರ್ ಓವರ್ ಹಂತ ಪ್ರವೇಶಿಸಿತ್ತು. ಆದರೆ ಅಂತಿಮವಾಗಿ ಇದರಲ್ಲಿ ಡೆಲ್ಲಿ ರೋಚಕ ಜಯ ಗಳಿಸಿತ್ತು.
Story first published: Thursday, April 11, 2019, 21:33 [IST]
Other articles published on Apr 11, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications