ಮುಂದಿನ ಐಪಿಎಲ್‌ಗೆ ಈ ಆಟಗಾರರನ್ನು ಕೈ ಬಿಡಲಿದೆ ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ 2020 ಸುಗಮನವಾಗಿ ಮುಗಿದಿದೆ. ಕೊರೊನಾ ನಡುವೆ ಪ್ರಾರಂಭವಾಗಿದ್ದ ಐಪಿಎಲ್ ಟೂರ್ನಿ ಇಷ್ಟು ಯಶಸ್ವಿಯಾಗಿ, ಯಾವುದೇ ಸಮಸ್ಯೆಗಳಿಲ್ಲದೆ ಮುಗಿಯುತ್ತದೆಯೆಂದು ಹಲವರು ಎಣಿಸಿರಲಿಲ್ಲ.
ಐಪಿಎಲ್ 2020 ಮುಗಿಯತ್ತಿದ್ದಂತೆ ಐಪಿಎಲ್ 2021 ಕಡೆ ಎಲ್ಲರ ಚಿತ್ತ ಹರಿದಿದೆ. ಏಕೆಂದರೆ ಐಪಿಎಲ್ 2021 ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಮುಂದಿನ ಐಪಿಎಲ್‌ನ ಹರಾಜು ಪ್ರಕ್ರಿಯೆಯಂತೂ ಮುಂದಿನ ತಿಂಗಳು ಅಥವಾ ಜನವರಿಯಲ್ಲಿ ನಡೆಯಲಿದೆ.
ಈ ಐಪಿಎಲ್‌ನಲ್ಲಿ ಡೆಲ್ಲಿ ತಂಡ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತು, ರನರ್‌ಅಪ್ ಎನಿಸಿಕೊಂಡಿದೆ. ಆದರೆ ಮುಂದಿನ ಐಪಿಎಲ್‌ಗೆ ತಂಡದಲ್ಲಿ ಬದಲಾವಣೆ ಮಾಡಿ ಹೊಸ ಹಹುರುಪಿನೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದ್ದು, ಈಗಿನಿಂದಲೇ ತಯಾರಿ, ಯೋಜನೆ ಆರಂಭಿಸಿದೆ.

ಹಿರಿಯ ಆಟಗಾರರನ್ನು ಕೈಬಿಡಲಿದೆ
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ತಂಡದಿಂದ ಕೆಲವು ಹಿರಿಯ ಹಾಗೂ ಕಿರಿಯ ಆಟಗಾರರನ್ನು ಕೈಬಿಡುವ ಯೋಜನೆಯಲ್ಲಿದೆ. ಅಜಿಂಕ್ಯಾ ರಹಾನೆ, ಪೃಥ್ವಿ ಶಾ, ಆರ್. ಅಶ್ವಿನ್, ಇಶಾಂತ್ ಶರ್ಮಾ, ಡ್ಯಾನಿಯಲ್ ಸ್ಯಾಮ್ಸ್, ಕೀಮೋ ಪೌಲ್ ಅನ್ನು ಡೆಲ್ಲಿ ಕೈಬಿಡಲಿದೆ.

ಕೆಲವು ಆಟಗಾರರನ್ನು ಉಳಿಸಿಕೊಳ್ಳಲಿದೆ
ಕೆಲವು ಕೀ ಪ್ಲೇಯರ್‌ಗಳನ್ನು ಉಳಿಸಿಕೊಳ್ಳಲು ಡೆಲ್ಲಿ ನಿರ್ಧರಿಸಿದ್ದು, ಶಿಖರ್ ಧವನ್, ಶ್ರೇಯಸ್ ಐಯ್ಯರ್, ರಿಶಬ್ ಪಂತ್, ಕಗಿಸೊ ರಬಾಡಾ, ಆನ್ರಿಕ್ ನೋರ್ಟ್ಜೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಓಪನರ್, ಲೆಗ್‌ಸ್ಪಿನ್ನರ್, ವೇಗದ ಬೌಲರ್
ಇನ್ನು ಕೆಲವು ಪ್ರಮುಖ ವಿಭಾಗಗಳಿಗೆ ಶಕ್ತವಾದ ಆಟಗಾರರ ಅವಶ್ಯಕತೆ ಡೆಲ್ಲಿ ತಂಡಕ್ಕೆ ಇದೆ. ಭಾರತೀಯ ವೇಗದ ಬೌಲರ್, ಲೆಗ್ ಸ್ಪಿನ್ನರ್, ಸೆಕೆಂಡ್ ಕೀಪರ್ ಶಿಖರ್ ಧವನ್ ಜೊತೆಗೆ ಸಿಡಿದು ನಿಲ್ಲಬಲ್ಲ ಶಕ್ತ ಓಪನರ್ ಬೇಕಾಗಿದ್ದು, ಇವರಿಗಾಗಿ ಈ ಹರಾಜಿನಲ್ಲಿ ಪ್ರಯತ್ನ ನಡೆಸಲಿದೆ ಡೆಲ್ಲಿ

ಮುಖ್ಯ ಕೋಚ್ ಬದಲಾವಣೆ ಇಲ್ಲ
ಕೋಚ್ ಸ್ಥಾನದಲ್ಲಿರುವ ಪಾಂಟಿಂಗ್ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಇನ್ನು ನಾಯಕತ್ವ ಸಹ ಶ್ರೇಯಸ್ ಐಯ್ಯರ್ ಅವರೇ ಮುಂದುವರೆಸಲಿದ್ದಾರೆ. ಶ್ರೇಯಸ್ ಐಯ್ಯರ್ ನಾಯಕತ್ವ ವಹಿಸಿದ್ದ ಎರಡು ಬಾರಿಯೂ ತಂಡ ಫ್ಲೇ ಆಫ್ಸ್ ತಲುಪಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications