ಮಹತ್ವದ ಪಂದ್ಯದಲ್ಲಿ ಸೋತ ಮುಂಬೈ, ಐಪಿಎಲ್‌ನಿಂದ ಹೊರಕ್ಕೆ

ನವ ದೆಹಲಿ, ಮೇ 20: ಐಪಿಎಲ್ ಪ್ಲೇ ಆಫ್ ತಲುಪಲು ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಸೋತ ಮುಂಬೈ ತನ್ನ ಕಾಲಿಗೆ ತಾನೇ ಕಲ್ಲು ಹಾಕಿಕೊಂಡಿದೆ. ಐಪಿಎಲ್ ಟೂರ್ನಿ ಗೆಲ್ಲುವ ಮುಂಬೈ ಕನಸು ಕಮರಿದೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಮುಂಬೈ ತಂಡವು 11 ರನ್‌ಗಳಿಂದ ಸೋಲನ್ನನುಭವಿಸಿತು. ಈಗಾಗಲೇ ಟೂರ್ನಿಯಿಂದ ಹೊರ ಹೋಗಿರುವ ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಅನ್ನು ಟೂರ್ನಿಯಿಂದ ಹೊರ ಕರೆದೊಯ್ಯಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಅತ್ಯುತ್ತಮ ಆಟವಾಡಿದ ರಿಷಬ್ ಪಂತ್ 64 ರನ್ ಗಳಿಸಿ ಮಿಂಚಿದರು. ವಿಜಯ್ ಶಂಕರ್ 43 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಮುಂಬೈ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕೊನೆಯಲ್ಲಿ ಬೆನ್ ಕಟಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಸ್ವಲ್ಪ ಹೊರಾಟ ತೋರಿದರಾದರೂ 19.3 ಓವರ್‌ಗೆ 163 ರನ್ ಗಳಿಸಿ ಆಲ್‌ಔಟ್ ಆದರು.
Story first published: Sunday, May 20, 2018, 20:12 [IST]
Other articles published on May 20, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications