Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ಡೆಲ್ಲಿ, ಹೈದರಾಬಾದ್‌ಗೆ ಜಯ

Delhi vs Hyderabad, 16th Match - Live Cricket Score

ನವದೆಹಲಿ, ಏಪ್ರಿಲ್ 4: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಗುರುವಾರ (ಏಪ್ರಿಲ್ 4) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್ ಗೆಲುವನ್ನಾಚರಿಸಿದೆ. ಕಳಪೆ ಬ್ಯಾಟಿಂಗ್‌ಗಾಗಿ ಡೆಲ್ಲಿ ಸೋಲಿನ ಬೆಲೆತೆತ್ತಿತು.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಪ್ರಮುಖ ವಿಕೆಟ್‌ಗಳನ್ನೆಲ್ಲಾ ಬೇಗನೆ ಕಳೆದುಕೊಂಡಿತು. ಪೃಥ್ವಿ ಶಾ 11, ಶಿಖರ್ ಧವನ್ 12, ರಿಷಬ್ ಪಂತ್ 5, ಕಾಲಿನ್ ಇಂಗ್ರಾಮ್ 5, ರಾಹುಲ್ ತೆವಾಟಿಯಾ 5, ಕ್ರಿಸ್ ಮೋರೀಸ್ 17, ಅಕ್ಸರ್ ಪಟೇಲ್ ಅಜೇಯ 23 ಸೇರಿಸಿದರು. ಇದರಲ್ಲಿ ಶ್ರೇಯಸ್ ಐಯ್ಯರ್ ಅವರ 43 ರನ್ ಮಾತ್ರ ಗಮನಾರ್ಹವೆನಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಕ್ಲಿಕ್ ಮಾಡಿ

1
45772

ಡೆಲ್ಲಿ ಇನ್ನಿಂಗ್ಸ್‌ ವೇಳೆ ಹೈದರಾಬಾದ್‌ನ ನಾಯಕ ಭುವನೇಶ್ವರ್ ಕುಮಾರ್, ಮೊಹಮ್ಮದ್ ನಬಿ, ಸಿದ್ಧಾರ್ಥ್ ಕೌಲ್ ತಲಾ 2 ವಿಕೆಟ್ ನೊಂದಿಗೆ ಎದುರಾಳಿಯನ್ನು ಕಾಡಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗೆ 8 ವಿಕೆಟ್ ಕಳೆದು 129 ರನ್ ಕಲೆ ಹಾಕಿತು.

130 ರನ್ ಹೈದರಾಬಾದ್ ಪಾಲಿಗೆ ದೊಡ್ಡ ಮೊತ್ತ ಅನ್ನಿಸಲಿಲ್ಲ. ಅದರಲ್ಲೂ ಜಾನಿ ಬೇರ್ಸ್ಟೊವ್ 28 ಎಸೆತಕ್ಕೆ 48 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ಎಳೆದಿದ್ದರು. ಇನ್ನು ಡೇವಿಡ್ ವಾರ್ನರ್, ಮನೀಶ್ ಪಾಂಡೆ, ದೀಪಕ್ ಹೂಡಾ ತಲಾ 10, ಯೂಸೂಪ್ ಪಠಾಣ್ ಅಜೇಯ 9, ಮೊಹಮ್ಮದ್ ನಬಿ ಅಜೇಯ 17 ಕೊಡುಗೆಯಿತ್ತರು.

ಹೈದರಾಬಾದ್ 18.3 ಓವರ್‌ಗೆ 5 ವಿಕೆಟ್ ಕಳೆದು 131 ರನ್ ಗಳಿಸಿತು.

ಸನ್ ರೈಸರ್ಸ್ ಹೈದರಾಬಾದ್ ತಂಡ: ಜಾನಿ ಬೇರ್ಸ್ಟೋವ್ (ವಿಕೆ), ಡೇವಿಡ್ ವಾರ್ನರ್, ವಿಜಯ್ ಶಂಕರ್, ಮನೀಶ್ ಪಾಂಡೆ, ಯೂಸುಫ್ ಪಠಾಣ್, ದೀಪಕ್ ಹೂಡಾ, ರಶೀದ್ ಖಾನ್, ಮೊಹಮ್ಮದ್ ನಬಿ, ಭುವನೇಶ್ವರ್ ಕುಮಾರ್ (ಸಿ), ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಕ್ರಿಸ್ ಮೊರಿಸ್, ಅಕ್ಸರ್ ಪಟೇಲ್, ರಾಹುಲ್ ತೆವಾಟಿಯಾ, ಕಾಗಿಸೊ ರಬಾಡಾ, ಸಂದೀಪ್ ಲಮಿಖಾನೆ, ಇಶಾಂತ್ ಶರ್ಮಾ.

Story first published: Thursday, April 4, 2019, 23:34 [IST]
Other articles published on Apr 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+