For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಎಲಿಮಿನೇಟರ್: ಎಸ್‌ಆರ್‌ಎಚ್ ವಿರುದ್ಧ ಡಿಸಿಗೆ ರೋಚಕ ಗೆಲುವು

Delhi vs Hyderabad, Eliminator - Live Cricket Score

ವಿಶಾಖಪಟ್ಟಣ, ಮೇ 8: ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಮತ್ತು ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ವಿಶಾಖಪಟ್ಟಣದಲ್ಲಿ ಬುಧವಾರ (ಮೇ 8) ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಈ ಜಯದೊಂದಿಗೆ ಡಿಸಿ ಕ್ವಾಲಿಫೈಯರ್-2ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಗಮನಾರ್ಹ ಬ್ಯಾಟಿಂಗ್ ಏನೂ ಪ್ರದರ್ಶಿಸಲಿಲ್ಲ. ಆದರೆ ಮಾರ್ಟಿನ್ ಗಪ್ಟಿಲ್ 36, ಮನೀಷ್ ಪಾಂಡೆ 30, ಕೇನ್ ವಿಲಿಯಮ್ಸನ್ 28, ವಿಜಯ್ ಶಂಕರ್ 25, ಮೊಹಮ್ಮದ್ ನಬಿ 20 ರನ್‌ ಕೊಡುಗೆಯೊಂದಿಗೆ 160 ರನ್ ಗೆರೆ ದಾಟುವಲ್ಲಿ ಯಶಸ್ವಿಯಾಯ್ತು.

ಪಂದ್ಯದ Live Scorecard ಕೆಳಗಿದೆ

1
45947

20 ಓವರ್‌ಗೆ ಸನ್ ರೈಸರ್ಸ್ 8 ವಿಕೆಟ್ ಕಳೆದು 162 ರನ್ ಬಾರಿಸಿತು. ಡೆಲ್ಲಿ ತಂಡ ಮಾರಕ ಬೌಲಿಂಗ್ ದಾಳಿ ಬಲಿಷ್ಠ ಹೈದರಾಬಾದನ್ನು ಹೆಚ್ಚು ರನ್ ಮಾಡದಂತೆ ತಡೆದಿದ್ದು ಸುಳ್ಳಲ್ಲ. ಕೀಮೋ ಪೌಲ್ 32 ರನ್‌ಗೆ 3, ಇಶಾಂತ್ ಶರ್ಮಾ 34 ರನ್‌ಗೆ 2 ವಿಕೆಟ್ ಕೆಡವಿ ಎಸ್‌ಆರ್‌ಎಚ್ ರನ್ ಕದಿಯುವಿಕೆಗೆ ಬ್ರೇಕ್ ಹಾಕಿದರು.

ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಿಖರ್ ಧವನ್ ಮತ್ತು ಪೃಥ್ವಿ ಶಾ ಉತ್ತಮ ಜೊತೆಯಾಟ ನೀಡಿದರು. ಮೊದಲ ವಿಕೆಟ್ ಪತನಗೊಳ್ಳುವ ವೇಳೆಗೆ ಡೆಲ್ಲಿ 66 ರನ್ ಗಳಿಸಿತ್ತು. ಶಾ 56 (38 ಎಸೆತ), ಧವನ್ 17, ಪಂತ್ 49 (21 ಎಸೆತ), ಕಾಲಿನ್ ಮುನ್ರೋ 14 ರನ್ ನೆರವಿನೊಂದಿಗೆ ಡಿಸಿ 19.5 ಓವರ್‌ಗೆ 165 ರನ್ ಮಾಡಿತು.

ಕೊನೇ ಓವರ್‌ನಲ್ಲಿ ಇತ್ತಂಡಗಳ ಕಾದಾಟ ರೋಚಕ ಹಂತಕ್ಕೆ ತಲುಪಿತ್ತು. ಅಂತಿಮ 2 ಎಸೆತಗಳಿಗೆ ಡೆಲ್ಲಿ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು. ಕೀಮೋ ಪೌಲ್ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು. ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಭುನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್ ಮತ್ತು ರಶೀದ್ ಖಾನ್ ತಲಾ 2 ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ ಪ್ರಶಸ್ತಿ ರಿಷಬ್ ಪಂತ್ ಪಡೆದುಕೊಂಡರು. ಡೆಲ್ಲಿ ತಂಡ ಕ್ವಾಲಿಫೈಯರ್ ಎರಡರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲು ಸ್ವೀಕರಿಸಲಿದೆ. ಇಲ್ಲಿ ಸೋತ ಸನ್ ರೈಸರ್ಸ್ ಹೈದರಾಬಾದ್‌ಗೆ 4ನೇ ಸ್ಥಾನ ಲಭಿಸಲಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ: ವೃದ್ಧಿಮಾನ್ ಸಾಹ (W), ಮಾರ್ಟಿನ್ ಗಪ್ಟಿಲ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ (ಸಿ), ವಿಜಯ್ ಶಂಕರ್, ಮೊಹಮ್ಮದ್ ನಬಿ, ದೀಪಕ್ ಹೂಡಾ, ರಶೀದ್ ಖಾನ್, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹ್ಮದ್, ಬಸಿಲ್ ತಂಪಿ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಕಾಲಿನ್ ಮುನ್ರೋ, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಶೆರ್ಫೇನ್ ರುದರ್ಫೋರ್ಡ್, ಅಕ್ಸರ್ ಪಟೇಲ್, ಕೀಮೋ ಪಾಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಟ್ರೆಂಟ್ ಬೌಲ್ಟ್.

Story first published: Wednesday, May 8, 2019, 23:48 [IST]
Other articles published on May 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+