For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಶಾ ಬ್ಯಾಟಿಂಗ್ ಸೊಗಸು, ಪಂದ್ಯ ಟೈ, ಡೆಲ್ಲಿಗೆ ಸೂಪರ್ ಗೆಲುವು!

Delhi vs Kolkata, 10th Match - Live Cricket Score

ನವದೆಹಲಿ, ಮಾರ್ಚ್ 30: ನವದೆಹಲಿಯ ಫಿರೋಜಾ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 30) ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯ ಸಮಬಲಗೊಂಡಿದೆ. ಆಕರ್ಷಕ ಬ್ಯಾಟಿಂಗ್ ನಡೆಸಿದ ಡೆಲ್ಲಿ ಬ್ಯಾಟ್ಸ್ಮನ್ ಪೃಥ್ವಿ ಶಾ (99) ಐಪಿಎಲ್ 2019ರ 2ನೇ ಶತಕದ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು. ಆದರೆ ಸೂಪರ್ ಓವರ್‌ನಲ್ಲಿ ಡಿಸಿ 3 ರನ್ ರೋಚಕ ಗೆಲುವು ಸಂಭ್ರಮಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ, ನಿಖಿಲ್ ನಾಯ್ಕ್ 7, ಕ್ರಿಸ್ ಲಿನ್ 20, ನಿತೀಶ್ ರಾಣ 1, ಶುಭ್ ಮಾನ್ ಗಿಲ್ 4, ರಾಬಿನ್ ಉತ್ತಪ್ಪ 11, ಆ್ಯಂಡ್ರೆ ರಸೆಲ್ 62, ನಾಯಕ ದಿನೇಶ್ ಕಾರ್ತಿಕ್ 50, ಪೀಯೂಷ್ ಚಾವ್ಲಾ 12, ಕುಲದೀಪ್ ಯಾದವ್ 10 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 185 ರನ್ ಪೇರಿಸಿತು.

ಸ್ಕೋರ್‌ಕಾರ್ಡ್‌ಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ

1
45766

ಕೆಕೆಆರ್ ನೀಡಿದ 186 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಆರಂಭಿಕ ಆಟಗಾರ ಶಿಖರ್ ಧವನ್ 16, ಪೃಥ್ವಿ ಶಾ 99 (55 ಎಸೆತ), ನಾಯಕ ಶ್ರೇಯಸ್ ಐಯ್ಯರ್ 43 (32 ಎಸೆತ), ರಿಷಬ್ ಪಂತ್ 11 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 185 ರನ್ ಬಾರಿಸಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ನಷ್ಟದೊಂದಿಗೆ 10 ರನ್ ಗಳಿಸಲಷ್ಟೇ ಶಕ್ತವಾಯ್ತು. 6 ಎಸೆತಕ್ಕೆ 11 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ 1 ವಿಕೆಟ್ ನಷ್ಟದೊಂದಿಗೆ 7 ರನ್ ಗಳಿಸಿತು. ಅಂತಿಮ ಓವರ್‌ನಲ್ಲಿ ಕೋಲ್ಕತ್ತಾದ ರಸೆಲ್ ವಿಕೆಟ್ ಮುರಿದ ಕಾಗಿಸೋ ರಬಾಡ ಪಂದ್ಯದ ಹೀರೋ ಅನ್ನಿಸಿದರು. ಪೃಥ್ವಿ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ನಿತೀಶ್ ರಾಣಾ, ರಾಬಿನ್ ಉತ್ತಪ್ಪ, ನಿಖಿಲ್ ನಾಯ್ಕ್, ದಿನೇಶ್ ಕಾರ್ತಿಕ್ (ಸಿ & ವಿ.ಕೆ), ಶುಭ್‌ಮಾನ್ ಗಿಲ್, ಆಂಡ್ರೆ ರಸ್ಸೆಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಲಾಕೀ ಫರ್ಗುಸನ್, ಪ್ರಶಿಶ್ ಕೃಷ್ಣ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಹನುಮ ವಿಹಾರಿ, ಕ್ರಿಸ್ ಮೊರಿಸ್, ಸಂದೀಪ್ ಲಮಿಖಾನೆ, ಕಗಿಸೊ ರಾಬಾಡಾ, ಹರ್ಷಲ್ ಪಟೇಲ್, ಅಮಿತ್ ಮಿಶ್ರಾ.

Story first published: Sunday, March 31, 2019, 0:51 [IST]
Other articles published on Mar 31, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+