Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ಬಲಿಯಾದ ಡೆಲ್ಲಿ ಕ್ಯಾಪಿಟಲ್ಸ್

Delhi vs Mumbai, 34th Match - Live Cricket Score

ನವದೆಹಲಿ, ಏಪ್ರಿಲ್ 18: ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗುರುವಾರ (ಏಪ್ರಿಲ್ 18) ನಡೆದ ಐಪಿಎಲ್ 34ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 40 ರನ್ ಗೆಲುವನ್ನಾಚರಿಸಿದೆ. ಮುಂಬೈ ಬೌಲಿಂಗ್ ದಾಳಿಗೆ ಸಿಲುಕಿದ ಡೆಲ್ಲಿ ಸೋಲಿಗೆ ಶರಣಾಯಿತು. ಈ ಗೆಲುವಿನೊಂದಿಗೆ ಎಂಐ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ 30, ಕ್ವಿಂಟನ್ ಡಿ ಕಾಕ್ 35, ಸೂರ್ಯಕುಮಾರ್ ಯಾದವ್ 26, ಕೃನಾಲ್ ಪಾಂಡ್ಯ ಅಜೇಯ 37, ಹಾರ್ದಿಕ್ ಪಾಂಡ್ಯ 32 (15 ಎಸೆತ) ರನ್ ಸೇರಿಸಿದರು. ಮುಂಬೈ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 168 ರನ್ ಬಾರಿಸಿತು.

1
45910

ಗುರಿ ಬೆನ್ನತ್ತಿದ್ದ ಡೆಲ್ಲಿ ಪರ ಕೊಂಚ ಗಮನಾರ್ಹ ರನ್ ಸೇರಿಸಿದ್ದು ಶಿಖರ್ ಧವನ್ ಮಾತ್ರ. ಧವನ್ 35 ಸೇರಿಸಿದರೆ, ಪೃಥ್ವಿ ಶಾ 20, ಅಕ್ಸರ್ ಪಟೇಲ್ ರನ್ 26 ರನ್ ಬಾರಿಸಿದ್ದೇ ಹೆಚ್ಚೆನಿಸಿತು. ಡೆಲ್ಲಿ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 128 ರನ್ ಬಾರಿಸಿತು.

ಮುಂಬೈ ಇನ್ನಿಂಗ್ಸ್‌ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೋ ರಬಾಡಾ 2 ವಿಕೆಟ್ ಪಡೆಯುವ ಮೂಲಕ ರನ್ ಕದಿಯುವಿಕೆಗೆ ತಡೆಯೊಡ್ಡಿದ್ದರು. ಡೆಲ್ಲಿ ಇನ್ನಿಂಗ್ಸ್ ವೇಳೆ ಮುಂಬೈಯ ರಾಹುಲ್ ಚಾಹರ್ 19 ರನ್‌ಗೆ 3 ವಿಕೆಟ್, ಜಸ್‌ಪ್ರೀತ್ ಬೂಮ್ರಾ 18 ರನ್‌ಗೆ 2 ವಿಕೆಟ್ ಕೆಡವಿ ಮಿಂಚಿದರು.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ರಾಹುಲ್ ಚಾಹರ್, ಬೆನ್ ಕಟಿಂಗ್, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಕಾಲಿನ್ ಮುನ್ರೋ, ಶ್ರೇಯಸ್ ಐಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಅಕ್ಸರ್ ಪಟೇಲ್, ಕ್ರಿಸ್ ಮೋರಿಸ್, ಕೀಮೊ ಪಾಲ್, ಕಾಗಿಸೊ ರಬಾಡಾ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ.

Story first published: Thursday, April 18, 2019, 23:44 [IST]
Other articles published on Apr 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+